ಕಾಂಗ್ರೆಸ್​ಗೆ ಮರಳುವ ಇಚ್ಛೆ ವ್ಯಕ್ತಪಡಿಸಿದ ಪ್ರಣಬ್ ಮುಖರ್ಜಿ ಮಗ ಅಭಿಜಿತ್ ಮುಖರ್ಜಿ

|

Updated on: Jun 19, 2024 | 3:25 PM

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ಅವರು ಕಾಂಗ್ರೆಸ್‌ಗೆ ಮರುಸೇರ್ಪಡೆಯಾಗುವ ಇಚ್ಛೆಯನ್ನು ಇಂದು (ಬುಧವಾರ) ವ್ಯಕ್ತಪಡಿಸಿದ್ದಾರೆ. ಈ ಮೊದಲು ಅವರು ಕಾಂಗ್ರೆಸ್ ಪಕ್ಷದಲ್ಲಿದ್ದರು. ಆದರೆ, 2021ರಲ್ಲಿ ಟಿಎಂಸಿಗೆ ಸೇರಿದ್ದರು. ಇದೀಗ ಅವರು ಮತ್ತೊಮ್ಮೆ ಕಾಂಗ್ರೆಸ್​ಗೆ ಸೇರ್ಪಡೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್​ಗೆ ಮರಳುವ ಇಚ್ಛೆ ವ್ಯಕ್ತಪಡಿಸಿದ ಪ್ರಣಬ್ ಮುಖರ್ಜಿ ಮಗ ಅಭಿಜಿತ್ ಮುಖರ್ಜಿ
ಅಭಿಜಿತ್ ಮುಖರ್ಜಿ
Follow us on

ಕೊಲ್ಕತ್ತಾ: ಈ ಹಿಂದೆ ಕಾಂಗ್ರೆಸ್​ ತೊರೆದು ಟಿಎಂಸಿಗೆ ಸೇರ್ಪಡೆಯಾಗಿದ್ದ ಪ್ರಣಬ್ ಮುಖರ್ಜಿ (Pranab Mukherjee) ಅವರ ಮಗ ಅಭಿಜಿತ್ ಮುಖರ್ಜಿ (Abhijit Mukherjee) ಇದೀಗ ಮತ್ತೆ ಕಾಂಗ್ರೆಸ್​ಗೆ ಸೇರಲು ನಿರ್ಧರಿಸಿದ್ದಾರೆ. ಅಭಿಜಿತ್ ಮುಖರ್ಜಿ 2 ಬಾರಿ ಸಂಸದರಾಗಿದ್ದಾರೆ. ಅವರು 2012 ಮತ್ತು 2014ರ ಉಪಚುನಾವಣೆಯಲ್ಲಿ ಜಂಗೀಪುರ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದರು. “ನಾನು 2019ರ ಚುನಾವಣೆಯಲ್ಲಿ ನನಗೆ ತಿಳಿದಿರುವ ಕಾರಣದಿಂದ ಸೋತಿದ್ದೇನೆ. ಆ ಕಾರಣವೇನೆಂದು ಗಟ್ಟಿಯಾಗಿ ಹೇಳಲು ಸಾಧ್ಯವಿಲ್ಲ. ಇದು ಹೈಕಮಾಂಡ್‌ಗೂ ತಿಳಿದಿದೆ” ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಮಾಜಿ ರಾಷ್ಟ್ರಪತಿ ದಿವಂಗತ ಪ್ರಣಬ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ಅವರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಜೊತೆಗಿನ ಅಲ್ಪಾವಧಿಯ ನಂತರ ಕಾಂಗ್ರೆಸ್ ಪಕ್ಷಕ್ಕೆ ಮರಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. 2021ರಲ್ಲಿ ಟಿಎಂಸಿಗೆ ಸೇರ್ಪಡೆಗೊಂಡ ಅಭಿಜಿತ್ ಮುಖರ್ಜಿ, ತಮ್ಮ ಹಿಂದಿನ ಪಕ್ಷಕ್ಕೆ ಮರಳಲು ಕೆಲವು ಕಾರಣಗಳಾಗಿದ್ದು, ಕೆಲಸದ ಸಂಸ್ಕೃತಿಯಲ್ಲಿ ಅಸಮರ್ಥತೆಯನ್ನು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ ಫ್ಯಾಮಿಲಿ ಬಿಸಿನೆಸ್; ವಯನಾಡಿನಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆಗೆ ಬಿಜೆಪಿ ಲೇವಡಿ

ಇಂದು ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಅಭಿಜಿತ್ ಮುಖರ್ಜಿ ಟಿಎಂಸಿಯ ಕೆಲಸದ ಸಂಸ್ಕೃತಿಯು ಕಾಂಗ್ರೆಸ್‌ನವರಿಗೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿದ್ದಾರೆ. “ಇನ್ನು ಇಲ್ಲಿ ಸಾಕಾಯಿತು ಎಂದುಕೊಂಡೆ. ಹಾಗಾಗಿ, ದೆಹಲಿಗೆ ಹಿಂತಿರುಗಿದ ನಂತರ ನಾನು ಕಾಂಗ್ರೆಸ್ ಹೈಕಮಾಂಡ್‌ನಿಂದ ಸಮಯ ಕೇಳಿದೆ. ಬಹುಶಃ ನಾನು ಅವರನ್ನು ಒಂದು ಅಥವಾ ಎರಡು ದಿನಗಳಲ್ಲಿ ಭೇಟಿ ಮಾಡಬಹುದು. ಅವರು ನನ್ನನ್ನು ತಕ್ಷಣ ಕಾಂಗ್ರೆಸ್​ಗೆ ಸೇರಲು ಕೇಳಿದರೆ ನಾನು ಸೇರುತ್ತೇನೆ. ಕಾಂಗ್ರೆಸ್ ನನ್ನನ್ನು ಒಪ್ಪಿಕೊಂಡರೆ ಆ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಲು ಸಿದ್ಧ” ಎಂದು ಅವರು ಹೇಳಿದ್ದಾರೆ.

“ಎರಡೂವರೆ ವರ್ಷಗಳ ಕಾಲ ಕಾಂಗ್ರೆಸ್ ನನಗೆ ನೀಡಿದ ಹುದ್ದೆಯನ್ನು ನಿರ್ವಹಿಸಿದ್ದೇನೆ. ಆದರೆ ಅವರು ನನಗೆ ಉತ್ತಮ ಹುದ್ದೆ ನೀಡಲಿಲ್ಲ. ಅದಕ್ಕೆ ಕಾರಣವೇನಿರಬಹುದು? ಟಿಎಂಸಿಯವರ ಕೆಲಸದ ಸಂಸ್ಕೃತಿಯು ಕಾಂಗ್ರೆಸ್‌ನೊಂದಿಗೆ ಹೊಂದಿಕೆಯಾಗುವುದಿಲ್ಲ. ಹೀಗಾಗಿ, ನನಗೆ ಸಾಕು ಎಂದೆನಿಸಿದೆ” ಎಂದು ಅಭಿಜಿತ್ ಮುಖರ್ಜಿ ANIಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ 1 ವರ್ಷದೊಳಗೆ ಮಧ್ಯಂತರ ಚುನಾವಣೆ; ಕಾಂಗ್ರೆಸ್‌ನ ಭೂಪೇಶ್ ಬಘೇಲ್ ಭವಿಷ್ಯ

“2.5 ವರ್ಷಗಳ ಕಾಲ ನಾನು ಕಾಂಗ್ರೆಸ್ ನನಗೆ ನೀಡಿದ ಯಾವುದೇ ಹುದ್ದೆಯನ್ನು ನಿರ್ವಹಿಸಿದೆ. ಆದರೆ, ಅವರು ನನಗೆ ಸಾಕಷ್ಟು ಉತ್ತಮ ಹುದ್ದೆಗಳನ್ನು ನೀಡಲಿಲ್ಲ. ನಾನು ನಿರ್ದಿಷ್ಟ ವ್ಯಕ್ತಿ, ನಿರ್ದಿಷ್ಟ ಗುಂಪಿನಿಂದ ಕ್ರಮೇಣವಾಗಿ ಮೂಲೆಗುಂಪಾಗಿದ್ದೆ. ಈ ಮಧ್ಯೆ, ಮಮತಾ ದೀದಿ ಅವರಿಂದ ಸಮಯ ಕೇಳಿದ್ದರಿಂದ ನನಗೆ ವಾಪಸ್ ಕರೆದರು. ನಾನು ಅವರನ್ನು ಭೇಟಿ ಮಾಡಿದ್ದೆ ಮತ್ತು ಅವರು ನನಗೆ ಪಕ್ಷಕ್ಕೆ ಸೇರಲು ಅವಕಾಶ ನೀಡಿದರು” ಎಂದು ಅವರು ಹೇಳಿದ್ದಾರೆ.

ಟಿಎಂಸಿಯೊಂದಿಗಿನ ಅವರ ಆರಂಭಿಕ ಭರವಸೆಯ ಹೊರತಾಗಿಯೂ, ಅಭಿಜಿತ್ ಮುಖರ್ಜಿಗೆ ತಮ್ಮ ನಿರೀಕ್ಷೆಗಳು ಯಶಸ್ವಿಯಾಗಲಿಲ್ಲ. ಟಿಎಂಸಿ ಪಕ್ಷಕ್ಕೆ ಸೇರಿದ ನಂತರ ನನಗೆ ಯಾವುದೇ ಒಳ್ಳೆಯ ಹುದ್ದೆಗಳು ಸಿಕ್ಕಿಲ್ಲ. ಅವರ ಕೆಲಸದ ಸಂಸ್ಕೃತಿಯು ಕಾಂಗ್ರೆಸ್‌ಗೆ ಹೊಂದಿಕೆಯಾಗಲಿಲ್ಲ. ಇದರಿಂದಲೇ ನಾನು ದೆಹಲಿಗೆ ಹೋಗಿ ಕಾಂಗ್ರೆಸ್ ಹೈಕಮಾಂಡ್ ಭೇಟಿಯಾಗಲು ನಿರ್ಧರಿಸಿದ್ದೇನೆ. ನನಗೆ ಕಾಂಗ್ರೆಸ್​ನಲ್ಲಿ ಸಕ್ರಿಯರಾಗಿರಲು ನನ್ನ ಸ್ನೇಹಿತ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ ಎಂದು ಅಭಿಜಿತ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:25 pm, Wed, 19 June 24