ಯಾರು ಬದಲಾವಣೆ ಆದ್ರೂ ಮುಂದಿನ 2 ವರ್ಷ ನಾವೇ ಸಚಿವರಾಗಿ ಇರುತ್ತೇವೆ: ಎಂಟಿಬಿ ನಾಗರಾಜ್

ಸದ್ಯಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಕುರ್ಚಿ ಖಾಲಿಯಾದಾಗ ಹೈಕಮಾಂಡ್ ಆ ಬಗ್ಗೆ ತೀರ್ಮಾನಿಸುತ್ತೆ. ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.

ಯಾರು ಬದಲಾವಣೆ ಆದ್ರೂ ಮುಂದಿನ 2 ವರ್ಷ ನಾವೇ ಸಚಿವರಾಗಿ ಇರುತ್ತೇವೆ: ಎಂಟಿಬಿ ನಾಗರಾಜ್
ಎಂಟಿಬಿ ನಾಗರಾಜ್

ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಆದ್ರೆ ಯಾವುದೇ ತೊಂದರೆ ಆಗುವುದಿಲ್ಲ. ಯಾರು ಬದಲಾವಣೆ ಆದ್ರೂ ನಾವು ಸಚಿವರಾಗಿ ಇರುತ್ತೇವೆ. ಮುಂದಿನ 2 ವರ್ಷ ನಾವೇ ಸಚಿವರಾಗಿ ಇರುತ್ತೇವೆ ಎಂದು ಹೊಸಕೋಟೆಯಲ್ಲಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ವಿಚಾರ ಬಹಳ ಸ್ವರೂಪ ಪಡೆದುಕೊಂಡು ಸಾಗುತ್ತಿದೆ. ವಿವಿಧ ರಾಜಕೀಯ ನಾಯಕರು, ಸ್ವಾಮೀಜಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸದ್ಯಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಕುರ್ಚಿ ಖಾಲಿಯಾದಾಗ ಹೈಕಮಾಂಡ್ ಆ ಬಗ್ಗೆ ತೀರ್ಮಾನಿಸುತ್ತೆ. ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ವಿಚಾರವಾಗಿ ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ. ನಮ್ಮ ನಾಯಕರು ಇನ್ನೂ ಯಾವುದೇ ಘೋಷಣೆ ಮಾಡಿಲ್ಲ. ಸುಮ್ಮನೇ ಈ ರೀತಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಕಾಂಗ್ರೆಸ್‌ನವರು ಅನುಕಂಪದ ಹೇಳಿಕೆ ನೀಡುವ ಅಗತ್ಯವಿಲ್ಲ. ಇದು ಬಿಜೆಪಿಯ ಆಂತರಿಕ ವಿಚಾರ ಎಂದು ಆರ್. ಅಶೋಕ್ ಹೇಳಿದ್ದಾರೆ.

ಮತ್ತೊಂದೆಡೆ, ಸಿಎಂ ಯಡಿಯೂರಪ್ಪ ಬದಲಾವಣೆ ಕೇವಲ ವದಂತಿ ಎಂದು ವಿಕಾಸಸೌಧದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ. ನಮ್ಮದು ಯಾವುದೇ ರೀತಿಯ ಮಿತ್ರಮಂಡಳಿ ಇಲ್ಲ. ಮಿತ್ರಮಂಡಳಿ ಎಂಬುದು ಹಳೇ ಪದ ಎಂದು ಅವರು ತಿಳಿಸಿದ್ದಾರೆ.

ಶಾಸಕರಾದವರಿಗೆ ಸಿಎಂ ಆಗಬೇಕೆಂಬುದು ಇರುತ್ತದೆ. ಎಲ್ಲವೂ ಪಕ್ಷದ ಕೈಯಲ್ಲಿರುತ್ತೆ. ನಾವು ಊಟ ಮಾಡಿದ್ರೆ, ಸಭೆ ಅಂದುಕೊಳ್ಳೋದು ತಪ್ಪು. ನಾವು ಸೇರಿರೋದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಸಿಎಂ ಯಡಿಯೂರಪ್ಪ ಪರ ಪೇಜಾವರ ಶ್ರೀಗಳ ಬ್ಯಾಟಿಂಗ್; ಯಡಿಯೂರಪ್ಪರ ತಂಟೆಗೆ ಬರದಂತೆ ವಿವಿಧ ಮಠಾಧೀಶರಿಂದಲೂ ಎಚ್ಚರಿಕೆ

ವಿಧಾನಸೌಧ ಕಾರಿಡಾರ್​ನಲ್ಲಿ ಮಾಧ್ಯಮ ನಿರ್ಬಂಧ ಆದೇಶ ವಾಪಸ್ ಪಡೆದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

(Minister MTB Nagaraj R Ashok BC Patil on CM issue in Karnataka BS Yediyurappa GBD)