ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಇದ್ದಾಗ ಮತ್ತೊಂದು ನಿರ್ಣಯ ಹೇಗೆ ತರುತ್ತೀರಿ? ವಿಪಕ್ಷಗಳ ವರ್ತನೆಗೆ ಪ್ರಲ್ಹಾದ್ ಜೋಷಿ ಕಿಡಿ

Union minister Pralhad Joshi on no-confidence motion against Lok Sabha Speaker Om Birla: ಲೋಕಸಭಾ ಅಧಿವೇಶನದಲ್ಲಿ ವಿಪಕ್ಷಗಳ ಸದಸ್ಯರ ವರ್ತನೆ ವಿರುದ್ಧ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಕಿಡಿಕಾರಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿಪಕ್ಷಗಳು ಅವಿಶ್ವಾಸ ನಿರ್ಣಯಕ್ಕೆ ಯೋಜಿಸಿದ್ದರು. ಕಲಾಪದ ಅಜೆಂಡಾಗಳ ಪಟ್ಟಿಯಲ್ಲೂ ಅದು ಇತ್ತು ಆದರೆ, ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ವಿಚಾರ ಚರ್ಚೆಗೆ ಬರಬೇಕೆಂದು ವಿಪಕ್ಷಗಳು ಮತ್ತೊಂದು ನಿರ್ಣಯಕ್ಕೆ ಪಟ್ಟು ಹಿಡಿದರು. ಇದರಿಂದ ಕಲಾಪ ಸ್ಥಗಿತಗೊಂಡಿತು.

ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಇದ್ದಾಗ ಮತ್ತೊಂದು ನಿರ್ಣಯ ಹೇಗೆ ತರುತ್ತೀರಿ? ವಿಪಕ್ಷಗಳ ವರ್ತನೆಗೆ ಪ್ರಲ್ಹಾದ್ ಜೋಷಿ ಕಿಡಿ
ಪ್ರಲ್ಹಾದ್ ಜೋಷಿ

Updated on: Mar 09, 2026 | 9:39 PM

ನವದೆಹಲಿ, ಮಾರ್ಚ್ 9: ಸ್ಪೀಕರ್ ಓಂ ಬಿರ್ಲಾ ವಿರುದ್ಧ ದೋಷಾರೋಪಣೆ ಕೋರಿ ನಿರ್ಣಯ ತರಲು ವಿಪಕ್ಷಗಳು ಮಾಡಿದ ಪ್ರಯತ್ನ ಫಲಿಸಲಿಲ್ಲ. ಲೋಕಸಭೆಯಲ್ಲಿ ಈ ನಿರ್ಣಯದ ಮೇಲಿನ ಚರ್ಚೆಗೆ ವಿಪಕ್ಷಗಳಿಂದಲೇ ಅಡ್ಡಿಯಾಯಿತು. ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ವಿಚಾರ ಚರ್ಚೆಗೆ ಬರಬೇಕೆಂದು ವಿಪಕ್ಷಗಳು ಹಿಡಿದ ಹಠಕ್ಕೆ ಸಮ್ಮತಿ ಸಿಗಲಿಲ್ಲ. ಪ್ರತಿಭಟನೆಗಳ ಮಧ್ಯೆ ಸೋಮವಾರದ ಕಲಾಪ ಅವಧಿಗೆ ಮುನ್ನವೇ ಅಂತ್ಯಗೊಂಡಿತು. ಸಂಸdಈಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಅವರು ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯ ವಿಚಾರದಲ್ಲಿ ವಿಪಕ್ಷಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

‘ಇವತ್ತು ಈ ವಿಚಾರವನ್ನು ಚರ್ಚೆ ಮಾಡಲಾಗುವುದು ಎಂದು ಪಟ್ಟಿಯಲ್ಲಿ ಸೇರಿಸಲಾಗಿತ್ತು. ಅವರು ನಿರ್ಣಯ ಮಂಡಿಸಬೇಕಿತ್ತು. ಅದರ ವಿಧಾನ ಏನಿದೆ ಹೇಳಿ? ನಿರ್ಣಯ ಮಂಡಿಸಿದಾಗ 50 ಜನರು ಅದಕ್ಕೆ ಬೆಂಬಲವಾಗಿ ನಿಲ್ಲಬೇಕು. ಇವತ್ತು ಲೋಕಸಭೆಯ ಅಧ್ಯಕ್ಷತೆ ವಹಿಸಿದ್ದ ಜಗದಾಂಬಿಕಾ ಪಾಲ್ ಅವರು, ನೀವು ನಿರ್ಣಯ ತರುವುದಾದರೆ ಚರ್ಚೆಗೆ ಅನುಮತಿಸುತ್ತೇನೆ ಎಂದು ಪದೇ ಪದೇ ಹೇಳಿದರು.

‘ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ತರುವ ಅಜೆಂಡಾ ಇದ್ದಾಗ ಮಧ್ಯದಲ್ಲಿ ಮತ್ತೊಂದು ನಿರ್ಣಯ, ಮತ್ತೊಂದು ನಿಲುವಳಿ ಸೂಚನೆ ಹೇಗೆ ತರುತ್ತೀರಿ? ನಿಯಮಗಳಿವೆಯೋ ಇಲ್ಲವೋ? ಸಂವಿಧಾನ ಇಲ್ಲವಾ? ರಾಹುಲ್ ಗಾಂಧಿ ಹೇಳಿದಂತೆ ಕಲಾಪ ನಡೆಸುವುದಾರೆ ನಿಯಮ ರಚಿಸಿರುವುದು ಯಾಕೆ? ಈ ವ್ಯಕ್ತಿಗಳು ಮೊದಲು ಬೇಡಿಕೆ ಇಡುತ್ತಾರೆ, ನಂತರ ಗಲಾಟೆ ಮಾಡುತ್ತಾರೆ. ಇದೆಂಥ ವಿಚಾರ ಹೇಳಿ? ನಾನು ಸಂಸದೀಯ ವ್ಯವಹಾರಗಳ ಸಚಿವನಾದ ಬಳಿಕ ಬಹಳಷ್ಟು ಬಾರಿ ಆಗಿದೆ. ಅವರು ಹೇಳಿದ್ದೇ ನಿಯಮ ಎಂದು ಭಾವಿಸಿದ್ದಾರೆ. ಯಾವ್ಯಾವುವು ಚರ್ಚೆಯಾಗಬೇಕು ಎಂಬುದನ್ನು ಬಿಎಸಿಯಲ್ಲಿ ಮೊದಲು ನಿರ್ಧಾರ ಆಗಬೇಕು’ ಎಂದು ಪ್ರಲ್ಹಾದ್ ಜೋಷಿ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತದ ಬ್ರಹ್ಮೋಸ್ ಕ್ಷಿಪಣಿ ಖರೀದಿಗೆ ಇಂಡೋನೇಷ್ಯಾದಿಂದ 200-350 ಬಿಲಿಯನ್ ಡಾಲರ್ ಡೀಲ್

ಇವತ್ತು ಮಧ್ಯಾಹ್ನದ ಕಲಾಪ ಶುರುವಾದಾಗ ವಿಪಕ್ಷಗಳ ಸದಸ್ಯರು ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ವಿಚಾರವನ್ನು ಚರ್ಚೆಗೆ ತರಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಸದನದ ಅಜೆಂಡಾ ಪ್ರಕಾರ ಕಾರ್ಯನಿರ್ವಹಿಸಲು ಅವಕಾಶ ಕೊಡುವಂತೆ ಸಭಾಧ್ಯಕ್ಷರು ಪದೇ ಪದೇ ಮಾಡಿಕೊಂಡ ಮನವಿಗೆ ವಿಪಕ್ಷ ಸದಸ್ಯರು ಕಿವಿಗೊಡದೆ ಗದ್ದಲ ಮುಂದುವರಿಸಿದರು. ಇದರಿಂದಾಗಿ ಸದನದ ಕಲಾಪವನ್ನು ಸ್ಥಗಿತಗೊಳಿಸಬೇಕಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us