AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ; ಎಲ್ಲದರ ಬಗ್ಗೆ ಪ್ರಧಾನಿ ಮೋದಿಗೆ ತಿಳಿಸುತ್ತೇನೆ: ಹೆಚ್ ಡಿ ಕುಮಾರಸ್ವಾಮಿ

ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ. ಈ 3 ನೀರಾವರಿ ಯೋಜನೆಗಳ ಬಗ್ಗೆ ಕೂಡ ಮನವಿ ಮಾಡುತ್ತೇವೆ ಎಂದು ಜೆಡಿಎಸ್ ನಾಯಕ ಕುಮಾರಸ್ವಾಮಿ ತಿಳಿಸಿದ್ದಾರೆ.

ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ; ಎಲ್ಲದರ ಬಗ್ಗೆ ಪ್ರಧಾನಿ ಮೋದಿಗೆ ತಿಳಿಸುತ್ತೇನೆ: ಹೆಚ್ ಡಿ ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ
TV9 Web
| Updated By: ganapathi bhat|

Updated on:Jul 20, 2021 | 6:47 PM

Share

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಕೆಲಸ ಆಗಬೇಕಿದೆ. ಅದಕ್ಕೆ ಈಗಾಗಲೇ 75,000 ಕೋಟಿ ರೂಪಾಯಿ ಖರ್ಚು ಮಾಡಿದ್ದೇವೆ. ಇನ್ನೂ 6,500 ಕೋಟಿ ಹಣ ಬೇಕು. ಆ ಯೋಜನೆ ನನೆಗುದಿಗೆ ಬಿದ್ದಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ತಮಿಳುನಾಡಿನಲ್ಲಿ ಹೆಚ್ಚು ನೀರಾವರಿ ಯೋಜನೆಗಳ ಉಪಯೋಗ ಮಾಡುತ್ತಾರೆ. ಅವರು ನೀರಾವರಿ ಯೋಜನೆಗಳನ್ನು ಹೆಚ್ಚು ಉಪಯೋಗಿಸಿಕೊಳ್ತಿದ್ದಾರೆ. ಈ ಎಲ್ಲಾ ವಿಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ತಿಳಿಸುತ್ತೇನೆ. ರಾಜ್ಯಪಾಲರ ಮೂಲಕ ಮಾಹಿತಿಯನ್ನು ರವಾನಿಸುತ್ತೇವೆ. ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ. ಈ 3 ನೀರಾವರಿ ಯೋಜನೆಗಳ ಬಗ್ಗೆ ಕೂಡ ಮನವಿ ಮಾಡುತ್ತೇವೆ ಎಂದು ಜೆಡಿಎಸ್ ನಾಯಕ ಕುಮಾರಸ್ವಾಮಿ ತಿಳಿಸಿದ್ದಾರೆ.

ರಾಜ್ಯಕ್ಕೆ ಎರಡೂ ರಾಷ್ಟ್ರೀಯ ಪಕ್ಷಗಳು ಮಾರಕ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕಾಂಗ್ರೆಸ್ ನಾಯಕರ ಹೇಳಿಕೆಗೆ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿಯಲ್ಲಿನ ಬೆಳವಣಿಗೆ ಬಗ್ಗೆ ನಾನು ಈಗಾಗಲೇ ಹೇಳಿದ್ದೇನೆ. ಬಿಜೆಪಿಯ ರಾಷ್ಟ್ರ ಮತ್ತು ರಾಜ್ಯ ನಾಯಕರಿಗೆ ನಿಮ್ಮ ಗೊಂದಲಗಳನ್ನು 4 ಗೋಡೆ ಮಧ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳುತ್ತೇನೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಗಮನಿಸಿದ್ದೇನೆ. ಒಂದು ಗುಂಪು ಸಿಎಂ ಬಗ್ಗೆ ಅನುಕಂಪದಲ್ಲಿ ಮಾತನಾಡುತ್ತೆ. ಮತ್ತೊಂದು ಗುಂಪು ಸಿಎಂ ವಿರುದ್ಧ ಮಾತನಾಡುತ್ತಿದೆ. ಭ್ರಷ್ಟ ಸರ್ಕಾರ, ಇಂಥ ಭ್ರಷ್ಟ ಸಿಎಂ ಇರಬಾರದು ಎನ್ನುತ್ತಿದೆ. ಇದರಿಂದಲೇ ಕಾಂಗ್ರೆಸ್ ನಾಯಕರ ದ್ವಿಮುಖ ನೀತಿ ಬಯಲಾಗಿದೆ. ರಾಜ್ಯಕ್ಕೆ ಎರಡೂ ರಾಷ್ಟ್ರೀಯ ಪಕ್ಷಗಳು ಮಾರಕ ಎಂದು ಹೆಚ್​.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಬಿಎಸ್‌ವೈರವರೇ ಅಧಿಕಾರ ಪೂರ್ಣಗೊಳಿಸಬೇಕು: ಡಾ.ಜಿ. ಪರಮೇಶ್ವರ್ ವ್ಯಂಗ್ಯ ಮತ್ತೊಂದೆಡೆ ಬಿ.ಎಸ್. ಯಡಿಯೂರಪ್ಪ ಬಹಳಷ್ಟು ಕಷ್ಟಬಿದ್ದು ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಿದ್ರು. ಆದ್ರೆ ಯಡಿಯೂರಪ್ಪರನ್ನ ಬದಲಾಯಿಸಲು ಹೊರಟಿರೋದು ದುರದೃಷ್ಟಕರ ಎಂದು ತುಮಕೂರಿನಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ವ್ಯಂಗ್ಯವಾಡಿದ್ದಾರೆ.

ಸಿಎಂ ಆಗಬೇಕೆಂದು ಯಡಿಯೂರಪ್ಪ ಬಹಳ ಆಸೆ ಇಟ್ಟುಕೊಂಡು ಇದ್ದರು. ಸರ್ಕಾರ ನಡೆಸುವ ಪ್ರಯತ್ನ ಮಾಡಿದ್ರು. ಆದರೆ, ಅವರ ಪಕ್ಷದವರಿಂದಲೇ ಬಿಎಸ್‌ವೈ ಬದಲಾವಣೆಗೆ ಪ್ರಯತ್ನ ನಡೆಯುತ್ತಿದೆ. ಈ ಪ್ರಯತ್ನ ದುರದೃಷ್ಟಕರ. ಸಂಪುಟದಲ್ಲಿ ಇದ್ದವರೇ ಸಿಎಂ ಬದಲಾಯಿಸಲು ಹೊರಟಿದ್ದಾರೆ. ಬಿಜೆಪಿಯವರ ಕಿತ್ತಾಟ ಆಡಳಿತದ ಮೇಲೆ ಪರಿಣಾಮ ಬೀರುತ್ತೆ ಎಂದು ಪರಮೇಶ್ವರ್ ಹೇಳಿದ್ದಾರೆ.

ಇದನ್ನೆಲ್ಲಾ ಸರಿಪಡಿಸಿಕೊಳ್ಳುವಂತೆ ಸಿಎಂಗೆ ಮೊದಲೇ ಹೇಳಿದ್ದೆ. ಬಿಜೆಪಿ ತಪ್ಪುಗಳು ಬಹಳಷ್ಟಿವೆ, ಇದರಿಂದ ನಮಗೆ ಅನುಕೂಲ. ಸಿಎಂ ಆಗಿ ಬಿಎಸ್‌ವೈರವರೇ ಅಧಿಕಾರ ಪೂರ್ಣಗೊಳಿಸಬೇಕು. ಯಾಕಂದ್ರೆ ಅವರು ತಪ್ಪುಗಳನ್ನು ಮಾಡಿದರೆ ನಮಗೆ ಅನುಕೂಲ ಎಂದು ಪರಮೇಶ್ವರ್ ಟೀಕಿಸಿದ್ದಾರೆ.

ಇದನ್ನೂ ಓದಿ: ಯಾರು ಬದಲಾವಣೆ ಆದ್ರೂ ಮುಂದಿನ 2 ವರ್ಷ ನಾವೇ ಸಚಿವರಾಗಿ ಇರುತ್ತೇವೆ: ಎಂಟಿಬಿ ನಾಗರಾಜ್

ವಿಧಾನಸೌಧ ಕಾರಿಡಾರ್​ನಲ್ಲಿ ಮಾಧ್ಯಮ ನಿರ್ಬಂಧ ಆದೇಶ ವಾಪಸ್ ಪಡೆದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

(HD Kumaraswamy on Mekedatu Mahadayi Projects HDK and G Parameshwar on BS Yediyurappa)

Published On - 6:46 pm, Tue, 20 July 21