ಮೋದಿ, ನಿತೀಶ್ ಕುಮಾರ್ಗೂ ಮಕ್ಕಳಾಗಲಿ ಎಂದು ದೇವರಲ್ಲಿ ಪಾರ್ಥಿಸುವೆ; ಕುಟುಂಬ ರಾಜಕಾರಣದ ಟೀಕೆಗೆ ಲಾಲೂ ಪ್ರಸಾದ್ ಕಿಡಿ
ನಿತೀಶ್ ಕುಮಾರ್ ಮತ್ತು ಪ್ರಧಾನಿ ಮೋದಿಗೆ ಮಕ್ಕಳಾಗದಿದ್ದರೆ ನಾನೇನು ಮಾಡಲಿ? ನಿತೀಶ್ ಕುಮಾರ್ ಅವರಿಗೆ ಒಬ್ಬ ಮಗನಿದ್ದಾನೆ. ಆದರೆ, ಆತ ರಾಜಕೀಯಕ್ಕೆ ಯೋಗ್ಯನಲ್ಲ. ಅದಕ್ಕೆ ನಾನೇನು ಮಾಡಲಿ? ಅವರಿಗೂ ಮಕ್ಕಳಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ವಿರುದ್ಧ ವಾಗ್ದಾಳಿ ನಡೆಸಿದ ರಾಷ್ಟ್ರೀಯ ಜನತಾ ದಳದ (JDU) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಆ ಇಬ್ಬರು ನಾಯಕರು ‘ಪರಿವಾರವಾದ’ದಲ್ಲಿ ಪಾಲ್ಗೊಳ್ಳಲು ಮಕ್ಕಳನ್ನು ಪಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. 2 ದಿನಗಳ ಹಿಂದೆ ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕುಟುಂಬ ರಾಜಕೀಯವನ್ನು ಟೀಕಿಸಿದ್ದು, ವಂಶಪಾರಂಪರಿಕ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಅಪಾಯ ಎಂದು ಹೇಳಿದ್ದರು. ಅಲ್ಲದೆ, ಸಮಾಜವಾದಿ ಪಕ್ಷ ನಕಲಿ, ಗೂಂಡಾರಾಜ್ ಮತ್ತು ದುಃಸ್ಥಿತಿಗೆ ಸಮಾನವಾಗಿದೆ. ಸಮಾಜವಾದ ಹೋಗಿ ಪರಿವಾರವಾದವಾಗುತ್ತಿದೆ ಎಂದು ಲೇವಡಿ ಮಾಡಿದ್ದರು.
ತಮ್ಮ ಸಂದರ್ಶನದಲ್ಲಿ ಸಮಾಜವಾದವನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ ನರೇಂದ್ರ ಮೋದಿ, ಸಮಾಜವಾದಿ ಪಕ್ಷವನ್ನು ಕುಟುಂಬ ರಾಜಕಾರಣ ಮಾಡುವ ಪಕ್ಷ ಎಂದು ಕಟುವಾಗಿ ಟೀಕಿಸಿದ್ದರು. ಉತ್ತರ ಪ್ರದೇಶದ ಸಮಾಜವಾದಿ ಪಕ್ಷವು ಒಂದೇ ಕುಟುಂಬದ 45 ಜನರಿಗೆ ವಿವಿಧ ಜವಾಬ್ದಾರಿಗಳನ್ನು ನೀಡಿದೆ. 25 ವರ್ಷ ವಯಸ್ಸಿನವರಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ. ಇಂತಹ ಕುಟುಂಬ ರಾಜಕಾರಣ ಪದ್ಧತಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಿಜವಾದ ತೊಡಕು ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ವಾಗ್ದಾಳಿ ನಡೆಸಿರುವ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್ ಮತ್ತು ಪ್ರಧಾನಿ ಮೋದಿಗೆ ಮಕ್ಕಳಾಗದಿದ್ದರೆ ನಾನೇನು ಮಾಡಲಿ? ನಿತೀಶ್ ಕುಮಾರ್ ಅವರಿಗೆ ಒಬ್ಬ ಮಗನಿದ್ದಾನೆ. ಆದರೆ, ಆತ ರಾಜಕೀಯಕ್ಕೆ ಯೋಗ್ಯನಲ್ಲ. ಅದಕ್ಕೆ ನಾನೇನು ಮಾಡಲಿ? ಅವರಿಗೂ ಮಕ್ಕಳಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಆಗ ಅವರೂ ಪರಿವಾರವಾದಲ್ಲಿ ತೊಡಗಿಸಿಕೊಳ್ಳಬಹುದು ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ಈಗ ಸಮಾಜವಾದಿಗಳಿಗಿಂತ ಪರಿವಾರವಾದಿಗಳೇ ಹೆಚ್ಚಾಗಿದ್ದಾರೆ. ಲೋಹಿಯಾ ಅವರ ಕುಟುಂಬವನ್ನು ನೀವು ಎಲ್ಲಿಯಾದರೂ ನೋಡುತ್ತೀರಾ? ಅವರು ಸಮಾಜವಾದಿಯಾಗಿದ್ದರು. ನೀವು ಜಾರ್ಜ್ ಫರ್ನಾಂಡಿಸ್ ಅವರ ಕುಟುಂಬವನ್ನು ನೋಡಿದ್ದೀರಾ? ಅವರು ಕೂಡ ಸಮಾಜವಾದಿ. ನಿತೀಶ್ ಬಾಬು ಅವರು ನಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ, ಅವರು ಸಹ ಸಮಾಜವಾದಿ, ಅವರ ಕುಟುಂಬವನ್ನು ನೀವು ನೋಡುತ್ತೀರಾ? ಒಂದು ಕುಟುಂಬದಿಂದ ತಲೆಮಾರುಗಳವರೆಗೆ ಪಕ್ಷವನ್ನು ನಡೆಸಿದಾಗ ಅದರ ಹಳಿ ತಪ್ಪುತ್ತದೆ. ಜಮ್ಮು ಮತ್ತು ಕಾಶ್ಮೀರದಿಂದ ಪ್ರಾರಂಭಿಸಿ ಎರಡು ಪ್ರತ್ಯೇಕ ಕುಟುಂಬಗಳಿಂದ ಎರಡು ಪಕ್ಷಗಳು ನಡೆಯುತ್ತಿವೆ. ಹರಿಯಾಣ, ಜಾರ್ಖಂಡ್, ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ನೀವು ಇದೇ ರೀತಿಯ ಕುಟುಂಬ ರಾಜಕಾರಣವನ್ನು ನೋಡಬಹುದು. ರಾಜವಂಶ ರಾಜಕೀಯ ಪ್ರಜಾಪ್ರಭುತ್ವದ ದೊಡ್ಡ ಶತ್ರು ಎಂದು ಪ್ರಧಾನಿ ಮೋದಿ ಹೇಳಿದ್ದರು.
ನಮ್ಮನ್ನು ಟೀಕಿಸಿ ಪರವಾಗಿಲ್ಲ, ನಿಮ್ಮ ಕೆಲಸ ಏನೆಂದು ಮರೆಯಬೇಡಿ; ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ತಿರುಗೇಟು