Varun Gandhi: ಊಹಾಪೋಹಗಳಿಗೆ ತೆರೆ, ಪಿಲಿಭಿತ್​​ನಿಂದ ಸ್ಪರ್ಧಿಸುತ್ತಿಲ್ಲ ವರುಣ್ ಗಾಂಧಿ

|

Updated on: Mar 27, 2024 | 8:58 PM

ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ವರುಣ್ ಗಾಂಧಿಗೆ ಬುಧವಾರ ಕಾಂಗ್ರೆಸ್ ಸೇರಲು ಆಫರ್ ನೀಡಿದ್ದಾರೆ. ವರುಣ್ ಗಾಂಧಿ ಕ್ಲೀನ್ ಇಮೇಜ್ ಹೊಂದಿರುವ ಪ್ರಬಲ ನಾಯಕರಾಗಿದ್ದಾರೆ. ಅವರು ಗಾಂಧಿ ಕುಟುಂಬದೊಂದಿಗೆ ಸಂಪರ್ಕ ಹೊಂದಿದ್ದಾರೆ. ಹೀಗಾಗಿಯೇ ಬಿಜೆಪಿ ಅವರಿಗೆ ಲೋಕಸಭೆ ಟಿಕೆಟ್ ನಿರಾಕರಿಸಿದೆ ಎಂದಿದ್ದಾರೆ.

Varun Gandhi: ಊಹಾಪೋಹಗಳಿಗೆ ತೆರೆ, ಪಿಲಿಭಿತ್​​ನಿಂದ ಸ್ಪರ್ಧಿಸುತ್ತಿಲ್ಲ ವರುಣ್ ಗಾಂಧಿ
ವರುಣ್ ಗಾಂಧಿ
Follow us on

ಲಕ್ನೋ ಮಾರ್ಚ್ 27 : ರಾಜಕೀಯ ವಲಯದಲ್ಲಿನ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಬಿಜೆಪಿ ಸಂಸದ ವರುಣ್ ಗಾಂಧಿ (Varun Gandhi) ಅವರು ಪಿಲಿಭಿತ್ (Pilibhit) ಲೋಕಸಭಾ ಸ್ಥಾನದ ರೇಸ್‌ನಿಂದ ಹೊರಗುಳಿದಿದ್ದಾರೆ. ಏಪ್ರಿಲ್ 19, 2024 ರಂದು ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಪಿಲಿಭಿತ್ ಕ್ಷೇತ್ರಕ್ಕೆ ಬುಧವಾರ ನಾಮಪತ್ರ ಸಲ್ಲಿಕೆ ಮುಕ್ತಾಯವಾಗುತ್ತಿದ್ದಂತೆ, ಸುಲ್ತಾನ್‌ಪುರ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ತಮ್ಮ ತಾಯಿ ಮೇನಕಾ ಗಾಂಧಿ (Maneka Gandhi) ಅವರ ಪರವಾಗಿ ವರುಣ್ ಗಾಂಧಿ ಪ್ರಚಾರದತ್ತ ಗಮನ ಹರಿಸಲಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ. ಸುಲ್ತಾನ್‌ಪುರದಲ್ಲಿ ಮೇ 25 ರಂದು ಆರನೇ ಹಂತದಲ್ಲಿ ಮತದಾನ ನಡೆಯಲಿದೆ.

ವರುಣ್ ಗಾಂಧಿಗೆ ಪಿಲಿಭಿತ್​​ನಿಂದನಿಂದ ಬಿಜೆಪಿ ಟಿಕೆಟ್ ನಿರಾಕರಿಸಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬಹುದು ಎಂಬ ಊಹಾಪೋಹಗಳಿಗೆ ತೆರೆ ಎಳೆದಿದೆ.

ಏತನ್ಮಧ್ಯೆ, ವರುಣ್ ಗಾಂಧಿ ಅವರ ಮುಂದಿನ ನಡೆ ಬಗ್ಗೆ ಊಹಾಪೋಹಗಳು ಕೇಳಿಬರುತ್ತಿದ್ದರೂ ಅವರು ಈ ಬಗ್ಗೆ ಯಾವುದೇಪ್ರತಿಕ್ರಿಯೆ ನೀಡಿಲ್ಲ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ವರುಣ್ ಗಾಂಧಿಗೆ ಬುಧವಾರ ಕಾಂಗ್ರೆಸ್ ಸೇರಲು ಆಫರ್ ನೀಡಿದ್ದಾರೆ. “ಅವರು (ವರುಣ್ ಗಾಂಧಿ) ಕ್ಲೀನ್ ಇಮೇಜ್ ಹೊಂದಿರುವ ಪ್ರಬಲ ನಾಯಕರಾಗಿದ್ದಾರೆ. ಅವರು ಗಾಂಧಿ ಕುಟುಂಬದೊಂದಿಗೆ ಸಂಪರ್ಕ ಹೊಂದಿದ್ದಾರೆ. ಹೀಗಾಗಿಯೇ ಬಿಜೆಪಿ ಅವರಿಗೆ ಲೋಕಸಭೆ ಟಿಕೆಟ್ ನಿರಾಕರಿಸಿದೆ. ಅವರು (ಕಾಂಗ್ರೆಸ್) ಸೇರಬೇಕು ಎಂದು ನಾನು ಭಾವಿಸುತ್ತೇನೆ, ಅವರು ನಮ್ಮ ಪಕ್ಷಕ್ಕೆ ಬಂದರೆ ಖುಷಿ ಎಂದು ಚೌಧರಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ:  ಸುನೀತಾ ಕೇಜ್ರಿವಾಲ್ ಸಿಎಂ ಆಗಲು ರಾಬ್ರಿ ದೇವಿಯ ಹಾದಿ ಹಿಡಿದಿದ್ದಾರೆ: ಅನುರಾಗ್ ಠಾಕೂರ್

ಅವರನ್ನು ರಾಯ್‌ಬರೇಲಿಯಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ಆರಂಭದಲ್ಲಿ ಸೂಚಿಸಿತ್ತು. ಆದರೆ, ಆ ಸ್ಥಾನದಿಂದ ಸ್ಪರ್ಧಿಸಲು ವರುಣ್ ಗಾಂಧಿ ಸಿದ್ಧರಿರಲಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ