ರಾಮಚರಿತಮಾನಸದಿಂದ ದ್ವೇಷ ಬಿತ್ತನೆ; ಬಿಹಾರದ ಸಚಿವರ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ಆಕ್ರೋಶ
ರಾಮಚರಿತಮಾನಸ, ಮನುಸ್ಮೃತಿ ಮತ್ತು ಬಂಚ್ ಆಫ್ ಥಾಟ್ಸ್‌ನಂತಹ ಪುಸ್ತಕಗಳು ದ್ವೇಷ ಮತ್ತು ಸಾಮಾಜಿಕ ವಿಭಜನೆಯ ಬೀಜಗಳನ್ನು ಬಿತ್ತಿದವು ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ಹೇಳಿದ್ದಾರೆ.
ಲಕ್ನೋ: ರಾಮಾಯಣವನ್ನು (Ramayan) ಆಧರಿಸಿದ ಹಿಂದೂ ಧಾರ್ಮಿಕ ಗ್ರಂಥವಾದ ರಾಮಚರಿತಮಾನಸವು (Ramacharitamanas) ಸಮಾಜದಲ್ಲಿ ದ್ವೇಷವನ್ನು ಹರಡುತ್ತದೆ ಎಂದು ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ. ನಳಂದ ಮುಕ್ತ ವಿಶ್ವವಿದ್ಯಾನಿಲಯದ 15ನೇ ಘಟಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಆರ್‌ಜೆಡಿ ನಾಯಕ (RJD Leader) ಚಂದ್ರಶೇಖರ್ ಈ ಹೇಳಿಕೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಿಹಾರ ರಾಜ್ಯಪಾಲ ಫಾಗು ಚೌಹಾಣ್ ಕೂಡ ಉಪಸ್ಥಿತರಿದ್ದರು.
ಸಮಾಜದ ಕೆಳವರ್ಗದವರಿಗೆ ಶಿಕ್ಷಣವನ್ನು ನೀಡಿದರೆ ಅದು ವಿಷಕಾರಿಯಾಗುತ್ತದೆ ಎಂಬ ಕಾರಣಕ್ಕೆ ರಾಮಚರಿತಮಾನಸವನ್ನು ವಿರೋಧಿಸಲಾಯಿತು. ರಾಮಚರಿತಮಾನಸ, ಮನುಸ್ಮೃತಿ ಮತ್ತು ಎಂಎಸ್ ಗೋಲ್ವಾಲ್ಕರ್ ಅವರ ಚಿಂತನೆಗಳ ಪುಸ್ತಕಗಳು ಸಾಮಾಜಿಕ ವಿಭಜನೆಯನ್ನು ಸೃಷ್ಟಿಸಿವೆ ಎಂದು ಸಚಿವ ಚಂದ್ರಶೇಖರ್ ಹೇಳಿದ್ದಾರೆ.
ಇದನ್ನೂ ಓದಿ: ರಾಮಾಯಣದ ಸೀತೆ ಬಗ್ಗೆ ವಿವಾದಾತ್ಮಕ ಹೇಳಿಕೆ; ನನ್ನ ಬಳಿ ಸಾಕ್ಷಿ ಇದೆ ಎಂದ ಡಾ. ವಿಕಾಸ್ ದಿವ್ಯಕೃತಿ
ಪ್ರೀತಿ ಮತ್ತು ವಾತ್ಸಲ್ಯದಿಂದ ರಾಷ್ಟ್ರವು ಶ್ರೇಷ್ಠವಾಗುತ್ತದೆ. ರಾಮಚರಿತಮಾನಸ, ಮನುಸ್ಮೃತಿ ಮತ್ತು ಬಂಚ್ ಆಫ್ ಥಾಟ್ಸ್‌ನಂತಹ ಪುಸ್ತಕಗಳು ದ್ವೇಷ ಮತ್ತು ಸಾಮಾಜಿಕ ವಿಭಜನೆಯ ಬೀಜಗಳನ್ನು ಬಿತ್ತಿದವು. ದಲಿತರು, ಹಿಂದುಳಿದವರು ಮತ್ತು ಮಹಿಳೆಯರಿಗೆ ಶಿಕ್ಷಣದ ವಿರುದ್ಧ ಮಾತನಾಡುವ ರಾಮಚರಿತಮಾನಸಕ್ಕೆ ವಿರೋಧ ವ್ಯಕ್ತವಾಯಿತು. ಜನರು ಮನುಸ್ಮೃತಿಯನ್ನು ಸುಟ್ಟುಹಾಕಲು ಇದೇ ಕಾರಣ ಎಂದು ಅವರು ಹೇಳಿದ್ದಾರೆ.
Bihar Education Minister from RJD “Ramcharit Manas spreads hatred”
Few days ago Jagdanand Singh said “Ram Janmbhoomi is nafrat ki zameen”
This is not Sanyog but Votebank ka Udyog
Will action be taken?
RJD bats for PFI , SIMI but abuses HINDU Astha for vote? https://t.co/NiUrJ0Yugt pic.twitter.com/KBYs2yo48f
— Shehzad Jai Hind (@Shehzad_Ind) January 11, 2023
ಬಿಹಾರದ ಸಚಿವರ ಈ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯಿಸಿದ್ದು, ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ, ಇದು ವೋಟ್‌ಬ್ಯಾಂಕ್ ತಂತ್ರ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಬಿಹಾರ ಭೇಟಿ ವೇಳೆ ಮೋದಿ ಹತ್ಯೆಗೆ ಪಿಎಫ್‌ಐ ಸಂಚು ಪ್ರಕರಣ: ನಾಲ್ವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ ಎನ್ಐಎ
ಆರ್‌ಜೆಡಿ ನಾಯಕ ಹಾಗೂ ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ “ರಾಮಚರಿತಮಾನಸ ದ್ವೇಷವನ್ನು ಹರಡುತ್ತದೆ” ಎಂದು ಹೇಳಿಕೆ ನೀಡುವ ಕೆಲವು ದಿನಗಳ ಹಿಂದೆ ಬಿಹಾರದ ಆರ್‌ಜೆಡಿ ಅಧ್ಯಕ್ಷ ಜಗದಾನಂದ ಸಿಂಗ್ ಅವರು ” ಅಯೋಧ್ಯೆಯ ರಾಮ ಜನ್ಮಭೂಮಿ ನಫ್ರತ್ ಕಿ ಜಮೀನ್” ಎಂದು ಹೇಳಿದ್ದರು. ಆರ್‌ಜೆಡಿ ಪಿಎಫ್‌ಐ, ಸಿಮಿ ಪರ ಬ್ಯಾಟಿಂಗ್ ಮಾಡುತ್ತದೆ. ಮತಕ್ಕಾಗಿ ಹಿಂದೂ ಧರ್ಮ, ಗ್ರಂಥಗಳನ್ನು ನಿಂದಿಸುತ್ತದೆ ಎಂದು ಪೂನಾವಾಲಾ ಟ್ವೀಟ್ ಮಾಡಿದ್ದಾರೆ.