ಪ್ರಧಾನಿ ಮೋದಿ ಗುಜರಾತ್‌ಗೆ ಭೇಟಿ: ಪಾವಗಡ ಬೆಟ್ಟ ಮತ್ತು ಕಾಳಿಕಾ ಮಾತೆ ದೇವಾಲಯದ ವಿಶೇಷತೆಗಳು ಏನೇನು?
ಮೇಲಿನ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ. ಕಾಳಿಕಾ ಮಾತೆಯ ದೇವಾಲಯದ ಇಂದು ಹೇಗಿದೆ ಮತ್ತು ಈ ಹಿಂದೆ ಹೇಗಿತ್ತು ಎಂಬುದರ ಸ್ಥೂಲ ಚಿತ್ರಣ ಇದರಲ್ಲಿದೆ. ಪಾವಗಡ ಬೆಟ್ಟ ಪ್ರದೇಶವು ಪಂಚಮಹಲ್ ಜಿಲ್ಲೆಯ ವ್ಯಾಪ್ತಿಗೆ ಬರುವ ಪುರಸಭಾ ವ್ಯಾಪ್ತಿಗೆ ಬರುತ್ತದೆ.
ಶತಾಯುಷಿ ತಾಯಿಯ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು (Prime Minister Narendra Modi) ಜೂನ್ 17 ಮತ್ತು 18 ರಂದು ಗುಜರಾತ್‌ಗೆ ಭೇಟಿ ಕೊಟ್ಟು ಅಂದಾಜು 21,000 ಕೋಟಿ ರೂ ಯೋಜನೆಗಳ ಉದ್ಘಾಟನೆ/ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಾಳೇ ಶನಿವಾರ ಜೂನ್ 18 ರಂದು ಬೆಳಿಗ್ಗೆ 9:15 ಕ್ಕೆ, ಪಾವಗಡ ಬೆಟ್ಟದಲ್ಲಿರುವ ಶ್ರೀ ಕಾಳಿಕಾ ಮಾತೆಯ ಪುನರಾಭಿವೃದ್ಧಿ ದೇವಸ್ಥಾನಕ್ಕೆ (Shree Kalika Mata at Pavagadh Hill) ಭೇಟಿ ನೀಡಿ ಉದ್ಘಾಟನೆ ಮಾಡಲಿದ್ದಾರೆ.
ಪಾವಗಡ ಬೆಟ್ಟದಲ್ಲಿ ಕಾಳಿಕಾ ಮಾತೆಯ ಪುನರುತ್ಥಾನ ದೇವಾಲಯ ಉದ್ಘಾಟನೆ ಪಾವಗಡ ಬೆಟ್ಟದಲ್ಲಿ ಶ್ರೀ ಕಾಳಿಕಾ ಮಾತೆಯ ಪುನರಾಭಿವೃದ್ಧಿ ಮಂದಿರವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಇದು ಈ ಭಾಗದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತಿದೆ. ದೇವಾಲಯದ ಪುನರಾಭಿವೃದ್ಧಿಯನ್ನು 2 ಹಂತಗಳಲ್ಲಿ ಮಾಡಲಾಗಿದೆ. ಮೊದಲ ಹಂತದ ಪುನರಾಭಿವೃದ್ಧಿಯ ಉದ್ಘಾಟನೆಯನ್ನು ಈ ವರ್ಷದ ಆರಂಭದಲ್ಲಿ ಏಪ್ರಿಲ್‌ನಲ್ಲಿ ಪ್ರಧಾನ ಮಂತ್ರಿ ನೆರವೇರಿಸಿದ್ದರು. ಕಾರ್ಯಕ್ರಮದಲ್ಲಿ ಉದ್ಘಾಟನೆಗೊಳ್ಳಲಿರುವ ಎರಡನೇ ಹಂತದ ಪುನರಾಭಿವೃದ್ಧಿಯ ಶಂಕುಸ್ಥಾಪನೆಯನ್ನು 2017 ರಲ್ಲಿ ಪ್ರಧಾನ ಮಂತ್ರಿ ಮೋದಿ ಹಾಕಿದ್ದರು.
ಪಾವಗಡ ಬೆಟ್ಟ ಮತ್ತು ಕಾಳಿಕಾ ಮಾತೆ ದೇವಾಲಯದ ವಿಶೇಷತೆಗಳು ಏನೇನು?
ಇದರ ಬಗ್ಗೆ ವಿವರಣೆ ಓದುವ ಮೊದಲು ಮೇಲಿನ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ. ಕಾಳಿಕಾ ಮಾತೆಯ ದೇವಾಲಯದ ಇಂದು ಹೇಗಿದೆ ಮತ್ತು ಈ ಹಿಂದೆ ಹೇಗಿತ್ತು ಎಂಬುದರ ಸ್ಥೂಲ ಚಿತ್ರಣ ಇದರಲ್ಲಿದೆ. ಪಾವಗಡ ಬೆಟ್ಟ ಪ್ರದೇಶವು ಪಂಚಮಹಲ್ ಜಿಲ್ಲೆಯ ವ್ಯಾಪ್ತಿಗೆ ಬರುವ ಪುರಸಭಾ ವ್ಯಾಪ್ತಿಗೆ ಬರುತ್ತದೆ. ಇದು ಗುಜರಾತ್ ರಾಜ್ಯದ ವಡೋದರಾದಿಂದ 46 ಕಿ ಮೀ ದೂರದಲ್ಲಿದೆ. ಈ ದೇಗುಲದ ಅಧಿದೇವತೆ ಮಹಾಕಾಳಿ. ಸಾವಿರಾರು ಭಕ್ತಾದಿಗಳು ಇಲ್ಲಿಗೆ ಭೇಟಿ ಕೊಡುತ್ತಾರೆ.
ವನರಾಜ ಚಾವ್ಡಾ ಎಂಬ ರಾಜ ಚಂಪಾನೇರ್ ಎಂಬ ಪುರಾತನ ಉದ್ಯಾನವನ್ನು ಸ್ಥಾಪಿಸಿದ್ದಾನೆ. ಅದು ಆತನ ಪ್ರೀತಿಯ ಸಲಹೆಗಾರ ಚಂಪಾ ಎಂಬಾತನ ಹೆಸರಿನಲ್ಲಿ ಸ್ಥಾಪಿತವಾಗಿದೆ. ಅದಾದ ಮೇಲೆ ಆ ಪ್ರದೇಶವು ಪಟೈ ರಾವಳ್ ಕುಟುಂಬದ ಆಳ್ವಿಕೆಗೆ ಒಳಪಟ್ಟಿತು. ನವರಾತ್ರಿ ವೇಳೆ ಮಹಾ ಕಾಳಿ ಒಬ್ಬ ಮಹಿಳೆಯ ವೇಷ ಧರಿಸಿ ಗಾರ್ಬಾ ನೃತ್ಯ ಮಾಡಿದಳು ಎಂಬ ಮಾತಿದೆ. ಪಟೈ ರಾವಳ್ ಕುಟುಂಬದ ಕೊನೆಯ ರಾಜ ಮಹಾ ಕಾಳಿಯ ರೂಪದಲ್ಲಿದ್ದ ಆ ಮಹಿಳೆಯನ್ನು ಕೆಟ್ಟ ದೃಷ್ಟಿಯಿಂದ ವೀಕ್ಷಿಸಿದನಂತೆ. ಅದರಿಂದ ಕೋಪಗೊಂಡ ಆ ನೃತ್ಯಗಾತಿ ಮಹಿಳೆ (ಮಹಾ ಕಾಳಿಕಾ) ಆ ಪಟ್ಟಣ ಪ್ರದೇಶ ಕುಸಿದು ನಾಶವಾಗಲಿ ಎಂದು ಶಾಪ ಕೊಟ್ಟಳಂತೆ. ಮುಂದೆ ಕಾಲಾಂತರದಲ್ಲಿ ಗುಜರಾತಿನ ಮುಸ್ಲಿಂ ದೊರೆ ಮೊಹಮದ್ ಬೇಗಾಡ 15ನೆಯ ಶತಮಾನದಲ್ಲಿ ಪಾವಗಡವನ್ನು ನುಚ್ಚುನೂರು ಮಾಡಿ, ಬೆಟ್ಟ ಪ್ರದೇಶವನ್ನು ಆಕ್ರಮಿಸಿಕೊಂಡನಂತೆ ಎಂಬ ಐತಿಹ್ಯವಿದೆ.
Also Read:
ಶತಾಯುಷಿ ತಾಯಿಯ ಭೇಟಿಗಾಗಿ ಪ್ರಧಾನಿ ಮೋದಿ ಗುಜರಾತ್‌ಗೆ ಭೇಟಿ, 21000 ಕೋಟಿ ರೂ ಯೋಜನೆಗಳ ಉದ್ಘಾಟನೆ
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ