ಪಾಟ್ನಾ: ಬಿಹಾರದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮೀಸಲಾತಿಗಾಗಿ ಬೀದಿಗಿಳಿದು ಸಂಸತ್ತಿನವರೆಗೆ ಹೋರಾಟ ನಡೆಸುವುದಾಗಿ ಪ್ರತಿಜ್ಞೆ ಮಾಡಿದೆ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಕಳೆದ 2 ದಿನಗಳಿಂದ ಈ ವಿಷಯದ ಬಗ್ಗೆ ದನಿ ಎತ್ತಿದ್ದು, ಬಿಹಾರದಲ್ಲಿ ವಂಚಿತ ಜಾತಿಗಳ ಕೋಟಾವನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸುವ ಕುರಿತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂಸತ್ತಿನ ತಪ್ಪುದಾರಿಗೆಳೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ತೇಜಸ್ವಿ ಯಾದವ್, ಸಮಾಜದ ವಂಚಿತ ಮತ್ತು ನಿರ್ಲಕ್ಷಿತ ವರ್ಗಗಳ ಕಲ್ಯಾಣವನ್ನು ಗುರಿಯಾಗಿಟ್ಟುಕೊಂಡು ಜಾತಿ ಗಣತಿಗಾಗಿ ಪ್ರತಿಪಾದಿಸಲು ಆರ್ಜೆಡಿಯ ದೀರ್ಘಕಾಲದ ಪ್ರಯತ್ನಗಳನ್ನು ಎತ್ತಿ ತೋರಿಸಿದ್ದಾರೆ.
वंचित और उपेक्षित वर्गों के कल्याणार्थ जातिगत जनगणना करवाने के लिए राष्ट्रीय जनता दल ने दशकों तक सड़क से सदन तक कठिन संघर्ष किया है। जब बिहार में महागठबंधन सरकार बनी तब मात्र 𝟏𝟕 महीनों में ही हमने स्वतंत्र भारत में पहली बार किसी राज्य में जाति आधारित गणना करवा इसके आँकड़े… pic.twitter.com/ge2MwwBBTb
— Tejashwi Yadav (@yadavtejashwi) August 3, 2024
ಇದನ್ನೂ ಓದಿ: ನೀಟ್ ಪೇಪರ್ ಸೋರಿಕೆಯಲ್ಲಿ ತೇಜಸ್ವಿ ಯಾದವ್ ಆಪ್ತನ ಕೈವಾಡ; ಬಿಹಾರದ ಡಿಸಿಎಂ ಆರೋಪ
ಬಿಹಾರದಲ್ಲಿ ಗ್ರ್ಯಾಂಡ್ ಅಲೈಯನ್ಸ್ ಸರ್ಕಾರ ರಚನೆಯಾದ ನಂತರ, 17 ತಿಂಗಳೊಳಗೆ ಜಾತಿ ಆಧಾರಿತ ಸಮೀಕ್ಷೆಯನ್ನು ನಡೆಸಿ ಪ್ರಕಟಿಸಲು ಯಶಸ್ವಿಯಾಯಿತು. ಜಾತಿ ಸಮೀಕ್ಷೆಯ ವರದಿಯನ್ನು ಆಧರಿಸಿ, ಬಿಹಾರದಲ್ಲಿ ಎಲ್ಲಾ ವರ್ಗಗಳಿಗೆ ಮೀಸಲಾತಿ ಮಿತಿಯನ್ನು ನವೆಂಬರ್ 2023ರಲ್ಲಿ ಶೇ. 75ಕ್ಕೆ ಹೆಚ್ಚಿಸಲಾಗಿದೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ಅತ್ಯಾಚಾರ ಪ್ರಕರಣ; ಡಿಎನ್‌ಎ ಪರೀಕ್ಷೆಯಿಂದ ನ್ಯಾಯ ಸಿಗುತ್ತದೆಯೇ ವಿನಃ ರಾಜಕೀಯದಿಂದಲ್ಲ ಎಂದ ಅಖಿಲೇಶ್ ಯಾದವ್
“ಡಿಸೆಂಬರ್ 2023ರಲ್ಲಿ ಪೂರ್ವ ಪ್ರಾದೇಶಿಕ ಕೌನ್ಸಿಲ್ ಸಭೆಯಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂವಿಧಾನದ 9 ನೇ ಶೆಡ್ಯೂಲ್‌ಗೆ ಸೇರಿಸಲು ವಿನಂತಿಸಲಾಯಿತು. ಇದನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ನಿರಾಕರಿಸಿತು” ಎಂದು ಅವರು ಹೇಳಿದ್ದಾರೆ.
ಬಿಹಾರದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ, ಮೀಸಲಾತಿ ವಿಚಾರದಲ್ಲಿ ಆರ್‌ಜೆಡಿ ಬಿಹಾರ ಸರ್ಕಾರ ಮತ್ತು ಕೇಂದ್ರ ಎರಡನ್ನೂ ಗುರಿಯಾಗಿಸಿಕೊಂಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ