AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rajdhani Express: ರೈಲಿನಲ್ಲಿ ಆಹಾರ ತಿನ್ನುವ ಮುನ್ನ ಎಚ್ಚರ! ರಾಜಧಾನಿ ಎಕ್ಸ್​ಪ್ರೆಸ್​ ರೈಲಿನಲ್ಲಿ ನೀಡಿದ ಆಹಾರದಲ್ಲಿತ್ತು ಸತ್ತ ಜಿರಳೆ

ರಾಜಧಾನಿ ಎಕ್ಸ್‌ಪ್ರೆಸ್ ರೈಲ್ವೇಯ ಅತ್ಯಂತ ವಿಶ್ವಾಸಾರ್ಹ ರೈಲು ಎಂದು ಪರಿಗಣಿಸಲ್ಪಟ್ಟಿದೆ, ಆದರೆ ಈ ರೈಲಿನ ಕ್ಯಾಟರಿಂಗ್ ವಿಭಾಗದ ತಪ್ಪಿನಿಂದಾಗಿ ತಲೆತಗ್ಗಿಸುವಂತಾಗಿದೆ. ರಾಜಧಾನಿ ಎಕ್ಸ್​ಪ್ರೆಸ್​ ರೈಲಿನಲ್ಲಿ ನೀಡಲಾಗಿದ್ದ ಆಹಾರದಲ್ಲಿ ಸತ್ತ ಜಿರಳೆ ಪತ್ತೆಯಾಗಿದೆ.

Rajdhani Express: ರೈಲಿನಲ್ಲಿ ಆಹಾರ ತಿನ್ನುವ ಮುನ್ನ ಎಚ್ಚರ! ರಾಜಧಾನಿ ಎಕ್ಸ್​ಪ್ರೆಸ್​ ರೈಲಿನಲ್ಲಿ ನೀಡಿದ ಆಹಾರದಲ್ಲಿತ್ತು ಸತ್ತ ಜಿರಳೆ
Meal
TV9 Web
| Edited By: |

Updated on:Dec 20, 2022 | 12:01 PM

Share

ರಾಜಧಾನಿ ಎಕ್ಸ್‌ಪ್ರೆಸ್ ರೈಲ್ವೇಯ ಅತ್ಯಂತ ವಿಶ್ವಾಸಾರ್ಹ ರೈಲು ಎಂದು ಪರಿಗಣಿಸಲ್ಪಟ್ಟಿದೆ, ಆದರೆ ಈ ರೈಲಿನ ಕ್ಯಾಟರಿಂಗ್ ವಿಭಾಗದ ತಪ್ಪಿನಿಂದಾಗಿ ತಲೆತಗ್ಗಿಸುವಂತಾಗಿದೆ. ರಾಜಧಾನಿ ಎಕ್ಸ್​ಪ್ರೆಸ್​ ರೈಲಿನಲ್ಲಿ ನೀಡಲಾಗಿದ್ದ ಆಹಾರದಲ್ಲಿ ಸತ್ತ ಜಿರಳೆ ಪತ್ತೆಯಾಗಿದೆ. ಇದಾದ ಬಳಿಕ ಆಹಾರ ಆರ್ಡರ್ ಮಾಡುವ ಮುನ್ನ ಕನಿಷ್ಠ 10 ಬಾರಿ ಯೋಚನೆ ಮಾಡುವಂತಾಗಿದೆ. ಬಾಲಕಿಗೆ ನೀಡಲಾಗಿದ್ದ, ಆಮ್ಲೆಟ್​ನಲ್ಲಿ ಜಿರಳೆ ಪತ್ತೆಯಾಗಿದ್ದು, ದೆಹಲಿಯಿಂದ ಮುಂಬೈಗೆ ತೆರಳುತ್ತಿದ್ದ ರಾಜಧಾನಿ ಎಕ್ಸ್ ಪ್ರೆಸ್ ನಲ್ಲಿ ಎರಡೂವರೆ ವರ್ಷದ ಮಗುವಿಗೆ ನೀಡಿದ್ದ ಆಮ್ಲೆಟ್​ನಲ್ಲಿ ಜಿರಳೆ ಪತ್ತೆಯಾಗಿತ್ತು.

ಮಗುವಿನ ಪೋಷಕರು ರೈಲ್ವೆ ಸಚಿವಾಲಯ ಹಾಗೂ ಪ್ರಧಾನಿ ಕಚೇರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಅದರ ಮೇಲೆ ರೈಲ್ವೆ ಸೇವೆಯು ಪ್ರಯಾಣಿಕರಿಗೆ ಅವರ PNR ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಮೆಸೇಜ್ ಮಾಡುವಂತೆ ಹೇಳಿದೆ.  ಅನನುಕೂಲತೆಗಾಗಿ ಕ್ಷಮಿಸಿ ಎಂದು ರಿಪ್ಲೇ ಮಾಡಿದೆ. ಹಾಗೆಯೇ ಕ್ಯಾಟರಿಂಗ್ ವಿಭಾಗಕ್ಕೆ 1 ಲಕ್ಷ ರೂ. ದಂಡ ವಿಧಿಸಲಾಗಿದೆ.

ಮಗುವಿಗೆ ಏನಾದರೂ ಸಂಭವಿಸಿದರೆ, ಯಾರು ಹೊಣೆ? ಯೋಗೇಶ್ ಮೋರ್ ಎಂಬ ವ್ಯಕ್ತಿಯೊಬ್ಬರು ತಮ್ಮ ಟ್ವಿಟರ್ ಹ್ಯಾಂಡಲ್‌ನಿಂದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು 16 ಡಿಸೆಂಬರ್ 2022 ರಂದು ದೆಹಲಿಯಿಂದ ರೈಲು ಸಂಖ್ಯೆ 22222 ಮೂಲಕ ಪ್ರಯಾಣಿಸುತ್ತಿದ್ದೆವು ಎಂದು ಬರೆದಿದ್ದಾರೆ.

ಬೆಳಗ್ಗೆ ನಮ್ಮ ಎರಡೂವರೆ ವರ್ಷದ ಮಗುವಿಗೆ ಆಮ್ಲೆಟ್ ಆರ್ಡರ್ ಮಾಡಿ ಆಮ್ಲೆಟ್ ಬಂದಾಗ ಅದರಲ್ಲಿ ಸತ್ತ ಜಿರಳೆ ಬಿದ್ದಿದ್ದು, ರೈಲಿನಲ್ಲಿಯೂ ದೂರು ನೀಡಿದೆವು. ತನ್ನ ಮಗಳಿಗೆ ಏನಾದರೂ ಸಂಭವಿಸಿದರೆ ಅದಕ್ಕೆ ಯಾರು ಹೊಣೆ ಎಂದು ಬರೆದುಕೊಂಡಿದ್ದಾರೆ.

ಮತ್ತಷ್ಟು ಓದಿ: ನಿಮ್ಮ ಮನೆಯಲ್ಲಿ ಜಿರಳೆ, ನೊಣಗಳ ಕಾಟ ಹೆಚ್ಚಾಗಿದೆಯಾ? ಈ ಟ್ರಿಕ್​ಗಳನ್ನು ಬಳಸಿ, ಜಿರಳೆಗಳನ್ನು ಓಡಿಸಿ

ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ರೈಲ್ವೆ ಸೇವೆಯು ಅನನುಕೂಲತೆಗಾಗಿ ಕ್ಷಮಿಸಿ ಎಂದು ಬರೆದಿದೆ. ಸರ್, ದಯವಿಟ್ಟು ನಿಮ್ಮ PNR ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಗೆ ನೇರವಾಗಿ ಸಂದೇಶ ಕಳುಹಿಸಿ ಎಂದು ಹೇಳಿದೆ.

ಯೋಗೇಶ್​ ಟ್ವೀಟ್ ಗಮನಿಸಿರುವ ಮತ್ತೊಬ್ಬ ಪ್ರಯಾಣಿಕ ಆ ಟ್ವೀಟ್ ಎಂಬೆಡ್ ಮಾಡಿದ್ದು, ತಾನೂ ಅದೇ ರೈಲಿನಲ್ಲಿ ಪ್ರಯಾಣಿಸಿದ್ದಾಗಿ ಹೇಳಿಕೊಂಡಿದ್ದಾರೆ.

ತಾನು ಕೂಡ ಬೆಳಗ್ಗೆ ಅದೇ ರೈಲಿನಲ್ಲಿದ್ದೆ, ತಿಂಡಿಗೆ ಆಮ್ಲೆಟ್​ ತಿಂದ ಬಗ್ಗೆ ನನಗೆ ಪಶ್ಚಾತಾಪವಾಗುತ್ತಿದೆ, ಇನ್ನುಮುಂದೆ ರೈಲಿನಲ್ಲಿ ಆಹಾರ ತೆಗೆದುಕೊಳ್ಳುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:59 am, Tue, 20 December 22