ಪುಲ್ವಾಮಾ ದಾಳಿಯ ಹುತಾತ್ಮ ಸೈನಿಕ ಧೌಂಡಿಯಾಲ್ ಪತ್ನಿ ನಿತಿಕಾ ಕೌಲ್ ಭಾರತೀಯ ಸೇನೆಗೆ ಸೇರ್ಪಡೆ

ಮೇಜರ್ ಧೌಂಡಿಯಾಲ್ ಅವರ ನಿಧನಕ್ಕೆ ಕೇವಲ 9 ತಿಂಗಳ ಮೊದಲು ನಿತಿಕಾ ಕೌಲ್​ರನ್ನು ವಿವಾಹವಾಗಿದ್ದರು. ಇದೀಗ ಅವರ ಪತ್ನಿ ಭಾರತೀಯ ಸೇನೆಗೆ ಸೇರುವಂಥ ಮತ್ತು ತನ್ನ ಪತಿಯ ಕರ್ತವ್ಯಕ್ಕೆ ಹೆಮ್ಮೆ ಪಡುವಂಥ ಸ್ಪೂರ್ತಿದಾಯಕ ನಿರ್ಧಾರವನ್ನು ಕೈಗೊಂಡಿದ್ದಾರೆ.

ಪುಲ್ವಾಮಾ ದಾಳಿಯ ಹುತಾತ್ಮ ಸೈನಿಕ ಧೌಂಡಿಯಾಲ್ ಪತ್ನಿ ನಿತಿಕಾ ಕೌಲ್ ಭಾರತೀಯ ಸೇನೆಗೆ ಸೇರ್ಪಡೆ
ನಿತಿಕಾ ಕೌಲ್
Edited By:

Updated on: Aug 14, 2021 | 1:11 PM

ದೆಹಲಿ: ಪುಲ್ವಾಮಾ ಹುತಾತ್ಮ ಸೈನಿಕನ ಪತ್ನಿ ದೇಶ ಸೇವೆಗಾಗಿ ಭಾರತೀಯ ಸೇನೆಗೆ ಶನಿವಾರ ಸೇರ್ಪಡೆಗೊಂಡರು. ತಮ್ಮ ಪತಿಗೆ ಗೌರವ ಸಲ್ಲಿಸಿದರು. ಅವರು ಇಂದು (ಮೇ 29) ಮೊದಲ ಬಾರಿಗೆ ಸೈನ್ಯದ ಸಮವಸ್ತ್ರವನ್ನು ಧರಿಸಿದ್ದು, ಅವರಿಗೆ ಹಾಗೂ ದೇಶಕ್ಕೆ ಇದೊಂದು ಹೆಮ್ಮೆಯ ಕ್ಷಣವಾಗಿತ್ತು. ಮೇಜರ್ ವಿಭೂತಿ ಶಂಕರ್ ಧೌಂಡಿಯಾಲ್, 2018ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಹುತಾತ್ಮರಾಗಿದ್ದರು. ರಾಷ್ಟ್ರಕ್ಕಾಗಿ ಅವರು ಮಾಡಿದ ತ್ಯಾಗಕ್ಕಾಗಿ ಅವರಿಗೆ ಮರಣೋತ್ತರ ಶೌರ್ಯ ಚಕ್ರವನ್ನು ನೀಡಲಾಗಿತ್ತು.

ಇಂದು, ಅವರ ಪತ್ನಿ ನಿತಿಕಾ ಕೌಲ್ ಅವರು ಭಾರತೀಯ ಸೇನೆಯ ಶ್ರೇಣಿಗೆ ಸೇರುವ ಮೂಲಕ ಅವರಿಗೆ ಗೌರವ ಸಲ್ಲಿಸಿದರು. ಆರ್ಮಿ ಕಮಾಂಡರ್ ಉತ್ತರ ಕಮಾಂಡ್ ಲೆಫ್ಟಿನೆಂಟ್ ಜನರಲ್ ವೈ.ಕೆ.ಜೋಶಿ ಅವರಿಂದ ಸ್ಟಾರ್​ಗಳನ್ನು ಪಡೆದುಕೊಂಡರು.

ರಕ್ಷಣಾ ಸಚಿವಾಲಯದ ಪಿ.ಆರ್.ಒ ಉಧಂಪುರ್, ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಪುಲ್ವಾಮದಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ಮೇಜರ್ ವಿಭೂತಿ ಶಂಕರ್‌ ಧೌಂಡಿಯಾಲ್ ಅವರಿಗೆ ಎಸ್‌ಸಿ(ಪಿ) ಗೌರವ ನೀಡಲಾಗಿತ್ತು. ಇಂದು ಅವರ ಪತ್ನಿ ನಿತಿಕಾ ಕೌಲ್ ಇಂಡಿಯನ್ ಆರ್ಮಿ ಸಮವಸ್ತ್ರವನ್ನು ಧರಿಸಿ, ಗೌರವ ಸಲ್ಲಿಸಿದರು ಎಂದು ಬರೆದುಕೊಂಡಿದ್ದಾರೆ.

ಮೇಜರ್ ಧೌಂಡಿಯಾಲ್ ಅವರ ನಿಧನಕ್ಕೆ ಕೇವಲ 9 ತಿಂಗಳ ಮೊದಲು ನಿತಿಕಾ ಕೌಲ್​ರನ್ನು ವಿವಾಹವಾಗಿದ್ದರು. ಇದೀಗ ಅವರ ಪತ್ನಿ ಭಾರತೀಯ ಸೇನೆಗೆ ಸೇರುವಂಥ ಮತ್ತು ತನ್ನ ಪತಿಯ ಕರ್ತವ್ಯಕ್ಕೆ ಹೆಮ್ಮೆ ಪಡುವಂಥ ಸ್ಪೂರ್ತಿದಾಯಕ ನಿರ್ಧಾರವನ್ನು ಕೈಗೊಂಡಿದ್ದಾರೆ.

ತನ್ನ ಗಂಡನ ಮರಣದ ಕೇವಲ ಆರು ತಿಂಗಳ ನಂತರ, ನಿತಿಕಾ ಎಸ್‌ಎಸ್‌ಸಿ ಫಾರ್ಮ್ ಅನ್ನು ಭರ್ತಿ ಮಾಡಿದ್ದರು. ಜೊತೆಗೆ, ಸೇವಾ ಆಯ್ಕೆ ಮಂಡಳಿ (ಎಸ್‌ಎಸ್‌ಬಿ)ಯ ಪರೀಕ್ಷೆ ಮತ್ತು ಸಂದರ್ಶನವನ್ನು ಕೂಡ ಎದುರಿಸಿ, ಪೂರ್ಣಗೊಳಿಸಿದ್ದಾರೆ. ಬಳಿಕ ಶೀಘ್ರದಲ್ಲೇ ತಮ್ಮ ತರಬೇತಿಗಾಗಿ ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ (ಒಟಿಎ) ನಿಯೋಜನೆಗೊಂಡರು. 2021 ರ ಮೇ 29 ರಂದು ಅಧಿಕೃತವಾಗಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ನಿತಿಕಾ ಕೌಲ್ ಧೌಂಡಿಯಾಲ್ ಆಗಿ ಸೇರಿಕೊಂಡರು.

ಇದನ್ನೂ ಓದಿ: PPE Kit: ಕೊರೊನಾ ಯೋಧರಿಗಾಗಿ ಹೊಸ ಮಾದರಿಯ ತಂಪಾದ ಪಿಪಿಇ ಕಿಟ್; ವಿದ್ಯಾರ್ಥಿಯೊಬ್ಬನ ವಿನೂತನ ಸಂಶೋಧನೆ!

35 ವರ್ಷ ದೇಶ ಸೇವೆ ಸಲ್ಲಿಸಿ ಊರಿಗೆ ವಾಪಸ್ ಆದ ಯೋಧನಿಗೆ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ

Published On - 3:21 pm, Sat, 29 May 21