ವಿದ್ಯಾರ್ಥಿನಿ ಮುಟ್ಟಾಗಿದ್ದಕ್ಕೆ ತರಗತಿ ಹೊರಗೆ ಕೂರಿಸಿ ಪರೀಕ್ಷೆ ಬರೆಸಿದ ಪ್ರಾಂಶುಪಾಲರು

8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮುಟ್ಟಾಗಿದ್ದಕ್ಕೆ ಆಕೆಗೆ ತರಗತಿಯ ಹೊರಗೆ ಕುಳಿತು ಪರೀಕ್ಷೆ ಬರೆಯುವಂತೆ ಒತ್ತಾಯಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಮಗುವಿನ ತಾಯಿ ಆಕೆಯ ಬಳಿಗೆ ಬಂದು ಏನಾಯಿತು ಎಂದು ಕೇಳುತ್ತಾರೆ, ಆಗ ವಿದ್ಯಾರ್ಥಿನಿ ಪ್ರಾಂಶುಪಾಲರು ಹೊರಗೆ ಕೂರಿಸಿದ್ದರು ಎಂದು ಹೇಳುತ್ತಾಳೆ.ಅದಕ್ಕೆ ಅಸಮಾಧಾನಗೊಂಡ ತಾಯಿ ವಿದ್ಯಾರ್ಥಿನಿಯನ್ನು ತನ್ನ ಮುಟ್ಟಿನ ಸಮಯದಲ್ಲಿ ಹೊರಗೆ ಕೂರಿಸಿ ಪರೀಕ್ಷೆ ಬರೆಯುವಂತೆ ಏಕೆ ಹೇಳಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ವಿದ್ಯಾರ್ಥಿನಿ ಮುಟ್ಟಾಗಿದ್ದಕ್ಕೆ ತರಗತಿ ಹೊರಗೆ ಕೂರಿಸಿ ಪರೀಕ್ಷೆ ಬರೆಸಿದ ಪ್ರಾಂಶುಪಾಲರು
ವಿದ್ಯಾರ್ಥಿನಿ

Updated on: Apr 10, 2025 | 3:00 PM

ಕೊಯಮತ್ತೂರು, ಏಪ್ರಿಲ್ 10: ವಿದ್ಯಾರ್ಥಿನಿಯೊಬ್ಬಳು ಮುಟ್ಟಾಗಿದ್ದಕ್ಕೆ ಶಿಕ್ಷಕರು ತರಗತಿಯಿಂದ ಹೊರಗೆ ಕೂರಿಸಿ ಪರೀಕ್ಷೆ ಬರೆಸಿರುವ ಘಟನೆ ತಮಿಳುನಾಡಿನ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ. 8ನೇ ತರಗತಿ ವಿದ್ಯಾರ್ಥಿನಿ ಶಾಲೆಗೆ ಬಂದ ಬಳಿಕ ಮುಟ್ಟು(Periods) ಕಾಣಿಸಿಕೊಂಡಿತ್ತು. ಆಕೆ ಪ್ರಾಂಶುಪಾಲರ ಬಳಿ ಹೇಳಿಕೊಂಡಾಗ ಅವರು ಶಾಲೆಯ ಹೊರಗಡೆ ಕುಳಿತುಕೊಂಡು ಪರೀಕ್ಷೆ ಬರೆಯುವಂತೆ ಹೇಳಿದ್ದಾರೆ.

ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಮಗುವಿನ ತಾಯಿ ಆಕೆಯ ಬಳಿಗೆ ಬಂದು ಏನಾಯಿತು ಎಂದು ಕೇಳುತ್ತಾರೆ, ಆಗ ವಿದ್ಯಾರ್ಥಿನಿ ಪ್ರಾಂಶುಪಾಲರು ಹೊರಗೆ ಕೂರಿಸಿದ್ದರು ಎಂದು ಹೇಳುತ್ತಾಳೆ.
ಅದಕ್ಕೆ ಅಸಮಾಧಾನಗೊಂಡ ತಾಯಿ ವಿದ್ಯಾರ್ಥಿನಿಯನ್ನು ತನ್ನ ಮುಟ್ಟಿನ ಸಮಯದಲ್ಲಿ ಹೊರಗೆ ಕೂರಿಸಿ ಪರೀಕ್ಷೆ ಬರೆಯುವಂತೆ ಏಕೆ ಹೇಳಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ
ಬಿಳಿ ಮುಟ್ಟಿನ ಸಮಸ್ಯೆಯನ್ನು ಕಡೆಗಣಿಸಲೇ ಬೇಡಿ, ಮನೆಯಲ್ಲೇ ಇದೆ ಸುಲಭ ಪರಿಹಾರ
ಮುಟ್ಟಾದಾಗ ಮಹಿಳೆಯರು ಈ 5 ವಿಷಯಗಳನ್ನು ಮಿಸ್ ಮಾಡಬೇಡಿ
Menstrual Hygiene Day: ಮೌಢ್ಯ-ಮೈಲಿಗೆಗಳು ಮುಖ್ಯವಲ್ಲ, ಆರೋಗ್ಯ-ಸ್ವಚ್ಛತೆಯೇ ಮುಖ್ಯ; ಮುಟ್ಟಿನ ಗುಟ್ಟು ಹೇಳಿದ ಜ್ಯೋತಿ ಇ ಹಿಟ್ನಾಳ್
ವಿಶ್ವ ಋತುಚಕ್ರ ನೈರ್ಮಲ್ಯ ದಿನ: ಮುಟ್ಟಿನ ಬಗ್ಗೆ ಮೌಢ್ಯ, ಮುಜುಗರ ಬೇಡವೇ ಬೇಡ; ಆ ದಿನಗಳಲ್ಲಿ ಸ್ವಚ್ಛತೆಯೇ ಆದ್ಯತೆಯಾಗಲಿ

ಈ ವರ್ಷದ ಜನವರಿಯಲ್ಲಿ, ಉತ್ತರ ಪ್ರದೇಶದ ಬಾಲಕಿಯರ ಶಾಲೆಯ 11 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಶನಿವಾರ ಪರೀಕ್ಷೆ ಬರೆಯುವಾಗ ಸ್ಯಾನಿಟರಿ ನ್ಯಾಪ್ಕಿನ್ ಕೇಳಿದ ಕಾರಣ ಒಂದು ಗಂಟೆ ತರಗತಿಯಿಂದ ಹೊರಹೋಗುವಂತೆ ಹೇಳಲಾಗಿತ್ತು ಎಂದು ವರದಿಯಾಗಿದೆ.

ಬಾಲಕಿಯ ತಂದೆ ದೂರು ದಾಖಲಿಸಿದ್ದು, ತನ್ನ ಮಗಳು ಪರೀಕ್ಷೆಗೆ ಶಾಲೆಗೆ ಹೋಗುತ್ತಿದ್ದಾಗ ತನ್ನ ಮುಟ್ಟು ಪ್ರಾರಂಭವಾಗಿದೆ ಎಂದು ಅರಿತುಕೊಂಡಿದ್ದಾಳೆ ಎಂದು ಹೇಳಿದ್ದಾರೆ. ಪ್ರಾಂಶುಪಾಲರಿಂದ ಸ್ಯಾನಿಟರಿ ಪ್ಯಾಡ್ ಕೇಳಿದ ನಂತರ, ತರಗತಿಯಿಂದ ಹೊರಹೋಗುವಂತೆ ಸೂಚಿಸಲಾಯಿತು ಮತ್ತು ಸುಮಾರು ಒಂದು ಗಂಟೆಗಳ ಕಾಲ ಹೊರಗೆ ನಿಲ್ಲುವಂತೆ ಒತ್ತಾಯಿಸಲಾಯಿತು ಎಂದು ದೂರುದಾರರು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಮುಟ್ಟಾದ ಬಳಿಕ ಈ ಮಹಿಳೆಗೆ 3 ವರ್ಷಗಳ ಕಾಲ ರಕ್ತಸ್ರಾವವೇ ನಿಂತಿರಲಿಲ್ಲವಂತೆ, ಕಾರಣವೇನು?

ಅವರು ಮಹಿಳಾ ಕಲ್ಯಾಣ ಇಲಾಖೆ, ರಾಜ್ಯ ಮಹಿಳಾ ಆಯೋಗ, ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಜಿಲ್ಲಾ ಶಾಲೆಗಳ ನಿರೀಕ್ಷಕರಿಗೆ (DIOS) ಔಪಚಾರಿಕ ದೂರುಗಳನ್ನು ಸಲ್ಲಿಸಿದ್ದಾರೆ. ಈ ವಿಷಯದ ಬಗ್ಗೆ ಅಧಿಕೃತ ವಿಚಾರಣೆಗೆ ಆದೇಶಿಸಲಾಗಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ