ದೆಹಲಿ: ದೆಹಲಿಯಲ್ಲಿ ನಡೆದ ಮ್ಯಾರಥಾನ್ ಸಭೆಗಳನ್ನು ಮುಗಿಸಿ ಮರಳಿ ಬಂದ ಕೆಲವೇ ಗಂಟೆಗಳ ನಂತರ ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಛನ್ನಿ(Charanjit Singh Channi) ಅವರನ್ನು ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ರಾಷ್ಟ್ರ ರಾಜಧಾನಿಗೆ ಕರೆದಿದೆ. ಮತ್ತೊಂದು ಸುತ್ತಿನ ಮಾತುಕತೆಗಾಗಿ ಕಾಂಗ್ರೆಸ್ ಛನ್ನಿ ಅವರನ್ನು ದೆಹಲಿಗೆ ಬರುವಂತೆ ಹೇಳಿದೆ. ಕ್ಯಾಬಿನೆಟ್ ಮಂತ್ರಿಗಳ ಹೆಸರನ್ನು ಕಾಂಗ್ರೆಸ್ ಇನ್ನೂ ಅಂತಿಮಗೊಳಿಸಿಲ್ಲ, ಮೂಲಗಳ ಪ್ರಕಾರ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ (PPCC) ಮುಖ್ಯಸ್ಥ ನವಜೋತ್ ಸಿಂಗ್ ಸಿಧು (Navjot Singh Sidhu) ಕೂಡ ಚರ್ಚೆಯ ಭಾಗವಾಗಿ ದೆಹಲಿ ತಲುಪುವ ನಿರೀಕ್ಷೆಯಿದೆ. ಛನ್ನಿಯನ್ನು ಗುರುವಾರ ದೆಹಲಿಗೆ ಕರೆಸಲಾಯಿತು, ಅಲ್ಲಿ ಅವರು ಎರಡು ಸಭೆಗಳನ್ನು ನಡೆಸಿದರು. ಮೊದಲನೆಯದು ಹಿರಿಯ ನಾಯಕ ಕೆ ಸಿ ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ಉಸ್ತುವಾರಿ ಹರೀಶ್ ರಾವತ್, ಹರೀಶ್ ಚೌಧರಿ ಮತ್ತು ಅಜಯ್ ಮಾಕೆನ್ ಅವರ ಜತೆ. ಎರಡನೆಯದು ರಾಹುಲ್ ಗಾಂಧಿಯವರೊಂದಿಗೆ ಇದು ಬೆಳಿಗ್ಗೆ 2 ಗಂಟೆಯವರೆಗೆ ನಡೆಯಿತು.
ರಾಹುಲ್ ಅವರು 45 ನಿಮಿಷಗಳ ಕಾಲ ಮಾಜಿ ಪಿಪಿಸಿಸಿ ಮುಖ್ಯಸ್ಥ ಸುನೀಲ್ ಜಾಖಡ್ ಅವರನ್ನು ಭೇಟಿ ಮಾಡಿದ ನಂತರ ಛನ್ನಿಯನ್ನು ದೆಹಲಿಗೆ ಕರೆಸಲು ನಿರ್ಧರಿಸಲಾಯಿತು. ಕ್ಯಾಬಿನೆಟ್‌ನಲ್ಲಿ ಸ್ಥಾನವನ್ನು ಸ್ವೀಕರಿಸಲು ಪಕ್ಷವು ಜಾಖಡ್ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿತ್ತು. ಆದರೆ ಅವರು ನಿರಾಕರಿಸುತ್ತಿದ್ದಾರೆ. ರಾಹುಲ್ ಗಾಂಧಿಯವರ ರಾಯಭಾರಿಯೊಬ್ಬರು ಜಾಖಡ್ ಅವರನ್ನು ಸಭೆಗೆ ಮುನ್ನ ಗುರುವಾರ ಭೇಟಿಯಾಗಿದ್ದರು.
2022 ಕ್ಕಿಂತ ಮೊದಲು ಪಂಜಾಬ್‌ನಲ್ಲಿ ಕಾಂಗ್ರೆಸ್ ಅನ್ನು ಹೇಗೆ ಬಲಪಡಿಸುವುದು ಎಂದು ರಾಹುಲ್ ಮತ್ತು ಜಾಖಡ್ ಚರ್ಚಿಸಿದರು ಎಂದು ಅವರು ಹೇಳಿದರು. ಈ ಬೆಳವಣಿಗೆಗೆ ಮೊದಲು, ಪಂಜಾಬಿನಲ್ಲಿ ಕಾಂಗ್ರೆಸ್ ಕ್ಯಾಬಿನೆಟ್ ಮಂತ್ರಿಗಳ ಪಟ್ಟಿಗಾಗಿ ಕಾಯುತ್ತಿತ್ತು, ಏಕೆಂದರೆ ಸಿಎಂ ತಮ್ಮ ಸಹೋದ್ಯೋಗಿಗಳಿಗೆ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. ಆದರೆ ಅಂತಿಮ ನಿರ್ಧಾರ ಎಐಸಿಸಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರದ್ದೇ ಆಗಿರುತ್ತದೆ ಎಂದು ತಿಳಿದುಬಂದಿದೆ.
“ಈಗಾಗಲೇ ಹಲವಾರು ಪ್ರತಿಭಟನೆಗಳು ನಡೆದಿದ್ದರಿಂದ ಪಕ್ಷದ ನಾಯಕರು ಪಟ್ಟಿಯನ್ನು ಸಾರ್ವಜನಿಕಗೊಳಿಸುವುದರಿಂದ ಹಿಂದೆ ಸರಿಯುತ್ತಿದ್ದರು. ಉದಾಹರಣೆಗೆ, ಮನ್ ಪ್ರೀತ್ ಸಿಂಗ್ ಬಾದಲ್ ಅವರು ಅಮರೀಂದರ್ ಸಿಂಗ್ ರಾಜಾ ವಾರಿಂಗ್ ಅವರ ಸೇರ್ಪಡೆಗೆ ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಗುರ್ಕೀರತ್ ಕೋಟ್ಲಿ ಮತ್ತು ನವತೇಜ್ ಸಿಂಗ್ ಚೀಮಾ ಅವರಂತಹ ಹೆಚ್ಚಿನ ಆಕಾಂಕ್ಷಿಗಳು ಇದ್ದಾರೆ. ಎಲ್ಲಾ ಆಕಾಂಕ್ಷಿಗಳು ಹೇಗೆ ಸೇರಿಕೊಳ್ಳುತ್ತಾರೆ ಎಂದು ನಮಗೆ ಗೊತ್ತಿಲ್ಲ ಎಂದು ಪಕ್ಷದ ನಾಯಕರೊಬ್ಬರು ಹೇಳಿದರು.
ಅಮರಿಂದರ್ ಸಂಪುಟದಿಂದ ಪಕ್ಷವು ಹೆಚ್ಚಿನ ಮಂತ್ರಿಗಳನ್ನು ಉಳಿಸಿಕೊಂಡಿದ್ದರೂ, ಅದು ಕೆಲವು ಹೊಸ ಮುಖಗಳನ್ನು ಸೇರಿಸಿಕೊಳ್ಳಬೇಕು, ಆದರೆ ನಿರ್ಧಾರ ತೆಗೆದುಕೊಳ್ಳುವುದು ಕಷ್ಟಕರವಾಗಿದೆ.
ಎಜಿ ಮತ್ತು ಡಿಜಿಪಿಯ ನೇಮಕಾತಿಯನ್ನೂ ತಡೆಹಿಡಿಯಲಾಗಿದೆ
ಪಂಜಾಬ್ ನಾಯಕರ ನಡುವಿನ ಹಗ್ಗ ಜಗ್ಗಾಟದ ನಡುವೆ ರಾಹುಲ್ ಗಾಂಧಿ ಅವರು ದೀಪೀಂದರ್ ಸಿಂಗ್ ಪಟ್ವಾಲಿಯಾ ಅವರನ್ನು ಅಡ್ವೋಕೇಟ್ ಜನರಲ್ ಆಗಿ ನೇಮಕ ಮಾಡಲು ಒಲವು ತೋರಿದ್ದಾರೆ. ನಂತರ, ಪಂಜಾಬ್‌ನ ಕೆಲವು ಪಕ್ಷದ ನಾಯಕರು ಪಟ್ವಾಲಿಯಾ ಕುಟುಂಬಕ್ಕೆ ಬಿಜೆಪಿ ಒಲವು ಇದೆ ಎಂದು ದೂರಿದರು. ನಂತರ ಗಾಂಧಿ ಛನ್ನಿಯನ್ನು ಬೇರೆಯವರನ್ನು ನೇಮಿಸುವಂತೆ ಕೇಳಿಕೊಂಡರು ಎಂದು ಮೂಲಗಳು ತಿಳಿಸಿವೆ. ಮುಂದಿನ ಎಜಿಯಾಗಿ ಅನ್ಮೋಲ್ ರಟ್ಟನ್ ಸಿಂಗ್ ಸಿಧು ಅವರನ್ನು ನೇಮಿಸಲು ಸರ್ಕಾರ ಈಗ ಯೋಜಿಸುತ್ತಿದೆ. ಆದಾಗ್ಯೂ, ಔಪಚಾರಿಕ ಆದೇಶಕ್ಕಾಗಿ ಕಾಯಲಾಗುತ್ತಿದೆ. ನವಜೋತ್ ಸಿಂಗ್ ಸಿಧು ಮತ್ತು ಮಾಜಿ ಡಿಜಿಪಿ ಮೊಹಮ್ಮದ್ ಮುಸ್ತಫಾ ಪಟ್ವಾಲಿಯಾ ಅವರನ್ನು ಬೆಂಬಲಿಸುತ್ತಿದ್ದರು ಆದರೆ ನೇಮಕಾತಿ ಸಾಧ್ಯವಾಗಲಿಲ್ಲ.
ಮುಂದಿನ ಡಿಜಿಪಿಯ ವಿಚಾರದಲ್ಲಿ ಯಾವುದೇ ಒಮ್ಮತವಿಲ್ಲ. ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಅವರನ್ನು ಮುಂದಿನ ಡಿಜಿಪಿಯನ್ನಾಗಿ ಗುರುವಾರ ಸೂಚಿಸಲಾಗಿದ್ದರೂ, ಪಕ್ಷದ ಹಲವು ನಾಯಕರು ಅವರ ನೇಮಕಾತಿಯನ್ನು ವಿರೋಧಿಸಿದ್ದರಿಂದ ಯಾವುದೇ ಔಪಚಾರಿಕ ಆದೇಶ ಬಂದಿಲ್ಲ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿಮಾಡಿದೆ.
ಇದನ್ನೂ ಓದಿ: Viral Video: ಬಾಂಗ್ರಾ ನೃತ್ಯಕ್ಕೆ ಸಖತ್ತಾಗಿ ಹೆಜ್ಜೆ ಹಾಕಿದ ಪಂಜಾಬ್ ಸಿಎಂ ಚರಣ್ಜಿತ್ ಸಿಂಗ್; ವಿಡಿಯೋ ವೈರಲ್
(Punjab CM Charanjit Singh Channi once again summoned to Delhi Hours after return from national capital)