ನಮ್ಮ ಪಕ್ಷವೂ ಸೇರಿದಂತೆ ರಾಜಕೀಯ ಪಕ್ಷಗಳು ವಿಭಜನೆಯನ್ನು ಸೃಷ್ಟಿಸುತ್ತವೆ: ಗುಲಾಂ ನಬಿ ಆಜಾದ್
ಜಮ್ಮು ಮತ್ತು ಕಾಶ್ಮೀರದಲ್ಲಿ ಏನಾಯಿತು ಎಂಬುದಕ್ಕೆ ಪಾಕಿಸ್ತಾನ ಮತ್ತು ಉಗ್ರಗಾಮಿ ಪ್ರವೃತ್ತಿ ಕಾರಣವಾಗಿದೆ. ಇದು ಹಿಂದೂಗಳು, ಕಾಶ್ಮೀರಿ ಪಂಡಿತರು, ಮುಸ್ಲಿಮರು, ಡೋಗ್ರಾಗಳು ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲರ ಮೇಲೆ ಪರಿಣಾಮ ಬೀರಿದೆ ಎಂದ ಆಜಾದ್
ಜಮ್ಮು: ಕಾಂಗ್ರೆಸ್ (Congress) ಸೇರಿದಂತೆ ರಾಜಕೀಯ ಪಕ್ಷಗಳು ಜನರಲ್ಲಿ ವಿವಿಧ ಕಾರಣಗಳಿಗಾಗಿ ಒಡಕು ಮೂಡಿಸುತ್ತಿವೆ ಎಂದು ಹೇಳಿರುವ ಮಾಜಿ ಕೇಂದ್ರ ಸಚಿವ ಗುಲಾಂ ನಬಿ ಆಜಾದ್ (Ghulam Nabi Azad), 1990 ರ ಕಾಶ್ಮೀರಿ ಪಂಡಿತರ ವಲಸೆ ಮತ್ತು ಹತ್ಯೆಗಳನ್ನು ಭಾನುವಾರ ಉಲ್ಲೇಖಿಸಿದ್ದಾರೆ. ಕಣಿವೆಯಲ್ಲಿ ನಡೆದ ಎಲ್ಲದಕ್ಕೂ ಪಾಕಿಸ್ತಾನ ಮತ್ತು ಭಯೋತ್ಪಾದನೆ ಹೊಣೆ ಎಂದು ಆಜಾದ್ ಆರೋಪಿಸಿದ್ದಾರೆ. 1990 ರ ಕಾಶ್ಮೀರಿ ಪಂಡಿತರ ವಲಸೆಯನ್ನು ಆಧರಿಸಿದ ‘ದಿ ಕಾಶ್ಮೀರ್ ಫೈಲ್ಸ್‘ (The Kashmir Files)ಚಿತ್ರದ ಕುರಿತು ನಡೆಯುತ್ತಿರುವ ವಿವಾದದ ಹಿನ್ನೆಲೆಯಲ್ಲಿ ಅವರ ಹೇಳಿಕೆಗಳು ಬಂದಿವೆ. “ರಾಜಕೀಯ ಪಕ್ಷಗಳು ಧರ್ಮ, ಜಾತಿ ಮತ್ತು ಇತರ ವಿಷಯಗಳ ಆಧಾರದ ಮೇಲೆ (ಜನರ ನಡುವೆ) ದಿನದ 24 ಗಂಟೆ ವಿಭಜನೆಯನ್ನು ಸೃಷ್ಟಿಸುತ್ತವೆ, ನನ್ನ ಪಕ್ಷ (ಕಾಂಗ್ರೆಸ್) ಸೇರಿದಂತೆ ಯಾವುದೇ ಪಕ್ಷವನ್ನು ನಾನು ಕ್ಷಮಿಸುವುದಿಲ್ಲ, ನಾಗರಿಕ ಸಮಾಜವು ಒಟ್ಟಾಗಿ ಇರಬೇಕು, ಜಾತಿ,ಧರ್ಮವನ್ನು ಲೆಕ್ಕಿಸದೆ ಎಲ್ಲರಿಗೂ ನ್ಯಾಯವನ್ನು ನೀಡಬೇಕು ಎಂದು ಆಜಾದ್ ಹೇಳಿದ್ದಾರೆ. “ಮಹಾತ್ಮಾ ಗಾಂಧಿ ಅತಿದೊಡ್ಡ ಹಿಂದೂ ಮತ್ತು ಜಾತ್ಯತೀತವಾದಿ” ಎಂದು ಅವರು ಒತ್ತಿ ಹೇಳಿದರು. “ಜಮ್ಮು ಮತ್ತು ಕಾಶ್ಮೀರದಲ್ಲಿ ಏನಾಯಿತು ಎಂಬುದಕ್ಕೆ ಪಾಕಿಸ್ತಾನ ಮತ್ತು ಉಗ್ರಗಾಮಿ ಪ್ರವೃತ್ತಿ ಕಾರಣವಾಗಿದೆ. ಇದು ಹಿಂದೂಗಳು, ಕಾಶ್ಮೀರಿ ಪಂಡಿತರು, ಮುಸ್ಲಿಮರು, ಡೋಗ್ರಾಗಳು ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲರ ಮೇಲೆ ಪರಿಣಾಮ ಬೀರಿದೆ” ಎಂದು ಆಜಾದ್ ಜಮ್ಮುವಿನಲ್ಲಿ ಹೇಳಿದರು.
#WATCH …Political parties may create a divide 24×7 on basis of religion, caste & other things; I’m not forgiving any party incl mine…Civil society should stay together. Justice must be given to everyone irrespective of caste, religion: Ghulam N Azad, Cong at an event in Jammu pic.twitter.com/2OCo76ny4x
— ANI (@ANI) March 20, 2022
1990 ರ ದಶಕದಲ್ಲಿ ಕಣಿವೆಯಿಂದ ಕಾಶ್ಮೀರಿ ಪಂಡಿತರ ವಲಸೆಯನ್ನು ಕೇಂದ್ರೀಕರಿಸುವ ಈ ಚಲನಚಿತ್ರವು ಮಾರ್ಚ್ 11 ರಂದು ಬಿಡುಗಡೆಯಾದಾಗಿನಿಂದ ವಿವಾದದಲ್ಲಿ ಮುಳುಗಿದೆ, ಘಟನೆಗಳ ಚಿತ್ರಣದ ಬಗ್ಗೆ ಬಿಜೆಪಿ ಮತ್ತು ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿವೆ.
ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಿತ್ರಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಅದನ್ನು ಕೆಡಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.
ಮಧ್ಯಪ್ರದೇಶ ಮತ್ತು ಗುಜರಾತ್ ಸೇರಿದಂತೆ ಹಲವು ಬಿಜೆಪಿ ಆಡಳಿತದ ರಾಜ್ಯಗಳು ಚಿತ್ರಕ್ಕೆ ಮನರಂಜನಾ ತೆರಿಗೆಯಿಂದ ವಿನಾಯಿತಿ ನೀಡಿವೆ. ಸಿನಿಮಾ ಮೂಲಕ ಸಮಾಜದಲ್ಲಿ ದ್ವೇಷವನ್ನು ಹರಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹಲವು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ.
ಬುಧವಾರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚಿತ್ರತಂಡವನ್ನು ಭೇಟಿ ಮಾಡಿದರು, ಇದು ಸತ್ಯದ ದಿಟ್ಟ ಪ್ರಾತಿನಿಧ್ಯ ಎಂದು ಅವರು ಹೇಳಿದರು. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರಂತಹ ವಿರೋಧ ಪಕ್ಷದ ನಾಯಕರು ಚಲನಚಿತ್ರವನ್ನು ಪ್ರಶ್ನಿಸಿದ್ದು 1990 ರ ದಶಕದಲ್ಲಿ ಕಾಶ್ಮೀರಿ ಪಂಡಿತರ ವಲಸೆಯ ಬಗ್ಗೆ ಹೊಸ ತನಿಖೆಗೆ ಒತ್ತಾಯಿಸಿದರು.
ಇದನ್ನೂ ಓದಿ: ಎರಡನೇ ಬಾರಿಗೆ ಮಣಿಪುರ ಮುಖ್ಯಮಂತ್ರಿಯಾಗಿ ಎನ್ ಬಿರೇನ್ ಸಿಂಗ್ ಆಯ್ಕೆ ಮಾಡಿದ ಬಿಜೆಪಿ
Published On - 6:38 pm, Sun, 20 March 22