AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲಿನಿಂದ ಬಿಡುಗಡೆಯಾದ ಗ್ಯಾಂಗ್​​ಸ್ಟರ್​​ಗೆ ಸ್ವಾಗತಕೋರಿ ರ‍್ಯಾಲಿ ನಡೆಸಿದ ಬೆಂಬಲಿಗರು; ಮತ್ತೆ ಬಂಧನ

ವೈರಲ್ ವಿಡಿಯೊದಲ್ಲಿ, ಕಾರಿನ ಸನ್‌ರೂಫ್‌ನಿಂದ ಹೊರಬರುವಾಗ ಪಾಟಂಕರ್ ತನ್ನ ಬೆಂಬಲಿಗರತ್ತ ಕೈ ಬೀಸುತ್ತಿರುವುದನ್ನು ಕಾಣಬಹುದು. ಅವರ ಬೆಂಬಲಿಗರು ಈ ವಿಡಿಯೊಗಳಿಗೆ "ಕಮ್‌ಬ್ಯಾಕ್" ಎಂದು ಶೀರ್ಷಿಕೆ ನೀಡಿದ್ದಾರೆ. ನಾಸಿಕ್‌ನ ಗ್ಯಾಂಗ್​​ಸ್ಟರ್ ಹರ್ಷದ್ ಪಾಟಂಕರ್​​ನ್ನು ಮಹಾರಾಷ್ಟ್ರದ ಅಪಾಯಕಾರಿ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಎಂಪಿಡಿಎ) ಅಡಿಯಲ್ಲಿ ಜೈಲಿಗೆ ಹಾಕಲಾಗಿತ್ತು.

ಜೈಲಿನಿಂದ ಬಿಡುಗಡೆಯಾದ ಗ್ಯಾಂಗ್​​ಸ್ಟರ್​​ಗೆ ಸ್ವಾಗತಕೋರಿ ರ‍್ಯಾಲಿ ನಡೆಸಿದ ಬೆಂಬಲಿಗರು; ಮತ್ತೆ ಬಂಧನ
ಹರ್ಷದ್ ಪಾಟಂಕರ್
ರಶ್ಮಿ ಕಲ್ಲಕಟ್ಟ
|

Updated on: Jul 27, 2024 | 12:42 PM

Share

ಮುಂಬೈ ಜುಲೈ 27: ಮಹಾರಾಷ್ಟ್ರದ (Maharashtra) ಜೈಲಿನಿಂದ ಬಿಡುಗಡೆಯಾದ ನಂತರ, ಗ್ಯಾಂಗ್​​ಸ್ಟರ್ ಹರ್ಷದ್ ಪಾಟಂಕರ್​​ನ್ನು (Harshad Patankar) ಸ್ವಾಗತಿಸಿ ಅವರ ಬೆಂಬಲಿಗರು ಸಂಭ್ರಮಾಚರಣೆ ರ‍್ಯಾಲಿ ನಡೆಸಿದ್ದಾರೆ. ಇದರ ಬೆನ್ನಲ್ಲೇ ಪಾಟಂಕರ್​​ನ್ನು ಮತ್ತೆ ಬಂಧಿಸಲಾಗಿದೆ. ಎನ್​​​ಡಿಟಿವಿ ವರದಿಯ ಪ್ರಕಾರ, ಕಾರು ಮೆರವಣಿಗೆ ಮತ್ತು ಸುಮಾರು 15 ದ್ವಿಚಕ್ರ ವಾಹನಗಳನ್ನು ಒಳಗೊಂಡ ರ‍್ಯಾಲಿಯು ಮಹಾರಾಷ್ಟ್ರದ ನಾಸಿಕ್‌ನ ಬೆತೆಲ್ ನಗರದಿಂದ ಅಂಬೇಡ್ಕರ್ ಚೌಕ್‌ವರೆಗೆ ನಡೆಯಿತು. ರ‍್ಯಾಲಿಯ ನಂತರ, ಅವರ ಆಚರಣೆ, ಮೆರವಣಿಗೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಪೊಲೀಸರು ಕ್ರಮ ಕೈಗೊಂಡಿದ್ದಾರೆ

ವೈರಲ್ ವಿಡಿಯೊದಲ್ಲಿ, ಕಾರಿನ ಸನ್‌ರೂಫ್‌ನಿಂದ ಹೊರಬರುವಾಗ ಪಾಟಂಕರ್ ತನ್ನ ಬೆಂಬಲಿಗರತ್ತ ಕೈ ಬೀಸುತ್ತಿರುವುದನ್ನು ಕಾಣಬಹುದು. ಅವರ ಬೆಂಬಲಿಗರು ಈ ವಿಡಿಯೊಗಳಿಗೆ “ಕಮ್‌ಬ್ಯಾಕ್” ಎಂದು ಶೀರ್ಷಿಕೆ ನೀಡಿದ್ದಾರೆ.

ನಾಸಿಕ್‌ನ ಗ್ಯಾಂಗ್​​ಸ್ಟರ್ ಹರ್ಷದ್ ಪಾಟಂಕರ್​​ನ್ನು ಮಹಾರಾಷ್ಟ್ರದ ಅಪಾಯಕಾರಿ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಎಂಪಿಡಿಎ) ಅಡಿಯಲ್ಲಿ ಜೈಲಿಗೆ ಹಾಕಲಾಗಿತ್ತು.

ಈತನನ್ನು ಜುಲೈ 23 ರಂದು ಬಿಡುಗಡೆ ಮಾಡಲಾಯಿತು. ಆದಾಗ್ಯೂ, ಈ ವಿಡಿಯೊಗಳು ಪೊಲೀಸ್ ಕ್ರಮವನ್ನು ಪ್ರೇರೇಪಿಸಿದ ನಂತರ ಅವರ ವಿರುದ್ಧ ಸರ್ಕಾರವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಧಿಕೃತ ರ‍್ಯಾಲಿ ನಡೆಸಿ ಗೊಂದಲ ಸೃಷ್ಟಿಸಿದ್ದಕ್ಕಾಗಿ ಪಾಟಂಕರ್ ಮತ್ತು ಆತನ ಆರು ಸಹಾಯಕರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಹರಿದ್ವಾರ: ಕನ್ವರ್ ಯಾತ್ರಾ ಮಾರ್ಗದಲ್ಲಿನ ಮಸೀದಿ, ಮಝಾರ್ ಕಾಣದಂತೆ ಪರದೆ; ಆಕ್ಷೇಪ ವ್ಯಕ್ತವಾದ ನಂತರ ತೆರವು

ಪಾಟಂಕರ್ ವಿರುದ್ಧ ಕೊಲೆ ಯತ್ನ, ಕಳ್ಳತನ, ಹಿಂಸಾಚಾರ ಸೇರಿದಂತೆ ಹಲವು ಪೊಲೀಸ್ ಪ್ರಕರಣಗಳು ದಾಖಲಾಗಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ