Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಫೆಬ್ರವರಿಯಲ್ಲಿ ಹಣದುಬ್ಬರವಾಯ್ತು ಶೇ 5.03; ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ

ಆಹಾರ ಹಾಗೂ ತೈಲ ಬೆಲೆ ಏರಿಕೆ ಕಾರಣಕ್ಕೆ 2021ರ ಫೆಬ್ರವರಿ ತಿಂಗಳ ಹಣದುಬ್ಬರ ದರವು ಶೇ 5.03 ತಲುಪಿದೆ. ಆ ಮೂಲಕ ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ ದರವು ಮುಟ್ಟಿದೆ.

ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಫೆಬ್ರವರಿಯಲ್ಲಿ ಹಣದುಬ್ಬರವಾಯ್ತು ಶೇ 5.03; ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ
ಸಾಂದರ್ಭಿಕ ಚಿತ್ರ
Follow us
Srinivas Mata
| Updated By: KUSHAL V

Updated on: Mar 12, 2021 | 8:11 PM

ಆಹಾರ ಮತ್ತು ತೈಲ ಬೆಲೆಗಳ ಏರಿಕೆ ಆಗಿರುವುದರಿಂದ ಚಿಲ್ಲರೆ ಹಣದುಬ್ಬರ ದರವು ಶೇ 5.03ಕ್ಕೆ ತಲುಪಿದೆ. ಶುಕ್ರವಾರದಂದು ಸಾಂಖ್ಯಿಕ ಹಾಗೂ ಕಾರ್ಯಕ್ರಮ ಅನುಷ್ಠಾನ ಇಲಾಖೆಯು ಈ ಬಗ್ಗೆ ದತ್ತಾಂಶ ಬಿಡುಗಡೆ ಮಾಡಿದೆ. ಜನವರಿಯಲ್ಲಿ ಹಣದುಬ್ಬರ ಶೇ 4.06ಕ್ಕೆ ಇಳಿದಿತ್ತು. ಇದು 2019 ಅಕ್ಟೋಬರ್ ನಂತರದ ಕನಿಷ್ಠ ಮಟ್ಟ ಅದಾಗಿತ್ತು. ಫೆಬ್ರವರಿ ತಿಂಗಳಲ್ಲಿ ಆಹಾರ ಹಣದುಬ್ಬರವು ಶೇ 3.87ಕ್ಕೆ ಏರಿದೆ. ಅದರ ಹಿಂದಿನ ತಿಂಗಳಲ್ಲಿ ಶೇಕಡಾ 1.89 ಇತ್ತು. ಆಹಾರ, ತರಕಾರಿ ಬೆಲೆಗಳ ಏರಿಕೆ, ಕೋರ್ (ಅತಿಮುಖ್ಯ) ಹಣದುಬ್ಬರದಿಂದಾಗಿ ದರ ಶೇ 5.88 ತಲುಪಿ, ಆತಂಕಕ್ಕೆ ಕಾರಣವಾಗಿದೆ. ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆ ಮ್ತು ರೀಟೇಲ್ ಬೆಲೆಗಳ ಮೇಲೆ ಅದರ ಪರಿಣಾಮದಿಂದಾಗಿ ಹಣದುಬ್ಬರ ದರವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಿಲ್​ವುಡ್ ಕೇನ್ ಇಂಟರ್​ನ್ಯಾಷನಲ್ ಸಿಇಒ ಹಾಗೂ ಸ್ಥಾಪಕರಾದ ನಿಶ್ ಭಟ್ ಹೇಳಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಸದ್ಯಕ್ಕೆ ಸಿಪಿಐ (ಗ್ರಾಹಕ ದರ ಸೂಚ್ಯಂಕ) ಆರ್​ಬಿಐ ನಿಗದಿಪಡಿಸಿದ ಗುರಿಯೊಳಗೆ ಇದೆ. ಆದರೆ ಹೆಚ್ಚುತ್ತಿರುವ ಹಣದುಬ್ಬರ, ಏರಿಕೆ ಆಗುತ್ತಿರುವ ಬಾಂಡ್ ಯೀಲ್ಡ್ ಮತ್ತು ಇದರಿಂದ ಭಾರತದ ಪ್ರಗತಿ ನಿಧಾನ ಆಗುವುದಕ್ಕೆ ಕಾರಣ ಆಗಬಹುದಾದ್ದನ್ನು ಏಪ್ರಿಲ್ ಸಭೆಯಲ್ಲಿ ಕೇಂದ್ರ ಬ್ಯಾಂಕ್​ನಿಂದ ತಹಬದಿಗೆ ತರಬೇಕಿದೆ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಸಿಪಿಐ ಹಣದುಬ್ಬರ ದರ ಶೇ 4 (ಪ್ಲಸ್ ಅಥವಾ ಮೈನಸ್ ಶೇಕಡಾ 2) ಇರಿಸಿಕೊಳ್ಳುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಕೇಳಲಾಗಿದೆ.

ಈ ಮಧ್ಯೆ, ಇಂಡೆಕ್ಸ್ ಆಫ್ ಇಂಡಸ್ಟ್ರಿಯಲ್ ಪ್ರೊಡಲ್ಷನ್ (ಐಐಪಿ) 2021ರ ಜನವರಿಯಲ್ಲಿ ಶೇ 1.6ರಷ್ಟು ಕುಸಿದಿದೆ. ತಜ್ಞರು ಹೇಳುವಂತೆ, ಉತ್ಪಾದನೆ ಚಟುವಟಿಕೆ ಈಗಲೂ ಪ್ರಬಲವಾಗಿದೆ. ಜತೆಗೆ ಬೇಡಿಕೆ ಕೂಡ ಉತ್ತಮವಿದೆ. ಆದ್ದರಿಂದ ಬೆಳವಣಿಗೆ ಮುಂದುವರಿಯಲಿದೆ. ಇನ್ನು ಫೆಬ್ರವರಿಯಲ್ಲಿ ನಡೆದ ಆರ್​ಬಿಐ ಹಣಕಾಸು ನೀತಿ ಸಭೆಯಲ್ಲಿ ಸಮಿತಿಯ ಸದಸ್ಯರು ಏರುತ್ತಿರುವ ಹಣದುಬ್ಬರದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಆದರೆ ರೆಪೋ ದರವನ್ನು ಶೇ 4ಕ್ಕೇ ಉಳಿಸಿಕೊಳ್ಳಲಾಯಿತು. ಇದರಿಂದ ವ್ಯವಸ್ಥೆಯೊಳಗೆ ನಗದು ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಎನ್ನಲಾಗಿತ್ತು. ಈ ನಗದು ಲಭ್ಯತೆ ಬಗ್ಗೆ ಭರವಸೆ ಹೊರತಾಗಿಯೂ ಭಾರತದ ಬಾಂಡ್ ಯೀಲ್ಡ್ ಹೆಚ್ಚಾಗಿತ್ತು. ಜಾಗತಿಕ ಮಟ್ಟದಲ್ಲಿ ಚೇತರಿಕೆ ಭರವಸೆ ಕಂಡುಬಂದಿದ್ದರಿಂದ ಅಲ್ಲಿಯದೇ ಹಣದುಬ್ಬರ ಹೆಚ್ಚಳದ ಆತಂಕದ ಪರಿಣಾಮ ಭಾರತದಲ್ಲೂ ಪ್ರತಿಫಲಿಸಿತು.

ಸತತ ಎರಡು ತ್ರೈಮಾಸಿಕಗಳಲ್ಲಿ ಆರ್ಥಿಕತೆಯು ಕುಗ್ಗಿದ ನಂತರ ಅಕ್ಟೋಬರ್​ನಿಂದ ಡಿಸೆಂಬರ್ ತ್ರೈಮಾಸಿಕದಲ್ಲಿ ಅಲ್ಪಪ್ರಮಾಣದ ಬೆಳವಣಿಗೆ ದಾಖಲಿಸಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಭಾರತದ ಜಿಡಿಪಿ ಶೇ 0.4 ಏರಿಕೆ ಕಂಡಿದೆ. ಲಾಕ್​​ಡೌನ್ ನಿರ್ವಹಣೆ ಹಾಗೂ ಆರ್ಥಿಕ ಉತ್ತೇಜನಗಳಿಂದಾಗಿ ಚೇತರಿಕೆ ಕಂಡುಬಂದಿದೆ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: ಡಿಸೆಂಬರ್ ತ್ರೈಮಾಸಿಕಕ್ಕೆ GDP ಶೇ 0.4 ಪ್ರಗತಿ; ರಿಸೆಷನ್​ನಿಂದ ಹೊರಬಂದ ಭಾರತ

ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು