ಮೋದಿಯ ಹೆಸರು ಹೇಳಲು ಚಿತ್ರಹಿಂಸೆ ನೀಡಿದರು; ಮಾಲೆಗಾಂವ್ ತೀರ್ಪಿನ ಬಳಿಕ ಪ್ರಜ್ಞಾ ಠಾಕೂರ್ ಸ್ಫೋಟಕ ಹೇಳಿಕೆ

ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಠಾಕೂರ್ ಅವರನ್ನು ಖುಲಾಸೆಗೊಳಿಸಲಾಗಿದೆ. ಇದರ ಬೆನ್ನಲ್ಲೇ ಮಹತ್ವದ ಹೇಳಿಕೆ ನೀಡಿರುವ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ನಾನು ಪ್ರಧಾನಿ ಮೋದಿ, ಸಿಎಂ ಯೋಗಿ ಆದಿತ್ಯನಾಥ್, ಮೋಹನ್ ಭಾಗವತ್ ಅವರ ಹೆಸರುಗಳನ್ನು ಹೇಳಿದರೆ ಚಿತ್ರಹಿಂಸೆ ನಿಲ್ಲಿಸುತ್ತೇವೆ ಎಂದು ತನಿಖಾಧಿಕಾರಿಗಳು ಹೇಳಿದ್ದರು. ಆದರೂ ನಾನು ಯಾರ ಹೆಸರನ್ನೂ ಹೇಳಲಿಲ್ಲ ಎಂದಿದ್ದಾರೆ.

ಮೋದಿಯ ಹೆಸರು ಹೇಳಲು ಚಿತ್ರಹಿಂಸೆ ನೀಡಿದರು; ಮಾಲೆಗಾಂವ್ ತೀರ್ಪಿನ ಬಳಿಕ ಪ್ರಜ್ಞಾ ಠಾಕೂರ್ ಸ್ಫೋಟಕ ಹೇಳಿಕೆ
Pragya Singh Thakur

Updated on: Aug 02, 2025 | 8:58 PM

ನವದೆಹಲಿ, ಆಗಸ್ಟ್ 2:  2008 ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ (Malegaon blast case)
ಇತ್ತೀಚೆಗೆ ಖುಲಾಸೆಗೊಂಡ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಾಜಿ ಸಂಸದೆ ಪ್ರಜ್ಞಾ ಠಾಕೂರ್ (Pragya Thakur) ತನಿಖಾ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ (PM Narendra Modi), ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಮ್ ಮಾಧವ್, ಇಂದ್ರೇಶ್ ಕುಮಾರ್ ಮತ್ತು ಇತರರ ಹೆಸರುಗಳನ್ನು ತನಿಖೆಯ ಸಮಯದಲ್ಲಿ ಹೇಳುವಂತೆ ಒತ್ತಾಯಿಸಿದ್ದಾರೆ ಮತ್ತು ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ.

2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ವಿಶೇಷ NIA ನ್ಯಾಯಾಲಯವು ಸಾಧ್ವಿ ಹಾಗೂ ಬಿಜೆಪಿ ಮಾಜಿ ಸಂಸದೆ ಪ್ರಜ್ಞಾ ಠಾಕೂರ್ ಅವರನ್ನು ಖುಲಾಸೆಗೊಳಿಸಿದೆ. ಅದಾದ ಕೆಲವು ದಿನಗಳ ನಂತರ ಪ್ರಜ್ಞಾ ಠಾಕೂರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಇತರರ ಹೆಸರುಗಳನ್ನು ಹೇಳಲು ನನ್ನನ್ನು ಒತ್ತಾಯಿಸಲಾಯಿತು, ಚಿತ್ರಹಿಂಸೆ ನೀಡಲಾಯಿತು” ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಈ ಕೇಸ್ ನನ್ನ ಬದುಕನ್ನೇ ಹಾಳು ಮಾಡಿತು; ಮಾಲೆಗಾಂವ್ ಸ್ಫೋಟದ ತೀರ್ಪಿನ ಬಳಿಕ ಪ್ರಜ್ಞಾ ಠಾಕೂರ್ ಮೊದಲ ಪ್ರತಿಕ್ರಿಯೆ

“ನಾನು ಎಲ್ಲ ಹೇಳಿಕೆಯನ್ನೂ ಲಿಖಿತವಾಗಿ ನೀಡಿದ್ದೇನೆ. ಆದರೆ, ಮೋದಿ, ಯೋಗಿ, ಮೋಹನ್ ಭಾಗವತ್ ಹೆಸರು ಹೇಳಿದರೆ ನಿಮ್ಮನ್ನು ಬಿಟ್ಟುಬಿಡುತ್ತೇವೆ ಎಂದು ನನಗೆ ಆಮಿಷವೊಡ್ಡಿದ್ದರು. ಆದರೂ ನಾನು ಅವರಿಗೆ ಮಣಿಯಲಿಲ್ಲ. ಅವರ ಮುಖ್ಯ ಉದ್ದೇಶ ನನ್ನನ್ನು ಹಿಂಸಿಸುವುದಾಗಿತ್ತು” ಎಂದು ಪ್ರಜ್ಞಾ ಹೇಳಿದ್ದಾರೆ.


ಆಗಿನ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಜ್ಞಾ ಠಾಕೂರ್, “ಕೇಸರಿ ಮತ್ತು ಸಶಸ್ತ್ರ ಪಡೆಗಳ ಹೆಸರು ಕೆಡಿಸಲು ಕಾಂಗ್ರೆಸ್ ದೊಡ್ಡ “ಪಿತೂರಿ” ಮಾಡಿತ್ತು. ಅದಕ್ಕಾಗಿಯೇ ನನ್ನ ಮೇಲೆ “ಸುಳ್ಳು ಪ್ರಕರಣ” ದಾಖಲಿಸಿತ್ತು. ಈ ಕೇಸಿನಿಂದ ನನ್ನಜೀವನಕ್ಕೆ ಶಾಶ್ವತವಾಗಿ ಕಪ್ಪು ಚುಕ್ಕಿ ಅಂಟಿತು ಎಂದು ಪ್ರಜ್ಞಾ ಠಾಕೂರ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಮಾಲೆಗಾಂವ್ ಸ್ಫೋಟ, ಮೋಹನ್​ ಭಾಗವತ್​​ರನ್ನು ಸಿಲುಕಿಸಲು ಪಿತೂರಿ ನಡೆದಿತ್ತು: ಮಾಜಿ ಎಟಿಎಸ್ ಅಧಿಕಾರಿ

ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ನಡೆದ ಪ್ರಬಲ ಸ್ಫೋಟ ಪ್ರಕರಣ ನಡೆದ 17ವರ್ಷಗಳ ನಂತರ, ವಿಶೇಷ NIA ನ್ಯಾಯಾಲಯವು ಎಲ್ಲಾ 7 ಆರೋಪಿಗಳನ್ನು ಖುಲಾಸೆಗೊಳಿಸಿತು. 6 ಜೀವಗಳನ್ನು ಬಲಿತೆಗೆದುಕೊಂಡ ಮತ್ತು 100ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಗುರುವಾರ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯವು ಪ್ರಜ್ಞಾ ಠಾಕೂರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಮತ್ತು ಇತರ 5 ಆರೋಪಿಗಳನ್ನು ಖುಲಾಸೆಗೊಳಿಸಿತು. ತನ್ನ ತೀರ್ಪನ್ನು ಪ್ರಕಟಿಸಿದ ನ್ಯಾಯಾಲಯವು 7 ಆರೋಪಿಗಳ ವಿರುದ್ಧ “ಯಾವುದೇ ವಿಶ್ವಾಸಾರ್ಹ ಮತ್ತು ಬಲವಾದ ಪುರಾವೆಗಳಿಲ್ಲ” ಎಂದು ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 8:58 pm, Sat, 2 August 25

Follow Us