ಮೂತ್ರಕೋಶದ ಕಲ್ಲಿಗೆ ಚಿಕಿತ್ಸೆಗೆಂದು ಹೋದ ಮಹಿಳೆಯ ಕೈಗೆ ಕಿಡ್ನಿ ತೆಗೆದುಕೊಟ್ಟ ವೈದ್ಯರು
ಮೂತ್ರಕೋಶದ ಕಲ್ಲೆಂದು ಚಿಕಿತ್ಸೆ ಪಡೆಯಲು ಹೋದ ಮಹಿಳೆಗೆ ಶಸ್ತ್ರ ಚಿಕಿತ್ಸೆ ವೇಳೆ ವೈದ್ಯರು ಹಾನಿಯಾದ ಕಿಡ್ನಿ ಬದಲಾಗಿ ಸುಸೂತ್ರವಾಗಿರುವ ಕಿಡ್ನಿಯನ್ನೇ ತೆಗೆದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಮಹಿಳೆಯೊಬ್ಬರು ತುಂಬಾ ದಿನದಿಂದ ಹೊಟ್ಟೆನೋವಿನಿಂದ ನರಳುತ್ತಿದ್ದರು. ಎಕ್ಸ್-ರೇ ಮಾಡಿಸಿದಾಗ ಅವರ ಮೂತ್ರಕೋಶದಲ್ಲಿ ಕಲ್ಲಾಗಿದೆ ಆ ಕಲ್ಲುಗಳು ಒಂದು ಕಿಡ್ನಿಯನ್ನು ಸಂಪೂರ್ಣವಾಗಿ ಹಾನಿಗೊಳಿಸಿರುವ ಕಾರಣ ಕೂಡಲೇ ಕಿಡ್ನಿಯನ್ನು ತೆಗೆಯಬೇಕು ಎಂದು ವೈದ್ಯರು ಹೇಳಿದ್ದಾರೆ.
ಖಾಸಗಿ ಆಸ್ಪತ್ರೆಯ ವೈದ್ಯರು ಕೂಡಲೇ ಅವರನ್ನು ದಾಖಲಿಸಿಕೊಂಡು ಶಸ್ತ್ರಚಿಕಿತ್ಸೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಬಳಿಕ ವೈದ್ಯರು ಹಾನಿಯಾದ ಕಿಡ್ನಿ ತೆಗೆಯುವ ಬದಲು ಒಳ್ಳೆಯ ಸ್ಥಿತಿಯಲ್ಲಿದ್ದ ಕಿಡ್ನಿಯನ್ನು ತೆಗೆದಿದ್ದಾರೆ ಎಂದು ರೋಗಿಯ ಕಡೆಯವರು ಆರೋಪಿಸಿದ್ದಾರೆ.ಈ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ವೈದ್ಯರು ಈ ಆರೋಪವನ್ನು ತಳ್ಳಿಹಾಕಿದ್ದು, ಆಪರೇಷನ್ ಸರಿಯಾಗಿ ಮಾಡಿರುವುದಾಗಿ ಹೇಳಿದ್ದಾರೆ. ಶಸ್ತ್ರ ಚಿಕಿತ್ಸೆ ನಡೆಸಿದ ಡಾ.ಸಂಜಯ್ ಧಂಖರ್ ಒಡೆತನದ ಧಂಖರ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ಮತ್ತಷ್ಟು ಓದಿ: ಕೆಸಿ ಜನರಲ್ ಹಾಸ್ಪಿಟಲ್ನಲ್ಲಿ ಅಮಾನವೀಯ ಘಟನೆ; ಐಸಿಯುನಲ್ಲಿ ಇದ್ದ ವ್ಯಕ್ತಿಗೆ ರಕ್ತ ಬರುವ ಹಾಗೆ ಥಳಿಸಿದ ಆಸ್ಪತ್ರೆ ಸಿಬ್ಬಂದಿ
ಎರಡು ದಿನಗಳ ನಂತರ, ಆಕೆಯ ಸ್ಥಿತಿಯು ಹದಗೆಟ್ಟಿತು ಮತ್ತು ಆಕೆಯನ್ನು ಮತ್ತೆ ಆಸ್ಪತ್ರೆಗೆ ಕರೆತರಲಾಯಿತು, ಅಲ್ಲಿ ಡಾ ಧಂಖರ್ ಅವರನ್ನು ಜೈಪುರದಲ್ಲಿ ಚಿಕಿತ್ಸೆಗಾಗಿ ಸೂಚಿಸಿದರು. ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣ ಬೆಳಕಿಗೆ ಬಂದಾಗ, ಧಂಖರ್ ರೋಗಿ ಮನೆಗೆ ಭೇಟಿ ನೀಡಿ, ಬೇರೆಲ್ಲಾದರೂ ಚಿಕಿತ್ಸೆ ಮಾಡಿಸಿಕೊಳ್ಳಿ ಎಂದು ಹಣ ನೀಡಿದ್ದರು, ಆದರೆ ಕುಟುಂಬಸ್ಥರು ಅವರ ಪ್ರಸ್ತಾಪವನ್ನು ನಿರಾಕರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿದ್ದು, ಧಂಖರ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ ಎಂದು ಬಾನೊ ಪತಿ ಶಬ್ಬೀರ್ ತಿಳಿಸಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಮುಖ್ಯ ವೈದ್ಯಕೀಯ ಆರೋಗ್ಯ ಅಧಿಕಾರಿ ರಾಜಕುಮಾರ್ ಡಾಂಗಿ ಅವರು ಘಟನೆಯ ತನಿಖೆಗಾಗಿ ಐದು ವೈದ್ಯರ ತಂಡವನ್ನು ರಚಿಸಿದರು. ಆಸ್ಪತ್ರೆ ದಾಖಲೆಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮೊದಲು ಡಾ. ಧಂಖರ್ ಜುಂಜುವಿನ ಬಿಡಿಕೆ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲಿ ಮಹಿಳೆಯೊಬ್ಬರ ಸಾವಿನ ಬಳಿಕ ಅವರನ್ನು ಅಮಾನತುಗೊಳಿಸಲಾಗಿತ್ತು. ಬಳಿಕ 2020ರಲ್ಲಿ ಅವರನ್ನು ಚುರು ಜಿಲ್ಲೆಗೆ ನಿಯೋಜಿಸಲಾಯಿತಾದರೂ ಅವರು ಸೇವೆಗೆ ಬರದೆ ಖಾಸಗಿ ಆಸ್ಪತ್ರೆಗೆ ಸೇರಿಕೊಂಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:31 pm, Wed, 29 May 24




