Dhanteras 2021 ಧನ್​​ತೇರಸ್ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

| Updated By: ರಶ್ಮಿ ಕಲ್ಲಕಟ್ಟ

Updated on: Nov 02, 2021 | 2:40 PM

Narendra Modi ‘ಧನ್​​ತೇರಸ್ ವಿಶೇಷ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

Dhanteras 2021 ಧನ್​​ತೇರಸ್ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ
Follow us on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಧನ್​​ತೇರಸ್ ಸಂದರ್ಭದಲ್ಲಿ ಜನರಿಗೆ ಶುಭಾಶಯ ಕೋರಿದ್ದಾರೆ. ಧನ್​​ತೇರಸ್ ದೀಪಾವಳಿ ಹಬ್ಬಗಳ ಆರಂಭವನ್ನು ಸೂಚಿಸುತ್ತದೆ. ಇದು ಚಿನ್ನ ಅಥವಾ ಪಾತ್ರೆಗಳನ್ನು ಖರೀದಿಸಲು ಮಂಗಳಕರ ದಿನವೆಂದು ಪರಿಗಣಿಸುತ್ತಾರೆ.ಈ ದಿನವನ್ನು ಆಯುರ್ವೇದದ ದೇವರಾದ ಧನ್ವಂತ್ರಿಯ ಜನ್ಮದಿನವಾಗಿಯೂ ಆಚರಿಸುತ್ತಾರೆ.


‘ಧನ್​​ತೇರಸ್ ವಿಶೇಷ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.


ನಾಡಿನ ಸಮಸ್ತ ಜನತೆಗೆ ಧನ್​​ತೇರಸ್ ಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ಧನ್ವಂತರಿ ಎಲ್ಲರಿಗೂ ಸಂತೋಷ, ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ದಯಪಾಲಿಸಲಿ ಎಂದು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Dhanteras 2021: ನವೆಂಬರ್ 2ರ ಧನ್​ತೇರಸ್​ನಂದು ಚಿನ್ನ ಖರೀದಿಗೆ ಶುಭ ಮುಹೂರ್ತದ ಮಾಹಿತಿ ಇಲ್ಲಿದೆ

 

Published On - 1:57 pm, Tue, 2 November 21