ಇಂಗ್ಲೆಂಡ್​ನಲ್ಲಿ 592 ಕೋಟಿಯ ಬಂಗಲೆ ಖರೀದಿಸಿದ ಮುಖೇಶ್ ಅಂಬಾನಿ; ಏನಿದರ ವಿಶೇಷತೆ?

ಲಂಡನ್​ನ ಬಕಿಂಗ್‌ ಹ್ಯಾಮ್‌ಶೈರ್‌ನಲ್ಲಿ ಸ್ಟೋಕ್ ಪಾರ್ಕ್‌ ಅನ್ನು ಮುಖೇಶ್ ಅಂಬಾನಿ ಕುಟುಂಬವು 592 ಕೋಟಿ ರೂಪಾಯಿಗೆ ಖರೀದಿಸಿದೆ. ಇದು 300 ಎಕರೆ ವಿಶಾಲವಾದ ಕಂಟ್ರಿ ಕ್ಲಬ್ ಆಗಿದೆ ಎಂದು ಮೂಲಗಳು ತಿಳಿಸಿವೆ.

ಇಂಗ್ಲೆಂಡ್​ನಲ್ಲಿ 592 ಕೋಟಿಯ ಬಂಗಲೆ ಖರೀದಿಸಿದ ಮುಖೇಶ್ ಅಂಬಾನಿ; ಏನಿದರ ವಿಶೇಷತೆ?
ಮುಖೇಶ್ ಅಂಬಾನಿ
Follow us
S Chandramohan
| Updated By: ಸುಷ್ಮಾ ಚಕ್ರೆ

Updated on:Nov 04, 2021 | 8:14 PM

ಮುಂಬೈ: ಭಾರತದ ನಂಬರ್ ಒನ್ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ (Mukesh Ambani) ಈಗ ಇಂಗ್ಲೆಂಡ್‌ನಲ್ಲಿ ವಿಶಾಲವಾದ ಮನೆಯನ್ನು ಖರೀದಿಸಿದ್ದಾರೆ. ಮುಂಬೈನಲ್ಲಿ ಎತ್ತರವಾದ ಅಂಟಿಲಿಯಾ ನಿವಾಸದಲ್ಲಿ ವಾಸ ಇದ್ದ ಮುಖೇಶ್ ಅಂಬಾನಿ ಕುಟುಂಬಕ್ಕೆ ಕೊರೊನಾ ಹಾಗೂ ಲಾಕ್​ಡೌನ್ ಸಮಯದಲ್ಲಿ ವಿಶಾಲವಾದ ಜಾಗದಲ್ಲಿರುವ ಮನೆಯ ಅಗತ್ಯತೆ ಇದೆ ಎಂದು ಅನ್ನಿಸಿದೆ. ಹೀಗಾಗಿ, ಇಂಗ್ಲೆಂಡ್‌ನ ಬಕಿಂಗ್ ಹ್ಯಾಮ್ ಶೈರ್ ನಲ್ಲಿರುವ ಸ್ಟೋಕ್ ಪಾರ್ಕ್ ಅನ್ನು ಮುಖೇಶ್ ಅಂಬಾನಿ ಖರೀದಿಸಿದ್ದಾರೆ. ಮುಖೇಶ್ ಅಂಬಾನಿ ಕುಟುಂಬ ಖರೀದಿಸಿರುವ ಹೊಸ ಮನೆಯ ವಿಶೇಷತೆಗಳೇನು? ಇಲ್ಲಿದೆ ಮಾಹಿತಿ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬ ಭವಿಷ್ಯದಲ್ಲಿ ಲಂಡನ್ ಮತ್ತು ಮುಂಬೈ ನಡುವೆ ತಮ್ಮ ಸಮಯವನ್ನು ಕಳೆಯಲಿದ್ದಾರೆ. ಮುಖೇಶ್ ಅಂಬಾನಿ ಕುಟುಂಬವು ಲಂಡನ್​ನಲ್ಲಿ ಭವ್ಯವಾದ 49 ಕೊಠಡಿಗಳ ಮನೆಯನ್ನು ಖರೀದಿಸಿದ್ದಾರೆ. ಇನ್ನೂ ಮುಂದೆ 49 ಮಲಗುವ ಕೋಣೆಗಳ ಲಂಡನ್ ಆಸ್ತಿ ಮತ್ತು ಮುಖೇಶ್ ಅಂಬಾನಿ ಅವರ ಮುಂಬೈನ ಆಲ್ಟಮೌಂಟ್ ರಸ್ತೆಯ ಅಂಟಿಲಿಯಾ ನಿವಾಸಗಳೆರಡರಲ್ಲೂ ಮುಖೇಶ್ ಅಂಬಾನಿ ಕುಟುಂಬ ವಾಸಿಸಲಿದೆ. ಈ ವರ್ಷದ ಆರಂಭದಲ್ಲಿ ಲಂಡನ್​ನ ಬಕಿಂಗ್‌ ಹ್ಯಾಮ್‌ಶೈರ್‌ನಲ್ಲಿ ಸ್ಟೋಕ್ ಪಾರ್ಕ್‌ ಅನ್ನು ಮುಖೇಶ್ ಅಂಬಾನಿ ಕುಟುಂಬವು 592 ಕೋಟಿ ರೂಪಾಯಿಗೆ ಖರೀದಿಸಿದೆ. ಇದು 300 ಎಕರೆ ವಿಶಾಲವಾದ ಕಂಟ್ರಿ ಕ್ಲಬ್ ಆಗಿದೆ ಎಂದು ಮೂಲಗಳು ತಿಳಿಸಿವೆ.

ಲಂಡನ್ ಮನೆಯಲ್ಲಿ ಇತ್ತೀಚೆಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯವನ್ನು ಸಹ ಸ್ಥಾಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 4,00,000 ಚದರ ಅಡಿ ವಿಸ್ತೀರ್ಣದ ಅಲ್ಟಮೌಂಟ್ ರಸ್ತೆಯ ನಿವಾಸ, ಆಂಟಿಲಿಯಾದಲ್ಲಿ ಕೊರೊನಾ ಹಾಗೂ ಲಾಕ್ ಡೌನ್ ವೇಳೆ ಕಳೆದ ಅನುಭವವು ಮುಖೇಶ್ ಅಂಬಾನಿ ಕುಟುಂಬಕ್ಕೆ ವಿಶಾಲವಾದ ಮನೆ ಖರೀದಿಸುವಂತೆ ಮಾಡಿದೆ ಎಂದು ಆಪ್ತರು ಹೇಳಿದ್ದಾರೆ. ಲಾಕ್​ಡೌನ್ ವೇಳೆ ಮುಖೇಶ್ ಅಂಬಾನಿ ಕುಟುಂಬಕ್ಕೆ ಎರಡನೇ ಮನೆಯ ಅಗತ್ಯತೆ ಇದೆ ಎಂಬ ಅನುಭವ ಉಂಟಾಗಿದೆ. ಲಾಕ್‌ಡೌನ್‌ ಸಮಯದಲ್ಲಿ ಮುಖೇಶ್ ಅಂಬಾನಿ ಕುಟುಂಬವು ಗುಜರಾತ್‌ ರಾಜ್ಯದ ಜಾಮ್‌ನಗರದಲ್ಲಿ ಸಾಕಷ್ಟು ಸಮಯವನ್ನು ಕಳೆದರು. ಜಾಮ್ ನಗರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ವಿಶ್ವದ ಅತಿದೊಡ್ಡದಾದ ತೈಲ ಸಂಸ್ಕರಣಾಗಾರವನ್ನು ಹೊಂದಿದೆ.

ಮುಖೇಶ್ ಅಂಬಾನಿ ಕುಟುಂಬ ಮುಕ್ತ ಹಾಗೂ ವಿಶಾಲವಾದ ಜಾಗದಲ್ಲಿರುವ ಮನೆಯನ್ನು ಬಯಸಿದ್ದರು ಮತ್ತು ಮುಂಬೈನಲ್ಲಿರುವಂತೆ ಎತ್ತರವಾದ ಕಟ್ಟಡವನ್ನಲ್ಲ ಎಂದು ಮೂಲವೊಂದು ಹೇಳಿದೆ. ಹೊಸ ನಿವಾಸಕ್ಕಾಗಿ ಹುಡುಕಾಟವು ಕಳೆದ ವರ್ಷ ಪ್ರಾರಂಭವಾಯಿತು. ಸ್ಟೋಕ್ ಪಾರ್ಕ್ ಒಪ್ಪಂದವನ್ನು ಅಂತಿಮಗೊಳಿಸಿದ ನಂತರ, ಕುಟುಂಬದ ಅಗತ್ಯತೆಗಳಿಗೆ ಅನುಗುಣವಾಗಿ ಅದನ್ನು ಸಿದ್ಧಪಡಿಸುವ ಕೆಲಸ ಆಗಸ್ಟ್‌ನಲ್ಲಿ ಪ್ರಾರಂಭವಾಗಿದೆ. ಮುಖೇಶ್ ಅಂಬಾನಿ ಕುಟುಂಬವು ದೀಪಾವಳಿಯನ್ನು ಸಾಮಾನ್ಯವಾಗಿ ಮುಂಬೈನ ತಮ್ಮ ಮನೆಯಲ್ಲಿ ಬಹಳ ಸಡಗರದಿಂದ ಆಚರಿಸುತ್ತಿತ್ತು. ಆದರೆ ಈ ವರ್ಷ ದೇಶದಿಂದ ಹೊರಗೆ ಆಚರಿಸುತ್ತಿದೆ.

ಅಂಬಾನಿ ಕುಟುಂಬವು ತಮ್ಮ ಹೊಸ ನಿವಾಸದಲ್ಲಿ ತಮ್ಮ ಮೊದಲ ದೀಪಾವಳಿಯನ್ನು ಆಚರಿಸಿದ್ದಾರೆ. ನಂತರ ಅವರು ಮುಂಬೈಗೆ ಹಿಂತಿರುಗುತ್ತಾರೆ. ಅವರು ಮುಂದಿನ ಏಪ್ರಿಲ್‌ನಲ್ಲಿ ಲಂಡನ್​ಗೆ ಮರಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಮುಖೇಶ್ ಅಂಬಾನಿ ಕುಟುಂಬವು ಲಂಡನ್ ಮನೆಯಲ್ಲಿ ದೇವಸ್ಥಾನವನ್ನು ನಿರ್ಮಿಸಿದೆ. ಮುಂಬೈನಿಂದ ಇಬ್ಬರು ಅರ್ಚಕರನ್ನು ಕರೆದೊಯ್ಯುವ ನಿರೀಕ್ಷೆಯಿದೆ. ದೇಗುಲದ ವಿನ್ಯಾಸವು ಅವರ ಮುಂಬೈನ ಮನೆ ಮತ್ತು ವಿವಿಧ ಭಾರತೀಯ ವಿನ್ಯಾಸವನ್ನು ಹೋಲುತ್ತದೆ. ಗಣೇಶ, ರಾಧಾ-ಕೃಷ್ಣ ಮತ್ತು ಹನುಮಂತನ ಅಮೃತಶಿಲೆಯ ಶಿಲ್ಪಗಳನ್ನು ರಾಜಸ್ಥಾನದ ಶಿಲ್ಪಿಯಿಂದ ಕೆತ್ತಿಸಿ ಲಂಡನ್​ಗೆ ತರಿಸಿಕೊಳ್ಳಲಾಗಿದೆ.

ಕಳೆದ ಎರಡೂವರೆ ತಿಂಗಳಿನಿಂದ ಮುಖೇಶ್ ಅಂಬಾನಿ ಕುಟುಂಬವು ಮುಂಬೈನ ಮನೆಯಲ್ಲಿ ಇಲ್ಲದೇ ಇದ್ದ ಕಾರಣದಿಂದ ಹೆಚ್ಚಿನ ಊಹಾಪೋಹಗಳು ಇದ್ದವು. ಆದರೆ, ಮುಖೇಶ್ ಅಂಬಾನಿ ಕುಟುಂಬದ ಆಪ್ತ ಮೂಲವೊಂದು ಎಲ್ಲವೂ ಚೆನ್ನಾಗಿದೆ ಮತ್ತು ಕುಟುಂಬವು ಹೊಸ ಮನೆಯನ್ನು ಮರು ವಿನ್ಯಾಸದಲ್ಲಿ ನಿರತವಾಗಿದೆ ಎಂದು ದೃಢಪಡಿಸಿದೆ.

ಏಪ್ರಿಲ್‌ನಲ್ಲಿ ಖರೀದಿಯನ್ನು ವರದಿ ಮಾಡುತ್ತಾ, ಈ ಆಸ್ತಿಯು 1908ರವರೆಗೆ ಖಾಸಗಿ ನಿವಾಸವಾಗಿತ್ತು. ನಂತರ ಅದನ್ನು ಕಂಟ್ರಿ ಕ್ಲಬ್ ಆಗಿ ಪರಿವರ್ತಿಸಲಾಯಿತು ಎಂದು ಹೇಳಿದೆ. ಆಸ್ತಿಯು ಐಷಾರಾಮಿ ಹೋಟೆಲ್ ಮತ್ತು ಗಾಲ್ಫ್ ಕೋರ್ಸ್ ಅನ್ನು ಹೊಂದಿದೆ. ಎರಡು ಜೇಮ್ಸ್ ಬಾಂಡ್ ಚಿತ್ರಗಳನ್ನು ಈ ಮನೆಯಲ್ಲಿ ಚಿತ್ರೀಕರಿಸಲಾಗಿದೆ ಎಂದು ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿದೆ.

ಪ್ರಪಂಚದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿ ಮನೆಯಲ್ಲಿ ಎಲ್ಲವನ್ನೂ ಹೊಂದಿದ್ದರೂ, ಲಂಡನ್ ಮನೆಯಲ್ಲಿ ವೈದ್ಯಕೀಯ ಸೌಲಭ್ಯ ಇರಲಿಲ್ಲ. ಹೀಗಾಗಿ, ರಿಲಯನ್ಸ್ ಸಮೂಹದ ಮಾಲೀಕತ್ವದ ಸರ್ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ತಂಡ ಮತ್ತು ಆಸ್ಪತ್ರೆಯ ಸಿಇಒ ನೇತೃತ್ವದಲ್ಲಿ ತಂಡವನ್ನು ಆಗಸ್ಟ್ ಅಂತ್ಯದ ವೇಳೆಗೆ ಲಂಡನ್ ಮನೆಗೆ ಕಳುಹಿಸಲಾಗಿತ್ತು. ಈ ವೈದ್ಯಕೀಯ ತಂಡವು ಇತ್ತೀಚೆಗೆ ಮನೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಕೇಂದ್ರವನ್ನು ಸ್ಥಾಪಿಸುವುದನ್ನು ಪೂರ್ಣಗೊಳಿಸಿದೆ. ಅದರ ಮುಖ್ಯ ವೈದ್ಯರಾಗಿ ಬ್ರಿಟಿಷ್ ವೈದ್ಯರನ್ನು ನೇಮಿಸಲಾಗಿದೆ.

“ಖಾಸಗಿ ಆಸ್ಪತ್ರೆಗಳ ಬಗ್ಗೆ ಭಾರತದಲ್ಲಿ ಒಲವು ತೋರಲಾಗುತ್ತದೆ. ಆದರೆ, ಇಂಗ್ಲೆಂಡ್​ನಲ್ಲಿ ಈ ರೀತಿಯ ವ್ಯವಸ್ಥೆ ಇಲ್ಲ. ಹೀಗಾಗಿ ಮನೆಯ ಆವರಣದೊಳಗೆ ಮಿನಿ ಆಸ್ಪತ್ರೆಯಂತಿರುವ ವೈದ್ಯಕೀಯ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಲಾಯಿತು’ ಎಂದು ತಂಡದಲ್ಲಿದ್ದ ವೈದ್ಯರೊಬ್ಬರು ತಿಳಿಸಿದ್ದಾರೆ.

ಕೇಂದ್ರಕ್ಕೆ ವೈದ್ಯಕೀಯ ತಂಡವನ್ನು ನೇಮಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ ಮೂಲವೊಂದು ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳು ಮತ್ತು ಇತರ ಆರೋಗ್ಯ-ಸಂಬಂಧಿತ ಪ್ರೋಟೋಕಾಲ್‌ಗಳನ್ನು ನೋಡಿಕೊಳ್ಳಲು ಬ್ರಿಟಿಷ್ ವೈದ್ಯರನ್ನು ನೇಮಿಸಲಾಗಿದೆ ಎಂದು ಹೇಳಿದರು.

“ವೈದ್ಯರು ಅರವಳಿಕೆ ತಜ್ಞರಾಗಿದ್ದಾರೆ ಮತ್ತು ಮಕ್ಕಳ ತೀವ್ರ ನಿಗಾ ಮತ್ತು ಟ್ರಾಮ್ ಸೆಂಟರ್ ನಿರ್ವಹಣೆಯಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ” ಎಂದು ಮೂಲವು ತಿಳಿಸಿದೆ. “ಅವರು ಯುಕೆಯಲ್ಲಿ ಬಹಳ ಸಮಯದಿಂದ ಕೆಲಸ ಮಾಡುತ್ತಿರುವುದರಿಂದ, ಸ್ಥಳೀಯ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ವೈದ್ಯಕೀಯ ಪ್ರೋಟೋಕಾಲ್‌ಗಳನ್ನು ಸುವ್ಯವಸ್ಥಿತಗೊಳಿಸಲು ಅವರು ಸಹಾಯಕವಾಗುತ್ತಾರೆ. ಓರ್ವ ಫಿಸಿಯೋ ಥೆರಪಿಸ್ಟ್ ಅನ್ನು ಸಹ ನೇಮಿಸಲಾಗಿದೆ.

ಮೂಲಗಳ ಪ್ರಕಾರ, ಮುಖೇಶ್ ಅಂಬಾನಿ ಕುಟುಂಬವು ಇಂಗ್ಲೆಂಡ್​ನಲ್ಲಿ ಆಸ್ಪತ್ರೆ ಖರೀದಿಯ ಮತ್ತೊಂದು ಒಪ್ಪಂದವನ್ನು ಅಂತಿಮಗೊಳಿಸುವ ಹಂತದಲ್ಲಿದೆ. ಅವರು ಮನೆಯನ್ನು ಖರೀದಿಸಿದ ನಂತರ, ಅವರ ತಂಡವು ಅಲ್ಲಿ ಆಸ್ಪತ್ರೆಯನ್ನು ಖರೀದಿಸಲು ನೋಡುತ್ತಿದೆ. ತಂಡವು ಎರಡು ಖಾಸಗಿ ಆಸ್ಪತ್ರೆಗಳನ್ನು ಖರೀದಿಗೆ ಈಗಾಗಲೇ ಗುರುತಿಸಿದೆ. ಅವುಗಳಲ್ಲಿ ಒಂದು ದೊಡ್ಡ ಆಸ್ಪತ್ರೆ ಮತ್ತು ಇನ್ನೊಂದು ನಿರ್ಮಾಣ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Channapatna toys: ಅಂಬಾನಿಯ ರಿಲಯನ್ಸ್ ಸಹಭಾಗಿ ಸಂಸ್ಥೆಯ ನೆರವು, ಚನ್ನಪಟ್ಟಣದ ಬೊಂಬೆಗಳು ಸಿಂಗಾಪೂರಕ್ಕೆ ರಫ್ತು

$ 100 billion club: $ 100 ಬಿಲಿಯನ್​​ ಕ್ಲಬ್​ಗೆ ರಿಲಯನ್ಸ್ ಅಧ್ಯಕ್ಷ ಮುಕೇಶ್​ ಅಂಬಾನಿ ಎಂಟ್ರಿ

Published On - 8:12 pm, Thu, 4 November 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್