ಬೈಕ್ನ ಮುಂಭಾಗ ಯುವತಿ ಕೂರಿಸಿಕೊಂಡು ರಸ್ತೆಯಲ್ಲಿ ರೊಮ್ಯಾನ್ಸ್, ಇಬ್ಬರ ಬಂಧನ
ಬೈಕ್ನಲ್ಲೇ ರೊಮ್ಯಾನ್ಸ್ ಮಾಡುತ್ತಾ ವೇಗವಾಗಿ ಚಲಾಯಿಸುತ್ತಿದ್ದ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಟಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.
ವೇಗವಾಗಿ ಬೈಕ್ ಚಲಾಯಿಸುತ್ತಾ ಜತೆಗೆ ರೊಮ್ಯಾನ್ಸ್ ಮಾಡುತ್ತಿದ್ದ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ನಲ್ಲಿ ರೊಮ್ಯಾನ್ಸ್ ಮಾಡುತ್ತಾ ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.
ಮೊಹಮ್ಮದ್ ವಾಸಿಂ ಹಾಗೂ ಜತೆಗಿದ್ದ ಯುವತಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಪ್ರಸ್ತುತಪಡಿಸಲಾಗುತ್ತಿದೆ. ಬಂಧನಕ್ಕೊಳಗಾದ ನಂತರ, ಪೊಲೀಸರು ಇಬ್ಬರ ವಿಡಿಯೋವೊಂದನ್ನು ಚಿತ್ರಿಸಿ ಅದರಲ್ಲಿ ಯಾರೂ ಕೂಡ ಈ ರೀತಿ ಮಾಡಬೇಡಿ ಎಂದು ಹೇಳಿ ಕ್ಷಮೆಯಾಚಿಸುವಂತೆ ಮಾಡಿದ್ದಾರೆ.
ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ ಬೈಕ್ ಚಾಲನೆ ಮಾಡುತ್ತಿರುವ ಹುಡುಗನನ್ನು ಹುಡುಗಿ ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತು ಚುಂಬಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಅಪಾಯಕಾರಿ ಸ್ಟಂಟ್ ಮಾಡುವ ವೇಲೆ ಅವರು ಸಂಚಾರ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಚರ್ಚೆಗೆ ಕಾರಣವಾಗಿದೆ.
ವಿಡಿಯೋ:
ख़तरनाक।
सोचिए ये इनके लिए मज़ा है।
लेकिन जरा सी भी चूक होते ही इनके घर के बाहर सफ़ेद टेंट और दरी बिछ सकती है। pic.twitter.com/YbUW4EMzqX
— Sagar Kumar “Sudarshan News” (@KumaarSaagar) May 23, 2024
ರಾಜಸ್ಥಾನದ ಕೋಟಾದ ರಾಷ್ಟ್ರೀಯ ಹೆದ್ದಾರಿ 52 (ಎನ್ಎಚ್ -52) ನಲ್ಲಿ ಈ ನಾಚಿಕೆಗೇಡಿನ ಮತ್ತು ಅಪಾಯಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ಬಾಲಕ ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡುತ್ತಿರುವುದು ಕೂಡ ವೀಡಿಯೊದಲ್ಲಿ ರೆಕಾರ್ಡ್ ಅಗಿದೆ. ಹೆಚ್ಚಿನ ವೇಗದಲ್ಲಿ ಬೈಕ್ ಸವಾರಿ ಮಾಡುವಾಗ ಹುಡುಗಿ ಅವನನ್ನು ಚುಂಬಿಸುತ್ತಿರುವುದರಿಂದ ಅವನಿಗೆ ರಸ್ತೆಯೂ ಸರಿಯಾಗಿ ಕಾಣಿಸುತ್ತಿರಲಿಲ್ಲ.
ಗೆಳತಿಯನ್ನ ತೊಡೆ ಮೇಲೆ ಕೂಡಿಸಿಕೊಂಡು ಹೆಲ್ಮೆಟ್ ಹಾಕದೆ ಬೈಕ್ ಓಡಿಸಿದ ಗೆಳೆಯ: ವಿಡಿಯೋ ವೈರಲ್
ನಂಟ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಕೋಟಾ-ಬಂಡಿ ರಾಷ್ಟ್ರ ಹೆದ್ದಾರಿಯಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆ ಆಧರಿಸಿ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿದ್ದಾರೆ. ಇಬ್ಬರು ಕೋಟಾದ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ ಮತ್ತು ಬೇರೆ ಬೇರೆ ಸ್ಥಳಗಳಿಂದ ಬಂದವರು ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ