ದೆಹಲಿಯಲ್ಲಿ ಒಮಿಕ್ರಾನ್ ಪ್ರಕರಣ ಏರಿಕೆ; ಆಸ್ಪತ್ರೆಗೆ ದಾಖಲು ತುಂಬಾ ಕಡಿಮೆ ಇರುವುದರಿಂದ ಭಯಪಡುವ ಅಗತ್ಯವಿಲ್ಲ ಎಂದ ಅರವಿಂದ ಕೇಜ್ರಿವಾಲ್
ಪ್ರಸ್ತುತ ಸನ್ನಿವೇಶದಲ್ಲಿ ಆಸ್ಪತ್ರೆಗೆ ದಾಖಲು ತುಂಬಾ ಕಡಿಮೆ ಇರುವುದರಿಂದ ಭಯಪಡುವ ಅಗತ್ಯವಿಲ್ಲ ಕೊವಿಡ್ ರೂಪಾಂತರವು "ಅತ್ಯಂತ ಸೌಮ್ಯವಾಗಿದೆ" ಎಂದು ಹೇಳಿದ ಅರವಿಂದ ಕೇಜ್ರಿವಾಲ್, "ಭಯಪಡುವ ಅಗತ್ಯವಿಲ್ಲ ಎಂದು ತೋರಿಸಲು ನನ್ನ ಬಳಿ ಡೇಟಾ ಇದೆ ಎಂದಿದ್ದಾರೆ.
ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್(Arvind Kejriwal) ದೆಹಲಿಯಲ್ಲಿ(Delhi) ಹೆಚ್ಚುತ್ತಿರುವ ಕೊವಿಡ್ -19 (Covid-19) ಮತ್ತು ಒಮಿಕ್ರಾನ್ (omicron) ಪ್ರಕರಣಗಳ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, “ಪ್ರಸ್ತುತ ಸನ್ನಿವೇಶದಲ್ಲಿ ಆಸ್ಪತ್ರೆಗೆ ದಾಖಲು ತುಂಬಾ ಕಡಿಮೆ ಇರುವುದರಿಂದ ಭಯಪಡುವ ಅಗತ್ಯವಿಲ್ಲ” ಎಂದು ಜನರಿಗೆ ಭರವಸೆ ನೀಡಿದರು. ಪ್ರಸ್ತುತ ಕೊವಿಡ್ ರೂಪಾಂತರ ಒಮಿಕ್ರಾನ್ (omicron) “ಅತ್ಯಂತ ಸೌಮ್ಯವಾಗಿದೆ” ಎಂದು ಹೇಳಿದ ಸಿಎಂ, “ಭಯಪಡುವ ಅಗತ್ಯವಿಲ್ಲ ಎಂದು ತೋರಿಸಲು ನನ್ನ ಬಳಿ ಡೇಟಾ ಇದೆ. ಡಿಸೆಂಬರ್ 29 ರಂದು, ನಾವು 932 ಪ್ರಕರಣಗಳನ್ನು ಹೊಂದಿದ್ದೇವೆ. ಡಿಸೆಂಬರ್ 30 ರಂದು 1,313 ಪ್ರಕರಣಗಳು ವರದಿ ಆಗಿವೆ. ಡಿಸೆಂಬರ್ 31 ರಂದು 1,796 ಪ್ರಕರಣಗಳಿಗೆ ಏರಿಕೆ ನಂತರ ಒಂದು ದಿನದಲ್ಲಿ ಪ್ರಕರಣಗಳ ಸಂಖ್ಯೆ 2,796ಕ್ಕೆ ಏರಿದೆ. ಇಂದಿನ ವರದಿಯಲ್ಲಿ ಸುಮಾರು 3,100 ಪ್ರಕರಣಗಳು ಸೇರ್ಪಡೆಯಾಗಿವೆ. ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚುತ್ತಿವೆ ಎಂದಿದ್ದಾರೆ. ಕೇಜ್ರಿವಾಲ್ ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು ಸಹ ಹೋಲಿಸಿದ್ದಾರೆ.
ದೆಹಲಿಯಲ್ಲಿ ಇದೀಗ 6,360 ಸಕ್ರಿಯ ಪ್ರಕರಣಗಳಿವೆ. ಮೂರು ದಿನಗಳ ಹಿಂದೆ ಈ ಸಂಖ್ಯೆ 2,191 ಆಗಿತ್ತು. ಆದರೆ ಡಿಸೆಂಬರ್ 29 ರಂದು ಕೇವಲ 262 ರೋಗಿಗಳು ಮಾತ್ರ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಜನವರಿ 1 ರಂದು, ಈ ಸಂಖ್ಯೆ 247 ಕ್ಕೆ ಇಳಿದಿದೆ. ಇದರರ್ಥ ಬರುತ್ತಿರುವ ಪ್ರಕರಣಗಳು ತುಂಬಾ ಸೌಮ್ಯವಾಗಿರುತ್ತವೆ ಅಥವಾ ಲಕ್ಷಣರಹಿತವಾಗಿವ. ಜನರು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಪ್ರಸ್ತುತ, ದೆಹಲಿಯಲ್ಲಿ ಕೇವಲ 82 ಆಮ್ಲಜನಕ ಹಾಸಿಗೆಗಳು ಬಳಕೆಯಾಗಿವೆ, ಆಮ್ಲಜನಕದ ಅಗತ್ಯವಿರುವ ಕೆಲವೇ ರೋಗಿಗಳು ಬರುತ್ತಿದ್ದಾರೆ. ನಮ್ಮಲ್ಲಿ ಅಂತಹ 37,000 ಹಾಸಿಗೆಗಳಿವೆ ಎಂದು ಅವರು ಹೇಳಿದರು.
दिल्ली में कोरोना संक्रमण की वर्तमान स्थिति पर महत्वपूर्ण प्रेस कॉन्फ़्रेंस | LIVE https://t.co/qliIQHzdx0
— Arvind Kejriwal (@ArvindKejriwal) January 2, 2022
ಕಳೆದ ವರ್ಷ ಮಾರಣಾಂತಿಕ ಎರಡನೇ ಅಲೆಯ ಸಮಯದಲ್ಲಿ ಭರ್ತಿಯಾದ ಆಸ್ಪತ್ರೆಗಳ ಹಾಸಿಗೆಗಳ ಸಂಖ್ಯೆಯನ್ನೂ ಸಿಎಂ ಹೋಲಿಕೆ ಮಾಡಿದರು. ಹೌದು, ಎರಡನೇ ಕೊವಿಡ್-19 ಅಲೆಯ ಸಮಯದಲ್ಲಿ ಹಾಸಿಗೆಗಳು ಮತ್ತು ಆಮ್ಲಜನಕದ ಕೊರತೆ ಇತ್ತು. ಅಂದಹಾಗೆ, ಅಂದಿನಿಂದ ಇಂದಿನ ಡೇಟಾವನ್ನು ಹೋಲಿಸಲು ನಾನು ಬಯಸುತ್ತೇನೆ. ನಾವು ಇದೀಗ ಸುಮಾರು 6,300 ಸಕ್ರಿಯ ಪ್ರಕರಣಗಳನ್ನು ಹೊಂದಿದ್ದೇವೆ ಮತ್ತು ಮಾರ್ಚ್ 27 ರಂದು ಕೂಡ 6,600 ಸಕ್ರಿಯ ಪ್ರಕರಣಗಳಿತ್ತು . ನಂತರ, 1,150 ಆಮ್ಲಜನಕ ಹಾಸಿಗೆಗಳು ಭರ್ತಿಯಾದವು. ಇಂದು ಕೇವಲ 82 ಇವೆ. ಮಾರ್ಚ್‌ನಲ್ಲಿ ಬಳಕೆಯಲ್ಲಿದ್ದ ವೆಂಟಿಲೇಟರ್‌ಗಳ ಸಂಖ್ಯೆ 145, ಆದರೆ ಇಂದು ಅದು 5. ಆಗ ದಿನಕ್ಕೆ ಸುಮಾರು 10 ಸಾವುಗಳು ಸಂಭವಿಸಿದವು. ಪ್ರಸ್ತುತ ಒಂದು ಅಥವಾ ಕೆಲವೊಮ್ಮೆ ಸಾವಿನ ಪ್ರಕರಣಗಳೇ ಇರುವುದಿಲ್ಲ. ಪ್ರಸ್ತುತ ಕೊರೊನಾವೈರಸ್ ರೂಪಾಂತರಿ ಇದೀಗ ತುಂಬಾ ಸೌಮ್ಯವಾಗಿದೆ ಮತ್ತು ಭಯಪಡುವ ಅಗತ್ಯವಿಲ್ಲ ಎಂದು ತೋರಿಸಲು ನಾನು ಈ ವಿಷಯಗಳನ್ನು ನಿಮಗೆ ಹೇಳುತ್ತಿದ್ದೇನೆ ಎಂದು ಕೇಜ್ರಿವಾಲ್ ಹೇಳಿದರು.
ಆಸ್ಪತ್ರೆಯ ಅಂಕಿಅಂಶಗಳನ್ನು ಹೋಲಿಸಿದರೆ ಕೇಜ್ರಿವಾಲ್ ಅವರು ಏಪ್ರಿಲ್ 1, 2020 ರಂದು ನಿನ್ನೆಯಂತೆ 2,700 ಪ್ರಕರಣಗಳು ಕಂಡುಬಂದಿವೆ ಎಂದು ಹೇಳಿದರು. “ಆಗ 1,700 ಆಮ್ಲಜನಕ ಹಾಸಿಗೆಗಳು ಭರ್ತಿಯಾಗಿದ್ದವು ಮತ್ತು 231 ರೋಗಿಗಳು ವೆಂಟಿಲೇಟರ್ ಬೆಂಬಲದಲ್ಲಿದ್ದರು” ಎಂದು ಅವರು ಹೇಳಿದರು. ಆದಾಗ್ಯೂ, ಜನರು ಜವಾಬ್ದಾರರಾಗಿರಲು ಒತ್ತಾಯಿಸಿದ ಸಿಎಂ, “ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಮತ್ತು ಸಾಬೂನಿನಿಂದ ಕೈ ತೊಳೆಯಿರಿ. ನಿಮ್ಮ ಸರ್ಕಾರ ನಿಮ್ಮೊಂದಿಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೊವಿಡ್ 3ನೇ ಅಲೆ ಬಂದಿದೆ, ಜಾಗರೂಕರಾಗಿರಿ ಎಂದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್