Tirupati Temple : ಲಾಕ್​ಡೌನ್​ ಬಳಿಕ ತಿಮ್ಮಪ್ಪನ ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆ ಹಣ ಎಷ್ಟು ಗೊತ್ತಾ?

ಕೇವಲ 24 ಗಂಟೆಗಳಲ್ಲಿ 1.89ಕೋಟಿ ರೂಪಾಯಿ ಹುಂಡಿಗೆ‌ ಆದಾಯ ಸಂಗ್ರಹವಾಗಿದ್ದು, 17,310ಭಕ್ತರು ಬಾಲಾಜಿಯ ದರ್ಶನ ಪಡೆದುಕೊಂಡಿದ್ದಾರೆ. ಅಲ್ಲದೆ 7037 ಭಕ್ತರು ತಿರುಮಲದ‌ ಬಾಲಾಜಿ ದೇವಾಲಯದಲ್ಲಿ ತಲೆಕೂದಲು ಸಮರ್ಪಣೆ ಮಾಡಿದ್ದಾರೆ.

Tirupati Temple : ಲಾಕ್​ಡೌನ್​ ಬಳಿಕ ತಿಮ್ಮಪ್ಪನ ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆ ಹಣ ಎಷ್ಟು ಗೊತ್ತಾ?
ತಿರುಪತಿ ದೇವಾಲಯ
Follow us
TV9 Web
| Updated By: Digi Tech Desk

Updated on:Jul 21, 2021 | 3:57 PM

ತಿರುಪತಿ​: ಕೊರೊನಾ ಎರಡನೇ ಅಲೆಯ ಲಾಕ್​ಡೌನ್​ ನಂತರದಲ್ಲಿ ದೇವಾಲಯದ ಪ್ರವೇಶಕ್ಕೆ ಅವಕಾಶ ದೊರೆತಿದ್ದು, ಭಕ್ತರು ದೇವರ ದರ್ಶನಕ್ಕೆ ಮುಂದಾಗಿದ್ದಾರೆ. ಇದರ ಅನುಸಾರ ಆಂಧ್ರಪ್ರದೇಶದಲ್ಲಿನ ತಿರುಮಲದ‌ ಬಾಲಾಜಿ ದೇವಾಲಯವೂ ಕೂಡ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ. ಆ ಪ್ರಕಾರ ಕಳೆದ‌ 24ಗಂಟೆಗಳಲ್ಲಿ ತಿರುಮಲದ‌ ಬಾಲಾಜಿ ದೇವಾಲಯದ ಹುಂಡಿಯಲ್ಲಿ(Temple Hundi) ಅಧಿಕ ಪ್ರಮಾಣದ ಆದಾಯ‌ ಸಂಗ್ರಹವಾಗಿದೆ. ಕೇವಲ 24 ಗಂಟೆಗಳಲ್ಲಿ 1.89ಕೋಟಿ ರೂಪಾಯಿ ಹುಂಡಿಗೆ‌ ಆದಾಯ ಸಂಗ್ರಹವಾಗಿದ್ದು, 17,310ಭಕ್ತರು ಬಾಲಾಜಿಯ ದರ್ಶನ ಪಡೆದುಕೊಂಡಿದ್ದಾರೆ. ಅಲ್ಲದೆ 7037 ಭಕ್ತರು ತಿರುಮಲದ‌ ಬಾಲಾಜಿ ದೇವಾಲಯದಲ್ಲಿ ತಲೆಕೂದಲು ಸಮರ್ಪಣೆ ಮಾಡಿದ್ದಾರೆ.

ಕಳೆದ ಬಾರಿ ಅಂದರೆ ಕೊರೊನಾ ಮೊದಲನೇ ಅಲೆಯ ಸಂದರ್ಭದಲ್ಲಿನ ಲಾಕ್​ಡೌನ್​ಗೂ ಮುನ್ನ ತಿರುಮಲದ ಬಾಲಾಜಿ ದೇವಸ್ಥಾನದಲ್ಲಿ 800 ಕೋಟಿ ರೂಪಾಯಿ ಹುಂಡಿ ಹಣ ಸಂಗ್ರಹವಾಗುತ್ತಿತ್ತು. ನಂತರ ಅಂದರೆ ಮೊದಲ ಕೊರೊನಾ ಅಲೆಯ ಅನ್​ಲಾಕ್​ ಬಳಿಕ (ಜೂನ್ 2020 ರಲ್ಲಿ )ಕೊವಿಡ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಹಲವಾರು ನಿರ್ಬಂಧಗಳೊಂದಿಗೆ ಈ ದೇವಾಲಯವನ್ನು ತೆರೆಯಲಾಯಿತು. ಅದರಂತೆ ಟಿಕೆಟ್ ಸಂಗ್ರಹಣೆ, ಪ್ರಸಾದಗಳ ಮಾರಾಟ, ವಸತಿ ಸೌಕರ್ಯಗಳು ಮತ್ತು ಹುಂಡಿ ಸಂಗ್ರಹಗಳು ಸೇರಿದಂತೆ ಒಟ್ಟಾರೆ ಆದಾಯದ ಮೇಲೆ ಪರಿಣಾಮ ಬೀರಿತು. ಆ ಪ್ರಕಾರ 100-150 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ.

ಕೊವಿಡ್​ಗೂ ಮುನ್ನ60,000ದಿಂದ ಒಂದು ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು ಮತ್ತು ಸರಾಸರಿ ಹುಂಡಿ ಸಂಗ್ರಹವು ಪ್ರತಿದಿನ ಸುಮಾರು 3.5 ರಿಂದ 5 ಕೋಟಿ ರೂಪಾಯಿವರೆಗೆ ಸಂಗ್ರಹವಾಗುತ್ತಿತ್ತು. ಮೊದಲನೇ ಅಲೆಯ ಲಾಕ್​ಡೌನ್​ ಮುಗಿದ ನಂತರ ಹಂತ ಹಂತವಾಗಿ ಹುಂಡಿ ಆದಾಯ ಹೆಚ್ಚಾಗಿದ್ದು, ಜೂನ್‌ನಲ್ಲಿ ದೇವಾಲಯಕ್ಕೆ 1.1 ಕೋಟಿ ರೂಪಾಯಿ, ಜುಲೈ 16.69 ಕೋಟಿ ರೂಪಾಯಿ, ಆಗಸ್ಟ್ 18.43 ಕೋಟಿ ರೂಪಾಯಿ, ಸೆಪ್ಟೆಂಬರ್ 32.04 ಕೋಟಿ ರೂಪಾಯಿ, ಅಕ್ಟೋಬರ್ 47.52 ಕೋಟಿ ರೂಪಾಯಿ, ನವೆಂಬರ್ 61.29 ಕೋಟಿ ರೂಪಾಯಿ, ಡಿಸೆಂಬರ್ 79.64 ಕೋಟಿ ರೂಪಾಯಿ ಸಂಗ್ರಹವಾಗಿದೆ.

ದೇಶಾದ್ಯಂತ ಕೊರೊನಾ ಪ್ರಕರಣಗಳು ಇಳಿಮುಖವಾಗುತ್ತಿದ್ದಂತೆ, ತಿರುಮಲದ ಬಾಲಾಜಿ ದೇವಸ್ಥಾನದ ಹುಂಡಿ ಹಣದ ಸಂಗ್ರಹವು 2021ರ ಜನವರಿಯಲ್ಲಿ 83.92 ಕೋಟಿ ರೂಪಾಯಿ ಮತ್ತು ಫೆಬ್ರವರಿಯಲ್ಲಿ 90.45 ಕೋಟಿ ರೂಪಾಯಿ, ಮಾರ್ಚ್ ಹುಂಡಿ ಸಂಗ್ರಹವು 12 ತಿಂಗಳಲ್ಲಿ ಮೊದಲ ಬಾರಿಗೆ 100 ಕೋಟಿ ಗಡಿ ದಾಟಿತು ಮತ್ತು ಆ ಮೂಲಕ 104.42 ಕೋಟಿ ರೂಪಾಯಿ ಹುಂಡಿ ಹಣ ಸಂಗ್ರಹವಾಗಿತ್ತು. ಆದರೆ ಮತ್ತೆ ಕೊರೊನಾ ಎರಡನೇ ಅಲೆ ಕಾಣಿಸಿಕೊಂಡಿದ್ದು, ಪುನಃ ಈಗ ಅನ್​ಲಾಕ್​ ಆಗಿ ದೇವಾಲಯ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ.

ಇದನ್ನೂ ಓದಿ: Temple Hundi | ದೇವಾಲಯದ ಹುಂಡಿ ಎಣಿಕೆ: ಒಂದೇ ತಿಂಗಳಲ್ಲಿ‌ ಕೋಟ್ಯಾಧೀಶ್ವರನಾದ ನಂಜುಂಡೇಶ್ವರ, ಮಲೆ ಮಹದೇಶ್ವರ

Tonsure| ದೇವಸ್ಥಾನಗಳಲ್ಲಿ ಮುಡಿ ನೀಡೋದೇಕೆ? ಇದರ ಹಿಂದೆ ಅಡಗಿರೋ ಅರ್ಥವೇನು?

Published On - 11:54 am, Wed, 21 July 21

ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ