ಜನವರಿ 26ರಂದು ರಾಜಪಥ್ನಲ್ಲಿ ಮೊಳಗಲಿದೆ ಕನ್ನಡದ ಧ್ವನಿ
ದೆಹಲಿ: ವಿವಿಧತೆಯಲ್ಲಿ ಏಕತೆ… ಹಲವು ಧರ್ಮಗಳಿದ್ದರೂ ಒಂದೇ ಭಾವೈಕ್ಯತೆ… ಸರ್ವಜನಾಂಗದ ಶಾಂತಿಯ ತೋಟವೇ ಭಾರತ… ಗಣರಾಜ್ಯೋತ್ಸವ ಅಂದ್ರೆ ಇಡೀ ರಾಷ್ಟ್ರಪ್ರೇಮ ಎಲ್ಲರನ್ನೂ ಉಕ್ಕುತ್ತೆ. ಅದ್ರಲ್ಲೂ, ಭಾರತಾಂಬೆಯ ನೆಲದ ಅಷ್ಟೂ ಸಾಂಸ್ಕೃತಿಕ ಭಾವೈಕ್ಯತೆ ಬಿಂಬಿಸುವ ಸ್ತಬ್ಧಚಿತ್ರಗಳೇ ಸೆಂಟರ್ ಹಾಫ್ ಅಟ್ರ್ಯಾಕ್ಷನ್. ದೆಹಲಿಯ ರಾಜಪಥ್ನಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ಈ ಬಾರಿ ಕರ್ನಾಟಕಕ್ಕೆ ವಿಶೇಷವಾಗಿದೆ. ಗಣರಾಜ್ಯೋತ್ಸವ ಪರೇಡ್‌ನಲ್ಲಿ ಅನುಭವ ಮಂಟಪ! ದೆಹಲಿಯ ರಾಜಪಥ್ ಗಣರಾಜ್ಯೋತ್ಸವ ಸಂಭ್ರಮಕ್ಕೆ ಸಜ್ಜಾಗಿದೆ. ಈ ಬಾರಿಯ ಪರೇಡ್‌ನಲ್ಲಿ ಕರ್ನಾಟಕದ 12ನೇ ಶತಮಾನದ ಲಾರ್ಡ್ […]
ದೆಹಲಿ: ವಿವಿಧತೆಯಲ್ಲಿ ಏಕತೆ… ಹಲವು ಧರ್ಮಗಳಿದ್ದರೂ ಒಂದೇ ಭಾವೈಕ್ಯತೆ… ಸರ್ವಜನಾಂಗದ ಶಾಂತಿಯ ತೋಟವೇ ಭಾರತ… ಗಣರಾಜ್ಯೋತ್ಸವ ಅಂದ್ರೆ ಇಡೀ ರಾಷ್ಟ್ರಪ್ರೇಮ ಎಲ್ಲರನ್ನೂ ಉಕ್ಕುತ್ತೆ. ಅದ್ರಲ್ಲೂ, ಭಾರತಾಂಬೆಯ ನೆಲದ ಅಷ್ಟೂ ಸಾಂಸ್ಕೃತಿಕ ಭಾವೈಕ್ಯತೆ ಬಿಂಬಿಸುವ ಸ್ತಬ್ಧಚಿತ್ರಗಳೇ ಸೆಂಟರ್ ಹಾಫ್ ಅಟ್ರ್ಯಾಕ್ಷನ್. ದೆಹಲಿಯ ರಾಜಪಥ್ನಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ಈ ಬಾರಿ ಕರ್ನಾಟಕಕ್ಕೆ ವಿಶೇಷವಾಗಿದೆ.
ಗಣರಾಜ್ಯೋತ್ಸವ ಪರೇಡ್‌ನಲ್ಲಿ ಅನುಭವ ಮಂಟಪ! ದೆಹಲಿಯ ರಾಜಪಥ್ ಗಣರಾಜ್ಯೋತ್ಸವ ಸಂಭ್ರಮಕ್ಕೆ ಸಜ್ಜಾಗಿದೆ. ಈ ಬಾರಿಯ ಪರೇಡ್‌ನಲ್ಲಿ ಕರ್ನಾಟಕದ 12ನೇ ಶತಮಾನದ ಲಾರ್ಡ್ ಬಸವೇಶ್ವರ ಹಾಗೂ ಅನುಭವ ಮಂಟಪ ಸ್ತಬ್ಧ ಚಿತ್ರ ರಾರಾಜಿಸಲಿದೆ. ಜಾತಿ, ಮತ, ಲಿಂಗಭೇದ, ಧರ್ಮಭೇದದಿಂದ ನಲುಗಿದ್ದ ಸಮಾಜದಲ್ಲಿ ಪರಿವರ್ತನೆಗಾಗಿ ಬಸವೇಶ್ವರರು ನಡೆಸಿದ ಸಾಮಾಜಿಕ ಕ್ರಾಂತಿರೂಪವೇ ಅನುಭವ ಮಂಟಪ. ದೆಹಲಿಯ ಮಿಲಿಟರಿ ಕಂಟೋನ್‌ಮೆಂಟ್‌ನಲ್ಲಿ ಕಳೆದ 20 ದಿನಗಳಿಂದ ಈ ಸ್ತಬ್ಧಚಿತ್ರ ನಿರ್ಮಿಸಲಾಗಿದೆ. ಕಲಾವಿದ ಶಶಿಧರ್ ಅಡಪ ನೇತೃತ್ವದಲ್ಲಿ ಈ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ. ಸ್ತಬ್ಧಚಿತ್ರದ ಮುಂಭಾಗ ಕಾಯಕವೇ ಕೈಲಾಸ ಪರಿಕಲ್ಪನೆಗೆ ಒತ್ತುಕೊಟ್ಟ ಲಾರ್ಡ್ ಬಸವೇಶ್ವರರ ಮೂರ್ತಿ ನಿರ್ಮಿಸಲಾಗಿದೆ. ಸ್ತಬ್ಧ ಚಿತ್ರದೊಂದಿಗೆ ಸಾಣೆಹಳ್ಳಿಯ ಶಿವಸಂಚಾರ ನಾಟಕ ತಂಡದ 27 ಕಲಾವಿದರು ಭಾಗವಹಿಸುತ್ತಿದ್ದು, ಈ ಕಲಾವಿದರು ವಿವಿಧ ಶರಣರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೇ ನೃತ್ಯ ಪ್ರದರ್ಶನ ಮಾಡಲಿದ್ದಾರೆ.
ಅನುಭವ ಮಂಟಪದಲ್ಲಿ ಮಾದಾರ ಚೆನ್ನಯ್ಯ, ಮೊಳಿಗೆ ಮಾರಯ್ಯ, ಅಕ್ಕಮಹಾದೇವಿ, ಉಡುತಡಿಯ ಮಹಾದೇವಿ, ಮಡಿವಾಳ ಮಾಚಿದೇವ ಪಾತ್ರಧಾರಿ ಕಲಾವಿದರು ಸ್ತಬ್ಧಚಿತ್ರದಲ್ಲಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ಮೋದಿ ಹಾಗೂ ಈ ಬಾರಿ ವಿದೇಶಿ ಅತಿಥಿ ಬ್ರೆಜಿಲ್ ಅಧ್ಯಕ್ಷ ಜೈರ್ ಬಲಸನೋರ್ ಈ ದೃಶ್ಯಗಳನ್ನ ಕಣ್ತುಂಬಿಕೊಳ್ಳಲಿದ್ದಾರೆ.
ಸ್ತಬ್ಧಚಿತ್ರಕ್ಕೆ ಸಂಬಂಧಿಸಿದ ಹಾಡು, ವಚನಗಳು ಕೂಡ ಮಾರ್ದನಿಸಲಿವೆ. ಜನವರಿ 26ರಂದು ರಾಜಪಥ್ನಲ್ಲಿ ಕನ್ನಡದ ಧ್ವನಿ ಮೊಳಗಲಿದೆ. ನಾಡಿದ್ದು ರಾಜಪಥ್ ನಲ್ಲಿ ಪರೇಡ್ ರಿಹರ್ಸಲ್ ನಡೆಯಲಿದೆ. ಕಳೆದ 20 ವರ್ಷಗಳಲ್ಲಿ 11ನೇ ಭಾರಿಗೆ ಕರ್ನಾಟಕದ ಸ್ತಬ್ದಚಿತ್ರವು ಪರೇಡ್‌ಗೆ ಆಯ್ಕೆಯಾಗಿದೆ.