ರೈತರ ಪ್ರತಿಭಟನೆ ಎಫೆಕ್ಟ್​: ಜಿಯೋ ಚಂದಾದಾರರ ಸಂಖ್ಯೆಯಲ್ಲಿ ತೀವ್ರ ಕುಸಿತ

Reliance Jio | Farmers Protest: ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಬಿಡುಗಡೆ ಮಾಡಿರುವ ವರದಿ ಪ್ರಕಾರ, 2020ರ ಡಿಸೆಂಬರ್​​ನಲ್ಲಿ ಜಿಯೋ ಪಂಜಾಬ್​ ಹಾಗೂ ಹರಿಯಾಣ ರಾಜ್ಯಗಳಲ್ಲಿ ಸಬ್​ಸ್ಕ್ರೈಬರ್​ಗಳನ್ನು ಕಳೆದುಕೊಂಡಿದೆ.

ರೈತರ ಪ್ರತಿಭಟನೆ ಎಫೆಕ್ಟ್​: ಜಿಯೋ ಚಂದಾದಾರರ ಸಂಖ್ಯೆಯಲ್ಲಿ ತೀವ್ರ ಕುಸಿತ
ಜಿಯೋ 888 ರೂ. ಪ್ಲ್ಯಾನ್: ಜಿಯೋ ಪ್ರಿಪೇಯ್ಡ್ ಬಳಕೆದಾರರಿಗೆ 888 ರೂ. ಪ್ರಿಪೇಯ್ಡ್ ರೀಚಾರ್ಜ್ ಆಯ್ಕೆ ನೀಡಿದ್ದು, ಇದರ ವಾಲಿಡಿಟಿ 84 ದಿನಗಳು. ಈ ಪ್ಲ್ಯಾನ್​ನಲ್ಲೂ ಅನಿಯಮಿತ ಕರೆ ಹಾಗೂ ಪ್ರತಿ ದಿನ 2GB ಡೇಟಾ ಸಿಗಲಿದೆ. ಇನ್ನು ಬೋನಸ್ ಆಗಿ 5 ಜಿಬಿ 4 ಜಿ ಡೇಟಾವನ್ನು ಕೂಡ ನೀಡಲಿದೆ. ಅದರೊಂದಿಗೆ ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಉಚಿತ ಚಂದಾದಾರಿಕೆ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋಕ್ಲೌಡ್ ಪ್ರವೇಶ ಪಡೆಯಬಹುದು.
Edited By:

Updated on: Feb 19, 2021 | 3:16 PM

ನವದೆಹಲಿ: ಕೆಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕೃಷಿ ಕಾಯ್ದೆಯಿಂದ ಮುಕೇಶ್​ ಅಂಬಾನಿಗೆ ಲಾಭವಾಗಲಿದೆ ಎನ್ನುವ ವದಂತಿಯಿಂದ ರಿಲಯನ್ಸ್​ ಜಿಯೋಗೆ ದೊಡ್ಡ ನಷ್ಟ ಉಂಟಾಗಿದೆ. ಕಳೆದ ಡಿಸೆಂಬರ್​ ತಿಂಗಳಲ್ಲಿ ಜಿಯೋ ಚಂದಾದಾರರ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡಿದೆ. ನವೆಂಬರ್ ಅಂತ್ಯದ ವೇಳೆಗೆ ರೈತರು ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಆರಂಭಿಸಿದ್ದರು. ಈ ಮಧ್ಯೆ, ಕೃಷಿ ಕಾಯ್ದೆಗಳು ರಿಲಯನ್ಸ್​ಗೆ ಸಹಕಾರಿಯಾಗಲಿವೆ ಎನ್ನುವ ವದಂತಿ ಹರಿದಾಡಿತ್ತು. ಇದರಿಂದ ಸಿಟ್ಟಾದ ರೈತರು ಜಿಯೋದಿಂದ ಬೇರೆ ನೆಟ್​ವರ್ಕ್​ಗೆ ಪೋರ್ಟ್​​ ಆಗಿದ್ದರು. ಇದರ ಹಿಂದೆ ಏರ್​​ಟೆಲ್​ ಹಾಗೂ ವಡಾಫೋನ್​-ಐಡಿಯಾ ಕೈವಾಡವಿದೆ ಎಂದು ಜಿಯೋ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದಲ್ಲಿ (TRAI) ದೂರನ್ನು ಕೂಡ ದಾಖಲಿಸಿತ್ತು. ಈ ಎಲ್ಲಾ ಬೆಳವಣಿಗೆಯಿಂದ ಜಿಯೋಗೆ ನಷ್ಟ ಉಂಟಾಗಿದೆ.

ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಬಿಡುಗಡೆ ಮಾಡಿರುವ ವರದಿ ಪ್ರಕಾರ, 2020ರ ಡಿಸೆಂಬರ್​​ನಲ್ಲಿ ಜಿಯೋ ಪಂಜಾಬ್​ ಹಾಗೂ ಹರಿಯಾಣ ರಾಜ್ಯಗಳಲ್ಲಿ ಚಂದಾದಾರನ್ನು ಕಳೆದುಕೊಂಡಿದೆ. ವಿಚಿತ್ರ ಎಂದರೆ, ಜಿಯೋ​ ಚಂದಾದಾರನ್ನು ಕಳೆದುಕೊಂಡಿರುವುದು ಈ ಎರಡು ರಾಜ್ಯಗಳಲ್ಲಿ ಮಾತ್ರ. 2019ರ ನವೆಂಬರ್​ನಲ್ಲಿ ಪಂಜಾಬ್​ನಲ್ಲಿ 1.40 ಕೋಟಿ ಮಂದಿ ಜಿಯೋ ಸಿಮ್ ಬಳಸುತ್ತಿದ್ದರು. ಡಿಸೆಂಬರ್ ಅಂತ್ಯಕ್ಕೆ ಈ ಸಂಖ್ಯೆ 1.25 ಕೋಟಿಗೆ ಇಳಿಕೆ ಆಗಿತ್ತು. ಇನ್ನು, ಹರಿಯಾಣದಲ್ಲಿ ಕಳೆದ ನವೆಂಬರ್​ನಲ್ಲಿ 94.48 ಲಕ್ಷ ಇದ್ದ ಜಿಯೋ ಬಳಕೆದಾರರು ಡಿಸೆಂಬರ್​ ವೇಳೆಗೆ 89.07 ಲಕ್ಷಕ್ಕೆ ಇಳಿಕೆ ಆಗಿದೆ. ಲಾಂಚ್​ ಆದಾಗಿನಿಂದ ರಾಜ್ಯವೊಂದರಲ್ಲಿ ಜಿಯೋ ತನ್ನ ಚಂದಾದಾರನ್ನು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕಳೆದುಕೊಂಡಿದ್ದು ಇದೇ ಮೊದಲು.

ಬಳಕೆದಾರರು ಕಡಿಮೆ ಆಗುವುದಕ್ಕೆ ಏರ್​ಟೆಲ್​ ಹಾಗೂ ವೊಡಾಫೋನ್​-ಇಡಿಯಾ ಕಾರಣ. ಇದಕ್ಕಾಗಿ ಅವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ರಿಲಯನ್ಸ್​ ಜಿಯೋ ಹೇಳುತ್ತಲೇ ಬಂದಿದೆ. ಆದರೆ, ಈ ಆರೋಪವನ್ನು ಏರ್​ಟೆಲ್​ ಹಾಗೂ ವೊಡಾಫೋನ್​-ಇಡಿಯಾ ತಳ್ಳಿ ಹಾಕಿವೆ. ಕೃಷಿ ಕಾಯ್ದೆಯನ್ನು ವಿರೋಧಿಸಿ ನವೆಂಬರ್​ ತಿಂಗಳಿಂದ ಪ್ರತಿಭಟನೆ ನಡೆಯುತ್ತಲೇ ಇದೆ. ಕೇಂದ್ರ ಸರ್ಕಾರ ಹಾಗೂ ರೈತರ ನಡುವೆ ನಡೆದ ಹಲವು ಹಂತದ ಮಾತುಕತೆ ಕೂಡ ವಿಫಲವಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಡೇಟಾ ಬೆಲೆ ಕಡಿಮೆಗೊಳಿಸಿದ ರಿಲಯನ್ಸ್ ಜಿಯೋವನ್ನು ಹೊಗಳಿದ ನೆಟ್‌ಫ್ಲಿಕ್ಸ್ ಸಿಇಒ

Published On - 2:57 pm, Fri, 19 February 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us