ಆಮ್ಲಜನಕ ಕೊರತೆಯಿಂದ ಸಾವುಗಳ ಮಾಹಿತಿ ಬಗ್ಗೆ ರಾಹುಲ್ ಟ್ವೀಟ್​ಗೆ ಇಟಾಲಿಯನ್ ಭಾಷೆಯಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್

| Updated By: ರಶ್ಮಿ ಕಲ್ಲಕಟ್ಟ

Updated on: Jul 21, 2021 | 11:29 AM

Rahul Gandhi: ನಾನು ಈ ರಾಜಕುಮಾರನ ಬಗ್ಗೆ ಹೇಳುತ್ತೇನೆ. ಅವನಿಗೆ ಆಗ ಮೆದುಳಿನ ಕೊರತೆ ಇತ್ತು, ಅವನು ಈಗ ಅದನ್ನು ಕಳೆದುಕೊಂಡಿದ್ದಾನೆ ಮತ್ತು ಅವನು ಅದನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾನೆ. ಈ ಪಟ್ಟಿಗಳನ್ನು ರಾಜ್ಯಗಳು ಸಂಗ್ರಹಿಸಿವೆ

ಆಮ್ಲಜನಕ ಕೊರತೆಯಿಂದ ಸಾವುಗಳ ಮಾಹಿತಿ ಬಗ್ಗೆ ರಾಹುಲ್ ಟ್ವೀಟ್​ಗೆ ಇಟಾಲಿಯನ್ ಭಾಷೆಯಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್
ರಾಹುಲ್​ ಗಾಂಧಿ
Follow us on

ದೆಹಲಿ: ಆಮ್ಲಜನಕದ ಕೊರತೆಯಿಂದಾಗಿ ಸಾವುಗಳ ಬಗ್ಗೆ ಮಾಹಿತಿಯ ಕೊರತೆಯ ಬಗ್ಗೆ ಕೇಂದ್ರದ ಹೇಳಿಕೆಯು ಮಂಗಳವಾರ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ. ಹಲವಾರು ಕಾಂಗ್ರೆಸ್ ನಾಯಕರು ಸರ್ಕಾರವನ್ನು ಟೀಕಿಸಿದ್ದು ಈ ವಿಷಯದ ಬಗ್ಗೆ ರಾಹುಲ್ ಗಾಂಧಿಯವರ ಟ್ವೀಟ್​ಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಎರಡನೇ ಅಲೆಯಲ್ಲಿ ಆಮ್ಲಜನಕದ ಕೊರತೆ ಒಂದು ದೊಡ್ಡ ಸಮಸ್ಯೆಯಾಯಿತು. ಆಸ್ಪತ್ರೆಗಳು ನಿಭಾಯಿಸಲು ಹೆಣಗಾಡುತ್ತಿದ್ದಂತೆ, ರೋಗಿಗಳ ಸಾವು ದೇಶದ ಕೆಲವು ಭಾಗಗಳಿಂದ ವರದಿಯಾಗಿದೆ ಮತ್ತು ಈ ವಿಷಯವು ಹಲವಾರು ನ್ಯಾಯಾಲಯಗಳಲ್ಲಿ ಕೊನೆಗೊಂಡಿತು. ಆದಾಗ್ಯೂ ರಾಜ್ಯಸಭೆಯಲ್ಲಿ ಮಂಗಳವಾರ ಕೇಂದ್ರವು ಆಮ್ಲಜನಕದ ಕೊರತೆಯಿಂದ ಯಾವುದೇ ಸಾವಿನ ಬಗ್ಗೆ ರಾಜ್ಯಗಳಿಂದ ಯಾವುದೇ ಡೇಟಾವನ್ನು ಸ್ವೀಕರಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದೆ.
ಮಂಗಳವಾರ ಸಂಜೆ ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ಸರ್ಕಾರದ ಪ್ರತಿಕ್ರಿಯೆಯ ಬಗ್ಗೆ ಸುದ್ದಿಗಳನ್ನು ಟ್ಯಾಗ್ ಮಾಡಿದ್ದಾರೆ. “ಇದು ಕೇವಲ ಆಮ್ಲಜನಕದ ಕೊರತೆಯಾಗಿರಲಿಲ್ಲ. ಸೂಕ್ಷ್ಮತೆ ಮತ್ತು ಸತ್ಯದ ತೀವ್ರ ಕೊರತೆ ಇತ್ತು – ಆಗ ಮತ್ತು ಈಗ” ಎಂದಾಗಿತ್ತು ರಾಹುಲ್ ಟ್ವೀಟ್.


ಇದಕ್ಕೆ ಪ್ರತಿಕ್ರಿಯಿಸಿದ ಸಿಂಗ್, ಇಟಾಲಿಯನ್ ಭಾಷೆಯಲ್ಲಿ ಟ್ವೀಟ್ ಮಾಡಿದ್ದು ಆ ಟ್ವೀಟ್ ಹೀಗಿದೆ. “ನಾನು ಈ ರಾಜಕುಮಾರನ ಬಗ್ಗೆ ಹೇಳುತ್ತೇನೆ. ಅವನಿಗೆ ಆಗ ಮೆದುಳಿನ ಕೊರತೆ ಇತ್ತು, ಅವನು ಈಗ ಅದನ್ನು ಕಳೆದುಕೊಂಡಿದ್ದಾನೆ ಮತ್ತು ಅವನು ಅದನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾನೆ. ಈ ಪಟ್ಟಿಗಳನ್ನು ರಾಜ್ಯಗಳು ಸಂಗ್ರಹಿಸಿವೆ. ಮಾರ್ಪಡಿಸಿದ ಪಟ್ಟಿಗಳನ್ನು ಸಲ್ಲಿಸುವಂತೆ ನಿಮ್ಮ ಪಕ್ಷದ ಆಡಳಿತದಲ್ಲಿರುವ ರಾಜ್ಯಗಳಿಗೆ ನೀವು ಹೇಳಬಹುದು. ಅಲ್ಲಿಯವರಿಗೆ ಸುಳ್ಳು ಹೇಳುವುದನ್ನು ನಿಲ್ಲಿಸಿ.


ಮೇಲ್ಮನೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಸಂಭವಿಸಿದ ಸಾವುಗಳ ಬಗ್ಗೆ ಪ್ರಶ್ನೆಯನ್ನು ಕೇಳಿದ ಕಾಂಗ್ರೆಸ ನ ಕೆ.ಸಿ.ವೇಣುಗೋಪಾಲ್, ಕಿರಿಯ ಆರೋಗ್ಯ ಸಚಿವ ಭಾರತಿ ಪ್ರವೀಣ್ ಪವಾರ್ ವಿರುದ್ಧ “ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ” ಹಕ್ಕುಚ್ಯುತಿ ನಿರ್ಣಯವನ್ನು ಮಂಡಿಸುವುದಾಗಿ ಹೇಳಿದರು.

“ಇದು ಕುರುಡು ಮತ್ತು ಕಾಳಜಿಯಿಲ್ಲದ ಸರ್ಕಾರ. ಆಮ್ಲಜನಕದ ಕೊರತೆಯಿಂದಾಗಿ ಅವರ ಹತ್ತಿರದ ಮತ್ತು ಆತ್ಮೀಯರು ಎಷ್ಟು ಮಂದಿ ಸಾವನ್ನಪ್ಪಿದ್ದಾರೆಂದು ಜನರು ನೋಡಿದ್ದಾರೆ” ಎಂದು ಕೆ.ಸಿ.ವೇಣುಗೋಪಾಲ್ ಹೇಳಿದರು.

ಗೋವಾದಲ್ಲಿ ಮೇ ತಿಂಗಳಲ್ಲಿ ಐದು ದಿನಗಳಲ್ಲಿ 80 ಕ್ಕೂ ಹೆಚ್ಚು ಜನರು ಸರ್ಕಾರಿ ವೈದ್ಯಕೀಯ ಸೌಲಭ್ಯದಲ್ಲಿ ಸಾವನ್ನಪ್ಪಿದರು. ಆಂಧ್ರಪ್ರದೇಶದ ತಿರುಪತಿಯಲ್ಲಿ, ಆಸ್ಪತ್ರೆಯ ಐಸಿಯುನಲ್ಲಿದ್ದ 11 ಕೊವಿಡ್ ರೋಗಿಗಳು ವೈದ್ಯಕೀಯ ಆಮ್ಲಜನಕದ ಪೂರೈಕೆ ಅಡ್ಡಿಪಡಿಸಿದ ನಂತರ ಸಾವನ್ನಪ್ಪಿದರು. ಹೈದರಾಬಾದ್‌ನ ಆಸ್ಪತ್ರೆಯಲ್ಲಿ, ಆಮ್ಲಜನಕ ಪೂರೈಕೆಯಲ್ಲಿ ಎರಡು ಗಂಟೆಗಳ ಕಡಿತದ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಏಳು ರೋಗಿಗಳು ಸಾವನ್ನಪ್ಪಿದ್ದಾರೆ.

ಹೆಚ್ಚಿನ ಸ್ಥಳಗಳಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಸಾವುಗಳು ಸಂಭವಿಸಿವೆ ಎಂದು ಅಧಿಕಾರಿಗಳು ನಿರಾಕರಿಸಿದ್ದಾರೆ.’’

ಆಮ್ಲಜನಕದ ಪೂರೈಕೆಯ ಕೊರತೆಯಿಂದಾಗಿ ಸಾವನ್ನಪ್ಪಿದ ಬಗ್ಗೆ ದೆಹಲಿ ಸರ್ಕಾರ ಆದೇಶಿಸಿದ ತನಿಖೆಯನ್ನು ಕಳೆದ ತಿಂಗಳು ಕೇಂದ್ರ ವೀಟೋ ಮಾಡಿತ್ತು. ದೆಹಲಿಯ ಒಂದು ಆಸ್ಪತ್ರೆಯಲ್ಲಿ, 21 ರೋಗಿಗಳು ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ್ದಾರೆ ಮತ್ತು ಈ ವಿಷಯವು ಹೈಕೋರ್ಟ್‌ನಲ್ಲಿ ಬಾಕಿ ಇದೆ.

ವೈರಸ್‌ನ ಎರಡನೇ ಅಲೆಯಲ್ಲಿ ವರದಿಯಾಗದೆ ಸಾವಿರಾರು ಸಾವುಗಳು ಸಂಭವಿಸಿವೆ ಎಂಬ ಆರೋಪಗಳ ಮಧ್ಯೆ – ಗಂಗಾ ಮರಳು ದಂಡೆಯಲ್ಲಿರುವ ಸಾಮೂಹಿಕ ಸಮಾಧಿಗಳು ಮತ್ತು ನದಿಯ ಕೆಳಗ ಮೃತದೇಹಗಳು ತೇಲಿ ಬಂದಿದೆ. ಸಾವಿನ ಅಂಕಿಅಂಶಗಳನ್ನು ನೋಂದಾಯಿಸುವ ಮತ್ತು ಒದಗಿಸುವ ಉಸ್ತುವಾರಿ ರಾಜ್ಯಗಳ ಮೇಲಿದೆ ಎಂದು ಸರ್ಕಾರ ವಾದಿಸಿದೆ.

ಹೊಸ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಲೋಕಸಭೆಯಲ್ಲಿ ಈ ವಿಷಯದ ಬಗ್ಗೆ ಸರ್ಕಾರವನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ: ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ; ಎಲ್ಲದರ ಬಗ್ಗೆ ಪ್ರಧಾನಿ ಮೋದಿಗೆ ತಿಳಿಸುತ್ತೇನೆ: ಹೆಚ್ ಡಿ ಕುಮಾರಸ್ವಾಮಿ