Rajasthan Earthquake: ರಾಜಸ್ಥಾನದಲ್ಲಿ ಭೂಕಂಪ; ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆ ದಾಖಲು
ನಿನ್ನೆ ತಡರಾತ್ರಿ 2.10ರ ಹೊತ್ತಿಗೆ ಮೇಘಾಲಯದ ಪಶ್ಚಿಮ ಗ್ಯಾರೋ ಹಿಲ್ನಲ್ಲಿಯೂ 4.1 ರಿಕ್ಟರ್ ಪ್ರಮಾಣದಷ್ಟು ಭೂಮಿ ಕಂಪನವಾಗಿದೆ. ಇಲ್ಲಿ ತುರಾ ಕೇಂದ್ರಬಿಂದುವಾಗಿದ್ದು, ಭೂಮಿಯಿಂದ 10 ಕಿಮೀ ಆಳದಲ್ಲಿ ಭೂಮಿ ನಡುಗಿದೆ.
ಬಿಕಾನೆರ್: ರಾಜಸ್ಥಾನದ ಬಿಕಾನೇರ್ನಲ್ಲಿ ಇಂದು ಮುಂಜಾನೆ ಭೂಕಂಪ (Earthquake) ಉಂಟಾಗಿದ್ದು, ರಿಕ್ಟರ್ ಮಾಪಕ (Rictor Scale)ದಲ್ಲಿ 5.3 ತೀವ್ರತೆ ದಾಖಲಾಗಿದೆ. ಇಂದು ಮುಂಜಾನೆ 5.24 ಗಂಟೆ ಹೊತ್ತಿಗೆ ಭೂಮಿ ನಡುಗಿದ್ದಾಗಿ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (National Centre For Seismology) ತಿಳಿಸಿದೆ. ಇಲ್ಲಿ ಭೂ ಮೇಲ್ಮೈನಿಂದ 110 ಕಿ.ಮೀ.ಆಳದಲ್ಲಿ ಭೂಮಿ ನಡುಗಿದ್ದು, ಬಿಕಾನೇರ್ ಭೂಕಂಪನದ ಕೇಂದ್ರಬಿಂದುವಾಗಿತ್ತು ಎಂದೂ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
Earthquake of Magnitude:5.3, Occurred on 21-07-2021, 05:24:29 IST, Lat: 29.19 & Long: 70.05, Depth: 110 Km ,Location: 343km WNW of Bikaner, Rajasthan, India for more information download the BhooKamp App https://t.co/P7YBFyp3Sb pic.twitter.com/vPNJV8erui
— National Center for Seismology (@NCS_Earthquake) July 21, 2021
ಹಾಗೇ, ನಿನ್ನೆ ತಡರಾತ್ರಿ 2.10ರ ಹೊತ್ತಿಗೆ ಮೇಘಾಲಯದ ಪಶ್ಚಿಮ ಗ್ಯಾರೋ ಹಿಲ್ನಲ್ಲಿಯೂ 4.1 ರಿಕ್ಟರ್ ಪ್ರಮಾಣದಷ್ಟು ಭೂಮಿ ಕಂಪನವಾಗಿದೆ. ಇಲ್ಲಿ ತುರಾ ಕೇಂದ್ರಬಿಂದುವಾಗಿದ್ದು, ಭೂಮಿಯಿಂದ 10 ಕಿಮೀ ಆಳದಲ್ಲಿ ಭೂಮಿ ನಡುಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಟ್ವೀಟ್ ಮಾಡಿದೆ. ದೇಶಾದ್ಯಂತ ಬಹುತೇಕ ಎಲ್ಲ ಕಡೆಗೂ ಸಿಕ್ಕಾಪಟೆ ಮಳೆಯಾಗುತ್ತಿದ್ದು, ಈ ಮಧ್ಯೆ ಅಲ್ಲಲ್ಲಿ ಭೂಕಂಪನವೂ ಉಂಟಾಗುತ್ತಿದೆ. ಸ್ವಲ್ಪ ದಿನಗಳ ಹಿಂದೆ ಮಣಿಪುರದಲ್ಲಿ 4.5ರಷ್ಟು ತೀವ್ರತೆಯುಳ್ಳ ಭೂಕಂಪನ ಆಗಿತ್ತು. ಇನ್ನೂ ಹಲವೆಡೆಗಳಲ್ಲಿ ಭೂಕುಸಿತ ಕೂಡ ಆಗುತ್ತಿದೆ.
Earthquake of Magnitude:4.1, Occurred on 21-07-2021, 02:10:49 IST, Lat: 25.88 & Long: 90.34, Depth: 10 Km ,Location: 42km NNE of Tura, Meghalaya, India for more information download the BhooKamp App https://t.co/mrERsEOfTU @Indiametdept @ndmaindia pic.twitter.com/tIMXLY4aLS
— National Center for Seismology (@NCS_Earthquake) July 20, 2021
ಇದನ್ನೂ ಓದಿ: Eid Al Adha Mubarak 2021: ಬಕ್ರೀದ್ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್
Published On - 10:22 am, Wed, 21 July 21