ದೇಶ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದೀರಿ: ಮಹಿಳಾ ಪೈಲೆಟ್​ಗಳಿಗೆ ರಾಹುಲ್​ ಗಾಂಧಿ ಅಭಿನಂದನೆ

ಏರ್​ ಇಂಡಿಯಾದ ಅತ್ಯಂತ ದೂರ ಕ್ರಮಿಸುವ, ಉತ್ತರ ಧ್ರುವದ ಮೂಲಕ ಹಾದು ಹೋಗುವ ವಿಮಾನವನ್ನು ಯಶಸ್ವಿಯಾಗಿ ನಿರ್ವಹಿಸಿದ ಮಹಿಳಾ ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳು. ನೀವು ಇಡೀ ದೇಶ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದೀರಿ.

ದೇಶ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದೀರಿ: ಮಹಿಳಾ ಪೈಲೆಟ್​ಗಳಿಗೆ ರಾಹುಲ್​ ಗಾಂಧಿ ಅಭಿನಂದನೆ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
Follow us
Skanda
| Updated By: ಸಾಧು ಶ್ರೀನಾಥ್​

Updated on: Jan 11, 2021 | 5:20 PM

ಬೆಂಗಳೂರು: ಇನ್ನುಮುಂದೆ ಬೆಂಗಳೂರಿನಿಂದ ಸ್ಯಾನ್​ಫ್ರಾನ್ಸಿಸ್ಕೋಗೆ ವಾರದಲ್ಲಿ 2 ದಿನ ಹಾರಾಟ ನಡೆಸಲಿರುವ ಮಹಿಳಾ ಸಿಬ್ಬಂದಿಯನ್ನೊಳಗೊಂಡ ಏರ್‌ಇಂಡಿಯಾ 176 ಬೋಯಿಂಗ್ 777/200 LR ವಿಮಾನ ಇಂದು ಶುಭಾರಂಭಗೊಂಡಿದೆ. 13,993 ಕಿ.ಮೀ. ದೂರ ಕ್ರಮಿಸಿದ ಈ ವಿಮಾನವನ್ನು ಒಟ್ಟು 17 ಗಂಟೆಗಳ ಕಾಲ ನಿರಂತರವಾಗಿ ಚಲಾಯಿಸಿದ ಮಹಿಳಾ ಪೈಲಟ್​ಗಳಿಗೆ ರಾಹುಲ್​ ಗಾಂಧಿ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಏರ್​ ಇಂಡಿಯಾದ ಅತ್ಯಂತ ದೂರ ಕ್ರಮಿಸುವ, ಉತ್ತರ ಧ್ರುವದ ಮೂಲಕ ಹಾದು ಹೋಗುವ ವಿಮಾನವನ್ನು ಯಶಸ್ವಿಯಾಗಿ ನಿರ್ವಹಿಸಿದ ಮಹಿಳಾ ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳು. ನೀವು ಇಡೀ ದೇಶ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದೀರಿ ಎಂದು ರಾಹುಲ್ ಗಾಂಧಿ ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಸ್ಯಾನ್​ ಫ್ರಾನ್ಸಿಸ್ಕೋ ಟು ಬೆಂಗಳೂರು; 17 ಗಂಟೆಗಳ ನಾನ್​ಸ್ಟಾಪ್ ವಿಮಾನಯಾನದ ನೇತೃತ್ವ ವಹಿಸಿದ ಏರ್ ಇಂಡಿಯಾ ಮಹಿಳಾ ಪೈಲಟ್ ತಂಡ