
ನವದೆಹಲಿ, ಜುಲೈ 4: ಅಮೆರಿಕದ (USA) ಐತಿಹಾಸಿಕ 250ನೇ ಸ್ವಾತಂತ್ರ್ಯ ದಿನೋತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಲ್ಲಿನ ನಾಗರಿಕರಿಗೆ ಭಾರತದ 140 ಕೋಟಿ ಜನರ ಪರವಾಗಿ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. ಭಾರತ-ಅಮೆರಿಕ ದೇಶಗಳ ಈ ಗಾಢ ಸ್ನೇಹವು ಜಾಗತಿಕ ಒಳಿತಿಗಾಗಿ ಕೆಲಸ ಮಾಡುವ ಒಂದು ದೊಡ್ಡ ಶಕ್ತಿಯಾಗಿದೆ ಎಂದು ಮೋದಿ ಬಣ್ಣಿಸಿದ್ದಾರೆ.
ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಭಾರತ ಮತ್ತು ಅಮೆರಿಕ ಕೇವಲ ಕಾರ್ಯತಂತ್ರದ ಪಾಲುದಾರಿಕೆಯನ್ನಷ್ಟೇ ಹೊಂದಿಲ್ಲ, ಬದಲಿಗೆ ಪ್ರಜಾಪ್ರಭುತ್ವ, ಕಾನೂನಿನ ಆಡಳಿತ ಮತ್ತು ಜನರ ಮಿತಿಯಿಲ್ಲದ ಸಾಮರ್ಥ್ಯದ ಮೇಲಿನ ಸಮಾನ ಬದ್ಧತೆಯನ್ನು ಹಂಚಿಕೊಂಡಿವೆ ಎಂದು ಒತ್ತಿಹೇಳಿದ್ದಾರೆ.
“140 ಕೋಟಿ ಭಾರತೀಯರ ಪರವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕದ ಜನತೆಗೆ ನಿಮ್ಮ ದೇಶದ ಐತಿಹಾಸಿಕ 250ನೇ ಸ್ವಾತಂತ್ರ್ಯ ದಿನೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಕೇವಲ ಕಾರ್ಯತಂತ್ರದ ಪಾಲುದಾರಿಕೆಗಿಂತ ಹೆಚ್ಚಿನದನ್ನು ಹಂಚಿಕೊಂಡಿವೆ. ಪ್ರಜಾಪ್ರಭುತ್ವ, ಕಾನೂನಿನ ಆಡಳಿತದ ಮೇಲಿನ ನಮ್ಮ ನಂಬಿಕೆ ಮತ್ತು ನಮ್ಮ ಜನರ ಅಪಾರ ಸಾಮರ್ಥ್ಯವು ನಮ್ಮ ಸ್ನೇಹವನ್ನು ಜಾಗತಿಕ ಒಳಿತಿಗಾಗಿ ಒಂದು ಶಕ್ತಿಯನ್ನಾಗಿ ಮಾಡಿದೆ” ಎಂದು ಪ್ರಧಾನಿ ಮೋದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ
ಭಾರತ-ಅಮೆರಿಕ ಬಾಂಧವ್ಯ ಗಟ್ಟಿಯಾಗುವ ಆಶಯ:
ಮುಂಬರುವ 250 ವರ್ಷಗಳು ಅಮೆರಿಕಕ್ಕೆ ಹೆಚ್ಚಿನ ಸಮೃದ್ಧಿ, ಶಾಂತಿ ಮತ್ತು ಪ್ರಗತಿಯನ್ನು ತರಲಿ ಹಾಗೂ ಉಭಯ ದೇಶಗಳ ನಡುವಿನ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿ ಎಂದು ಪ್ರಧಾನಿ ಮೋದಿ ಆಶಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ