ಕೇರಳ: ಭೂಕುಸಿತದಲ್ಲಿ ಸಿಲುಕಿರುವ ಪ್ರಾಣಿಗಳ ರಕ್ಷಣೆ, ಸುರಕ್ಷತೆಗೆ ಕಂಟ್ರೋಲ್ ರೂಂ ತೆರೆದ ಸರ್ಕಾರ

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಿಲುಕಿರುವ ಪ್ರಾಣಿಗಳ ರಕ್ಷಣೆಗಾಗಿ ಕೇರಳ ಸರ್ಕಾರವು ಕಂಟ್ರೋಲ್ ರೂಂ ತೆರೆದಿದೆ. ಭೂಕುಸಿತದಲ್ಲಿ ಸಿಲುಕಿರುವ ಜಾನುವಾರುಗಳು ಸೇರಿದಂತೆ ಈ ಪ್ರಾಣಿಗಳು ಇನ್ನು ಮುಂದೆ ಅನಾಥವಾಗುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಕೇರಳ: ಭೂಕುಸಿತದಲ್ಲಿ ಸಿಲುಕಿರುವ ಪ್ರಾಣಿಗಳ ರಕ್ಷಣೆ, ಸುರಕ್ಷತೆಗೆ ಕಂಟ್ರೋಲ್ ರೂಂ ತೆರೆದ ಸರ್ಕಾರ
ನಾಯಿಗಳು
Follow us
ನಯನಾ ರಾಜೀವ್
|

Updated on: Aug 04, 2024 | 8:56 AM

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಿಲುಕಿರುವ ಪ್ರಾಣಿಗಳ ರಕ್ಷಣೆಗಾಗಿ ಕೇರಳ ಸರ್ಕಾರವು ಕಂಟ್ರೋಲ್ ರೂಂ ತೆರೆದಿದೆ. ಭೂಕುಸಿತದಲ್ಲಿ ಸಿಲುಕಿರುವ ಜಾನುವಾರುಗಳು ಸೇರಿದಂತೆ ಈ ಪ್ರಾಣಿಗಳು ಇನ್ನು ಮುಂದೆ ಅನಾಥವಾಗುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಗಾಯಗೊಂಡ ಜಾನುವಾರುಗಳಿಗೆ ಅಗತ್ಯ ಚಿಕಿತ್ಸೆ ನೀಡಿದ ನಂತರ, ಅವುಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಿದ್ಧರಿರುವ ಸಮೀಪದ ಪ್ರದೇಶಗಳ ಹೈನುಗಾರರಿಗೆ ಪ್ರಾಣಿ ಕಲ್ಯಾಣ ಇಲಾಖೆ ಹಸ್ತಾಂತರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎನ್‌ಜಿಒಗಳು ಮತ್ತು ಸ್ವಯಂಸೇವಕರ ಮೂಲಕ ಪ್ರಾಣಿಗಳಿಗೆ ಆಹಾರ ಮತ್ತು ನೀರನ್ನು ಒದಗಿಸುತ್ತಿವೆ. ಚೂರಲ್ಮಲಾ ದುರಂತದ ಸ್ಥಳದಿಂದ ಚೇತರಿಸಿಕೊಂಡ ಎರಡು ಸಣ್ಣ ನಾಯಿಗಳನ್ನು ಮಿಲಿಟರಿ ಮತ್ತು ಪೊಲೀಸ್ ವಿಶೇಷ ರಕ್ಷಣಾ ತಂಡಕ್ಕೆ ಹಸ್ತಾಂತರಿಸಲಾಯಿತು.

ಚೂರಲ್ಮಳ, ಮುಂಡಕೈ ಸೇರಿದಂತೆ ವಿಕೋಪ ಪೀಡಿತ ಸ್ಥಳಗಳಲ್ಲಿ ಜೀವಂತವಾಗಿ ಮತ್ತು ಸತ್ತಿರುವ ಸಾಕುಪ್ರಾಣಿಗಳು ಮತ್ತು ಪಕ್ಷಿಗಳನ್ನು ನಿಯಂತ್ರಣ ಕೊಠಡಿಗೆ ಕರೆತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇದೇ ವೇಳೆ ಪಶು ವೈದ್ಯಾಧಿಕಾರಿಗಳು ಹಾಗೂ ಕ್ಷೇತ್ರಾಧಿಕಾರಿಗಳನ್ನೊಳಗೊಂಡ ತಂಡ ಎರಡು ಬ್ಯಾಚ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಮತ್ತಷ್ಟು ಓದಿ: Wayanad Landslides: ಭೂಕುಸಿತಗಳ ಸಂತ್ರಸ್ತರಿಗೆ ವಿಮೆಯ ಸೆಟಲ್​ಮೆಂಟ್​ಗಳನ್ನು ವೇಗಗೊಳಿಸಲು ಇನ್ಷುರನ್ಸ್ ಕಂಪನಿಗಳಿಗೆ ಸರ್ಕಾರ ಸೂಚನೆ

ಪಶು ಸಂಗೋಪನಾ ಇಲಾಖೆಯ ಜಿಲ್ಲಾ ಅಧಿಕಾರಿ ಡಾ.ರಾಜೇಶ್ ಮಾತನಾಡಿ, ಅಗ್ನಿಶಾಮಕ ದಳದ ನೆರವಿನಿಂದ ವೈದ್ಯರು ಹಾಗೂ ಕ್ಷೇತ್ರಾಧಿಕಾರಿಗಳು ಚಿಕ್ಕ ಪ್ರಾಣಿಗಳನ್ನು ಬೋನಿನಲ್ಲಿಟ್ಟು ದೊಡ್ಡ ಪ್ರಾಣಿಗಳನ್ನು ಆಂಬ್ಯುಲೆನ್ಸ್‌ನಲ್ಲಿ ಮೆಪ್ಪಾಡಿಯ ಪಂಚಾಯತ್ ಆಸ್ಪತ್ರೆಗೆ ಸಾಗಿಸುತ್ತಿದ್ದಾರೆ ಎಂದರು.

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ 200ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ರಕ್ಷನಾ ಕಾರ್ಯ ಮುಂದುವರೆದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ