ನಿಮ್ಮ ಮನೆಯಲ್ಲಿ ಜಿರಳೆ, ನೊಣಗಳ ಕಾಟ ಹೆಚ್ಚಾಗಿದೆಯಾ? ಈ ಟ್ರಿಕ್ಗಳನ್ನು ಬಳಸಿ, ಜಿರಳೆಗಳನ್ನು ಓಡಿಸಿ
ಪ್ರತಿಯೊಬ್ಬರಿಗೂ ತನ್ನ ಮನೆ ಸ್ವಚ್ಛವಾಗಿರಬೇಕೆಂಬ ಆಸೆ ಇರುತ್ತದೆ, ಜಿರಳೆ, ಇಲಿ, ನೊಣ ಇದ್ಯಾವುದೂ ನಿಮ್ಮ ಮನೆಯಲ್ಲಿರದಂತೆ ನೋಡಿಕೊಳ್ಳುವುದು ಕಷ್ಟದ ಕೆಲಸವೇ, ಎಷ್ಟು ಸ್ವಚ್ಛತೆಯನ್ನು ಕಾಪಾಡಿಕೊಂಡರೂ ನಮಗೇ ತಿಳಿಯದಂತೆ ಮನೆಯ ಒಳಗೆ ಎಂಟ್ರಿ ಕೊಟ್ಟೇ ಬಿಡುತ್ತವೆ.
ಪ್ರತಿಯೊಬ್ಬರಿಗೂ ತನ್ನ ಮನೆ ಸ್ವಚ್ಛವಾಗಿರಬೇಕೆಂಬ ಆಸೆ ಇರುತ್ತದೆ, ಜಿರಳೆ, ಇಲಿ, ನೊಣ ಇದ್ಯಾವುದೂ ನಿಮ್ಮ ಮನೆಯಲ್ಲಿರದಂತೆ ನೋಡಿಕೊಳ್ಳುವುದು ಕಷ್ಟದ ಕೆಲಸವೇ, ಎಷ್ಟು ಸ್ವಚ್ಛತೆಯನ್ನು ಕಾಪಾಡಿಕೊಂಡರೂ ನಮಗೇ ತಿಳಿಯದಂತೆ ಮನೆಯ ಒಳಗೆ ಎಂಟ್ರಿ ಕೊಟ್ಟೇ ಬಿಡುತ್ತವೆ.
ಅಡುಗೆ ಮನೆಯಲ್ಲಿ ಜಿರಳೆಗಳು ಕಂಡರೆ ಅಡುಗೆ ಎಷ್ಟೇ ಸ್ವಾದಿಷ್ಟವಾಗಿದ್ದರೂ ತಿನ್ನಲು ಮನಸು ಬರುವುದಿಲ್ಲ. ಅವು ಚರಂಡಿ ಇನ್ನಿತರೆ ಕಲುಷಿತ ಪ್ರದೇಶದಿಂದ ಮನೆಗೆ ಬರುವ ಕಾರಣ, ಅವು ಆಹಾರ, ಪಾನೀಯಗಳನ್ನು ಕಲುಷಿತಗೊಳಿಸುತ್ತವೆ.
ಇದರಿಂದ ನಾನಾ ರೋಗಗಳು ಹರಡುವ ಭೀತಿ ಎದುರಾಗಿದೆ. ಅದೇನೇ ಇರಲಿ.. ನಿಮ್ಮ ಮನೆಯಲ್ಲೂ ಜಿರಳೆ ಇದ್ದರೆ ಹುಷಾರಾಗಿರಿ. ತಕ್ಷಣವೇ ಅವುಗಳನ್ನು ತೊಡೆದುಹಾಕಲು ಮಾರ್ಗಗಳನ್ನು ತಿಳಿಯಿರಿ.
ಸೀಮೆ ಎಣ್ಣೆಯನ್ನು ಬಳಕೆ ಮಾಡಿ ನಿಮ್ಮ ಅಡುಗೆಮನೆಯಲ್ಲಿ ಸಾಕಷ್ಟು ಜಿರಳೆಗಳಿದ್ದರೆ, ಸೀಮೆಎಣ್ಣೆಯನ್ನು ಸಿಂಪಡಸಿ, ಅದನ್ನು ಬಳಸುವ ಮೊದಲು ಜಿರಳೆಗಳ ಕುರುಹುಗಳಿರುವ ಸ್ಥಳಗಳನ್ನು ಮೊದಲು ಗುರುತಿಸಿ. ಇದರ ನಂತರ, ಈ ಸ್ಥಳಗಳಲ್ಲಿ ಸೀಮೆಎಣ್ಣೆ ಸಿಂಪಡಿಸಿ. ಸೀಮೆ ಎಣ್ಣೆಯ ವಾಸನೆಗೆ ಜಿರಳೆಗಳು ಓಡಿಹೋಗುತ್ತವೆ.
ಬೇವಿನ ಎಲೆ ಬೇವಿನ ಎಲೆಗಳಿಂದ ಅನೇಕ ಚರ್ಮರೋಗಗಳನ್ನು ಗುಣಪಡಿಸಬಹುದು, ಹಾಗೆಯೇ ಜಿರಳೆಗಳನ್ನು ಓಡಿಸಲು ಕೂಡ ಇದು ಉತ್ತಮ ವಿಧಾನವಾಗಿದೆ. ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ, ಎಲೆಗಳನ್ನು ಈ ನೀರನ್ನು ಜಿರಳೆ ಇರುವ ಜಾಗಗಳಲ್ಲಿ ಸಿಂಪಡಿಸಿ. ಜಿರಳೆಗಳು ಅದರಿಂದ ಓಡಿಹೋಗುತ್ತವೆ. ಅಡುಗೆ ಸೋಡಾ ತುಂಬಾ ಪರಿಣಾಮಕಾರಿ ಜಿರಳೆಗಳನ್ನು ಹೋಗಲಾಡಿಸಲು ಅಡುಗೆ ಸೋಡಾ ಕೂಡ ಒಳ್ಳೆಯದು. ಇದಕ್ಕಾಗಿ ಬೇಕಿಂಗ್ ಸೋಡಾದಲ್ಲಿ ಸಕ್ಕರೆಯನ್ನು ಬೆರೆಸಿ ಮಿಶ್ರಣ ಮಾಡಿ. ಅದರ ನಂತರ ಅದನ್ನು ಜಿರಳೆ ಇರುವ ಸ್ಥಳದಲ್ಲಿ ಸಿಂಪಡಿಸಿ. ಇದು ಜಿರಳೆಗಳನ್ನು ಕೊಲ್ಲಬಲ್ಲದು.
ಈ ಸ್ಪ್ರೇ ಬಳಸಿ ಮನೆಯಲ್ಲಿ ಜಿರಳೆ, ನೊಣ-ಸೊಳ್ಳೆಗಳನ್ನು ಹೋಗಲಾಡಿಸಲು ಸ್ಪ್ರೇ ಮಾಡಬೇಕು. ಇದನ್ನು ಮಾಡಲು, ನೀವು ನೀರಿನ ಪಾತ್ರೆಯನ್ನು ತೆಗೆದುಕೊಳ್ಳಬೇಕು. ಅದಕ್ಕೆ ಬೆಳ್ಳುಳ್ಳಿ ಸಿಪ್ಪೆಗಳು, ಮೆಣಸಿನಕಾಯಿ, ಅಲೋವೆರಾ ಎಲೆಗಳನ್ನು ಮುರು ದಿನಗಳ ವರೆಗೆ ಮುಚ್ಚಿಡಬೇಕು, ಬಳಿಕ ಅದನ್ನು ಸೋಸಿ ಸ್ಪ್ರೇ ಮಾಡಬೇಕು.
ಸಿಂಪಡಿಸುವಾಗ, ಅದು ಕೆಟ್ಟ ವಾಸನೆ ಎಂಬುದನ್ನು ನೆನಪಿಡಿ. ಆದ್ದರಿಂದ, ಆ ಪಾತ್ರೆಯನ್ನು ಅಡುಗೆಮನೆಯಲ್ಲಿ ಅಥವಾ ನಿಮ್ಮ ಮಲಗುವ ಕೋಣೆಯಲ್ಲಿ ಇಡಬೇಡಿ. ಬದಲಿಗೆ, ಕುಟುಂಬದ ಸದಸ್ಯರ ಚಲನವಲನ ಕಡಿಮೆ ಇರುವ ಸ್ಥಳದಲ್ಲಿ ಪಾತ್ರೆಯನ್ನು ಇರಿಸಿ. ಹೀಗೆ ಸಿಂಪಡಿಸಿ..
ಎರಡರಿಂದ ಮೂರು ಬಾರಿ ಸಿಂಪಡಿಸಬೇಕು. ತೇವ ಪ್ರದೇಶಗಳು ಅಥವಾ ನಿಂತಿರುವ ನೀರಿನ ಬಳಿ ಈ ಸ್ಪ್ರೇ ಅನ್ನು ಸಿಂಪಡಿಸಿ. ಹಾಸಿಗೆಗಳ ಕೆಳಗೆ ಮತ್ತು ಪೆಟ್ಟಿಗೆಗಳ ಹಿಂದೆ ಸಿಂಪಡಿಸುವುದು ಸಹ ಪ್ರಯೋಜನಕಾರಿಯಾಗಿದೆ. ಇದರಿಂದ ಸೊಳ್ಳೆ, ನೊಣಗಳ ಕಾಟ ತಪ್ಪಿಸುತ್ತದೆ, ಮನೆ ರೋಗಾಣು ಮುಕ್ತವಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ