Narendra Modi: ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಪ್ರಧಾನಿ ನರೇಂದ್ರ ಮೋದಿ ಕಾರು, ವಿಡಿಯೋ ವೈರಲ್

ಅಹಮದಾಬಾದ್‌ನಿಂದ ಗಾಂಧಿನಗರಕ್ಕೆ ತೆರಳುತ್ತಿದ್ದ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ಪ್ರಧಾನಿ ನರೇಂದ್ರ ಮೋದಿಯವರ ತಮ್ಮ  ಬೆಂಗಾವಲು  ಕಾರುಗಳನ್ನು ರಸ್ತೆಯ ಎಡ ಭಾಗಕ್ಕೆ ನಿಧಾನವಾಗಿ ಹೋಗುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.

Narendra Modi: ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಪ್ರಧಾನಿ ನರೇಂದ್ರ ಮೋದಿ ಕಾರು, ವಿಡಿಯೋ ವೈರಲ್
Edited By:

Updated on: Sep 30, 2022 | 3:57 PM

ಗುಜರಾತ್ : ಅಹಮದಾಬಾದ್‌ನಿಂದ ಗಾಂಧಿನಗರಕ್ಕೆ ತೆರಳುತ್ತಿದ್ದ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ಪ್ರಧಾನಿ ನರೇಂದ್ರ ಮೋದಿಯವರ ತಮ್ಮ  ಬೆಂಗಾವಲು  ಕಾರುಗಳನ್ನು ರಸ್ತೆಯ ಎಡ ಭಾಗಕ್ಕೆ ನಿಧಾನವಾಗಿ ಹೋಗುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಶುಕ್ರವಾರ ಅಹಮದಾಬಾದ್‌ನಿಂದ ಗಾಂಧಿನಗರಕ್ಕೆ ಪ್ರಯಾಣಿಸುತ್ತಿದ್ದಾಗ ಆಂಬುಲೆನ್ಸ್‌ಗೆ ದಾರಿ ಮಾಡಿಕೊಡಲು ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆ ಸ್ವಲ್ಪ ಹೊತ್ತು ನಿಂತಿದೆ, ಗುಜರಾತ್ ಬಿಜೆಪಿಯು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ವೀಡಿಯೊದಲ್ಲಿ ಪ್ರಧಾನಿಯವರ ಬೆಂಗಾವಲು ಪಡೆಯ ಭಾಗವಾಗಿದ್ದ ಎರಡು ಎಸ್‌ಯುವಿಗಳು ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ಅಹಮದಾಬಾದ್-ಗಾಂಧಿನಗರ ರಸ್ತೆಯಲ್ಲಿ ನಿಧಾನವಾಗಿ ಎಡಭಾಗಕ್ಕೆ ಚಲಿಸುತ್ತಿರುವುದನ್ನು ತೋರಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಗಾಂಧಿನಗರ-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ ಎಂಬ ಸೆಮಿ ಹೈಸ್ಪೀಡ್ ರೈಲಿಗೆ ಲೋಕಾರ್ಪಣೆ ಮಾಡಿ, ಮಧ್ಯಾಹ್ನ ಅಹಮದಾಬಾದ್‌ನ ದೂರದರ್ಶನ ಕೇಂದ್ರದ ಬಳಿ ಸಾರ್ವಜನಿಕ ರ್ಯಾಲಿ ಮುಗಿಸಿ ಗಾಂಧಿನಗರದ ರಾಜಭವನಕ್ಕೆ ಮೋದಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಅಹಮದಾಬಾದ್‌ನಿಂದ ಗಾಂಧಿನಗರಕ್ಕೆ ಹೋಗುವ ಮಾರ್ಗದಲ್ಲಿ ಪ್ರಧಾನಿ ಮೋದಿಯವರ ಕಾರ್ಕೇಡ್ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ನಿಲ್ಲಿಸಿತು ಎಂದು ಗುಜರಾತ್ ಬಿಜೆಪಿ ಹೇಳಿಕೆಯಲ್ಲಿ ತಿಳಿಸಿದೆ. ಸಂಜೆ ಬನಸ್ಕಾಂತ ಜಿಲ್ಲೆಗೆ ಆಗಮಿಸುವ ಪ್ರಧಾನಿಯವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಪ್ರಸಿದ್ಧ ಅಂಬಾಜಿ ದೇವಸ್ಥಾನದಲ್ಲಿ ಆರತಿ ಮಾಡಲಿದ್ದಾರೆ.

Published On - 3:57 pm, Fri, 30 September 22

TV9 Web

TV9 Kannada

Read More
Loading...
Unable to load recommendations.
Follow Us