Rahul Gandhi: ನೂತನ ಕೃಷಿ ಕಾಯ್ದೆ ವಿರೋಧಿಸಿ ಟ್ರ್ಯಾಕ್ಟರ್​ ಏರಿ ಸಂಸತ್ತಿಗೆ ಬಂದ ರಾಹುಲ್​ ಗಾಂಧಿ

Rahul Gandhi: ನೂತನ ಕೃಷಿ ಕಾಯ್ದೆ ವಿರೋಧಿಸಿ ಟ್ರ್ಯಾಕ್ಟರ್​ ಏರಿ ಸಂಸತ್ತಿಗೆ ಬಂದ ರಾಹುಲ್​ ಗಾಂಧಿ
ಟ್ರ್ಯಾಕ್ಟರ್​ ಹತ್ತಿ ಬಂದ ರಾಹುಲ್​ ಗಾಂಧಿ

Rahul Gandhi Drives Tractor: ಟ್ರ್ಯಾಕ್ಟರ್​ ಚಲಾಯಿಸಿಕೊಂಡು ಸಂಸತ್ತಿಗೆ ಆಗಮಿಸುವ ಮೂಲಕ ಕೃಷಿ ಕಾಯ್ದೆ ವಿರೋಧಿ ಹೋರಾಟಕ್ಕೆ ರಾಹುಲ್​ ಗಾಂಧಿ ತಮ್ಮ ಬೆಂಬಲ ಸೂಚಿಸಿದರು. ಎಲ್ಲಾ ಮೂರು ಕಾಯ್ದೆಗಳನ್ನೂ ಹಿಂಪಡೆಯಿರಿ ಎಂಬ ಘೋಷ ವಾಕ್ಯವನ್ನು ಟ್ರ್ಯಾಕ್ಟರ್​ ಮುಂಭಾಗಕ್ಕೆ ಕಟ್ಟಲಾಗಿತ್ತು.

TV9kannada Web Team

| Edited By: Skanda

Jul 26, 2021 | 11:44 AM

ದೆಹಲಿ: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಮಾಡುತ್ತಿರುವ ನಿರಂತರ ಹೋರಾಟಕ್ಕೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ (Rahul Gandhi) ಕೂಡಾ ಕೈ ಜೋಡಿಸಿದ್ದು, ಇಂದು ಟ್ರ್ಯಾಕ್ಟರ್ (Tractor)​ ಚಲಾಯಿಸಿಕೊಂಡು ಸಂಸತ್ತಿಗೆ (Parliament) ಆಗಮಿಸುವ ಮೂಲಕ ಕೃಷಿ ಕಾಯ್ದೆ (Farm Laws) ವಿರೋಧಿ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು. ಎಲ್ಲಾ ಮೂರು ಕಾಯ್ದೆಗಳನ್ನೂ ಹಿಂಪಡೆಯಿರಿ ಎಂಬ ಘೋಷ ವಾಕ್ಯವನ್ನು ಟ್ರ್ಯಾಕ್ಟರ್​ ಮುಂಭಾಗಕ್ಕೆ ಕಟ್ಟಲಾಗಿದ್ದು, ರಾಹುಲ್​ ಗಾಂಧಿಗೆ ಅನೇಕರು ಜತೆಯಾದರು.

ಮುಂಗಾರು ಅಧಿವೇಶನದ ವೇಳೆ ಸಂಸತ್ತಿನತ್ತ ಆಗಮಿಸಿದ ವಯನಾಡು ಸಂಸದ ರಾಹುಲ್​ ಗಾಂಧಿ ಟ್ರ್ಯಾಕ್ಟರ್ ಚಲಾಯಿಸುವ ಮೂಲಕ ಕೃಷಿ ಕಾಯ್ದೆ ವಿರೋಧಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು ಗಮನ ಸೆಳೆಯಿತು. ಈ ವೇಳೆ, ಅವರಿಗೆ ಜತೆಯಾದ ಪಂಜಾಬ್​, ಹರಿಯಾಣದ ಕಾಂಗ್ರೆಸ್​ ಸಂಸದರಾದ ದೀಪೆಂದರ್​ ಹೂಡಾ, ರವ್​ನೀತ್​ ಸಿಂಗ್​ ಬಿಟ್ಟು, ಪ್ರತಾಪ್​ ಸಿಂಗ್​ ಬಾಜ್ವಾ ಕೂಡಾ ವಿವಾದಾಸ್ಪದ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

ಕೃಷಿ ಕಾಯ್ದೆಗಳನ್ನು ವಿರೋಧಿಸಿದ ಅವರು ಕೈಯಲ್ಲಿ ಭಿತ್ತಿಪತ್ರಗಳನ್ನು ಹಿಡಿದು ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು, ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಸಂಸತ್ತಿನತ್ತ ಆಗಮಿಸಿದ ಟ್ರ್ಯಾಕ್ಟರ್​ ಮುಂಭಾಗದಲ್ಲಿ ದೊಡ್ಡ ಬ್ಯಾನರ್​ ಒಂದನ್ನು ಕಟ್ಟಲಾಗಿದ್ದು, ಎಲ್ಲಾ ಮೂರು ಕಾಯ್ದೆಗಳನ್ನೂ ಹಿಂಪಡೆಯಿರಿ ಎಂಬ ವಾಕ್ಯ ಎದ್ದು ಕಾಣುತ್ತಿತ್ತು.

ಟ್ರ್ಯಾಕ್ಟರ್​ ಚಲಾಯಿಸುವ ವೇಳೆ ಎನ್​ 95 ಮಾಸ್ಕ್​​ ಧರಿಸಿದ್ದ ರಾಹುಲ್​ ಗಾಂಧಿ, ತಮ್ಮ ಪಕ್ಷದ ಸಂಸದರೊಂದಿಗೆ ಮಾತನಾಡುತ್ತಾ ಸಂಸತ್ತಿನತ್ತ ಆಗಮಿಸಿದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸರ್ಕಾರ ರೈತರ ಧ್ವನಿಯನ್ನು ಹತ್ತಿಕ್ಕಲು ಯತ್ನಿಸುತ್ತಿದ್ದು ಅವರ ಪರವಾಗಿ ಆಗಮಿಸಿದ್ದಾಗಿ ತಿಳಿಸಿದರು. ಸರ್ಕಾರ ಸಂಸತ್ತಿನಲ್ಲಿ ಈ ವಿಚಾರವನ್ನು ಮಾತನಾಡುವುದಕ್ಕೆ ಸಿದ್ಧವಿಲ್ಲ. ಆದರೆ, 2-3 ದೊಡ್ಡ ದೊಡ್ಡ ಉದ್ಯಮಿಗಳ ಪರವಾಗಿ ತರುತ್ತಿರುವ ಈ ಕಾಯ್ದೆಯನ್ನು ಅವರು ಹಿಂಪಡೆಯಲೇಬೇಕಾಗುತ್ತದೆ. ಅವರು ಇದನ್ನು ಯಾರಿಗೋಸ್ಕರ ಜಾರಿ ಮಾಡುತ್ತಿದ್ದಾರೆ ಎನ್ನುವುದು ಇಡೀ ದೇಶಕ್ಕೆ ಗೊತ್ತಾಗಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಕೇಂದ್ರದ ಹೊಸ ಕೃಷಿ ಕಾಯ್ದೆಗಳ ಫಲ: ಪಂಜಾಬ್​ ರೈತರ ಗೋಧಿ ಖರೀದಿಸಿ ನೇರವಾಗಿ ಅವರ ಖಾತೆಗೆ ಹಣ ವರ್ಗಾಯಿಸಿದ ಕೇಂದ್ರ ಆಹಾರ ನಿಗಮ​ 

ಕೇಂದ್ರ ಸರ್ಕಾರದ ಕೊವಿಡ್ 19 ನಿರ್ವಹಣೆ ಬಗ್ಗೆ ಶ್ವೇತಪತ್ರ ಹೊರಡಿಸಿದ ರಾಹುಲ್​ ಗಾಂಧಿ; ಜೀವ ಉಳಿಸಿದ್ದು ಪ್ರಧಾನಿ ಕಣ್ಣೀರಲ್ಲ ಎಂದ ಕಾಂಗ್ರೆಸ್​ ಸಂಸದ

(Rahul Gandhi reaches parliament on tractor protesting against new farm laws)

Follow us on

Related Stories

Most Read Stories

Click on your DTH Provider to Add TV9 Kannada