AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RRB Recruitment 2026: ರೈಲ್ವೆ ಇಲಾಖೆಯಿಂದ 119 ಸೆಕ್ಷನ್ ಕಂಟ್ರೋಲರ್ ಮತ್ತು 6565 ಟೆಕ್ನೀಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ರೈಲ್ವೆ ನೇಮಕಾತಿ ಮಂಡಳಿ (RRB) 119 ಸೆಕ್ಷನ್ ಕಂಟ್ರೋಲರ್ ಮತ್ತು 6565 ಟೆಕ್ನೀಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಸೆಕ್ಷನ್ ಕಂಟ್ರೋಲರ್ ಹುದ್ದೆಗಳಿಗೆ ಪದವೀಧರರು ಜುಲೈ 15 ರಿಂದ ಆಗಸ್ಟ್ 14 ರವರೆಗೆ ಅರ್ಜಿ ಸಲ್ಲಿಸಬಹುದು. ಟೆಕ್ನೀಷಿಯನ್ ಹುದ್ದೆಗಳಿಗೆ ಐಟಿಐ, ಡಿಪ್ಲೊಮಾ, ಪದವಿ ಹೊಂದಿರುವವರು ಜುಲೈ 29 ರವರೆಗೆ ಅರ್ಜಿ ಸಲ್ಲಿಸಬಹುದು. ಅರ್ಹತಾ ಮಾನದಂಡಗಳು, ವಯೋಮಿತಿ ಮತ್ತು ಅರ್ಜಿ ಶುಲ್ಕದ ಸಂಪೂರ್ಣ ವಿವರಗಳನ್ನು ಪರಿಶೀಲಿಸಿ, ಈ ಉತ್ತಮ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

RRB Recruitment 2026: ರೈಲ್ವೆ ಇಲಾಖೆಯಿಂದ 119 ಸೆಕ್ಷನ್ ಕಂಟ್ರೋಲರ್ ಮತ್ತು 6565 ಟೆಕ್ನೀಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ರೈಲ್ವೆ ನೇಮಕಾತಿImage Credit source: Getty Images
ಅಕ್ಷತಾ ವರ್ಕಾಡಿ
|

Updated on: Jul 08, 2026 | 2:53 PM

Share

ಭಾರತ ಸರ್ಕಾರದ ರೈಲ್ವೆ ಸಚಿವಾಲಯವು ಉದ್ಯೋಗಾಕಾಂಕ್ಷಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ. ರೈಲ್ವೆ ನೇಮಕಾತಿ ಮಂಡಳಿ (RRB) ದೇಶದ ವಿವಿಧ ರೈಲ್ವೆ ವಲಯಗಳಲ್ಲಿ 119 ಸೆಕ್ಷನ್ ಕಂಟ್ರೋಲರ್ (Section Controller) ಹುದ್ದೆಗಳ ಭರ್ತಿಗೆ ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಲಿದೆ. CEN No. 03/2026 ಅಡಿಯಲ್ಲಿ ಕಿರು ಅಧಿಸೂಚನೆ ಪ್ರಕಟವಾಗಿದ್ದು, ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಜುಲೈ 15ರಿಂದ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಆರಂಭ:

ಕಿರು ಅಧಿಸೂಚನೆಯ ಪ್ರಕಾರ, 2026ರ ಜುಲೈ 15ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಅಭ್ಯರ್ಥಿಗಳು ಆಗಸ್ಟ್ 14, 2026ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ವಯೋಮಿತಿ ಎಷ್ಟು?

  • ಅಭ್ಯರ್ಥಿಗಳ ವಯಸ್ಸು 2026ರ ಜುಲೈ 1ರಂತೆ 20 ರಿಂದ 30 ವರ್ಷಗಳೊಳಗೆ ಇರಬೇಕು.

ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಈ ಕೆಳಗಿನಂತೆ ಸಡಿಲಿಕೆ ನೀಡಲಾಗಿದೆ:

  • SC/ST ಅಭ್ಯರ್ಥಿಗಳು: 5 ವರ್ಷ
  • OBC ಅಭ್ಯರ್ಥಿಗಳು: 3 ವರ್ಷ
  • PwBD ಅಭ್ಯರ್ಥಿಗಳು: 10 ವರ್ಷ
  • OBC-PwBD ಅಭ್ಯರ್ಥಿಗಳು: 13 ವರ್ಷ
  • SC/ST-PwBD ಅಭ್ಯರ್ಥಿಗಳು: 15 ವರ್ಷ

ವೇತನ ಮತ್ತು ಅರ್ಜಿ ಶುಲ್ಕ:

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 35,400 ರೂ. ಮೂಲ ವೇತನ ಜೊತೆಗೆ ಕೇಂದ್ರ ಸರ್ಕಾರದ ನಿಯಮಾನುಸಾರ ವಿವಿಧ ಭತ್ಯೆಗಳು ದೊರೆಯಲಿವೆ.

ಅರ್ಜಿ ಶುಲ್ಕ:

ಮಹಿಳೆಯರು, SC/ST, ಮಾಜಿ ಸೈನಿಕರು, PwBD, ಟ್ರಾನ್ಸ್‌ಜೆಂಡರ್ ಹಾಗೂ EBC ಅಭ್ಯರ್ಥಿಗಳಿಗೆ 250ರೂ. ಮತ್ತು ಇತರೆ ಅಭ್ಯರ್ಥಿಗಳಿಗೆ 500ರೂ. ಅರ್ಜಿ ಶುಲ್ಕ ವಿಧಿಸಲಾಗಿದೆ. ಇದಲ್ಲದೇ CBT ಪರೀಕ್ಷೆಗೆ ಹಾಜರಾಗುವ ಸಾಮಾನ್ಯ ಅಭ್ಯರ್ಥಿಗಳಿಗೆ 400 ಮರುಪಾವತಿ ಮಾಡಲಾಗುತ್ತದೆ.

6,565 ತಂತ್ರಜ್ಞ ಹುದ್ದೆಗಳಿಗೂ ಅರ್ಜಿ ಆಹ್ವಾನ:

ಸೆಕ್ಷನ್ ಕಂಟ್ರೋಲರ್ ನೇಮಕಾತಿಯ ಜೊತೆಗೆ, ರೈಲ್ವೆ ನೇಮಕಾತಿ ಮಂಡಳಿಯು ಒಟ್ಟು 6,565 ತಂತ್ರಜ್ಞ (Technician) ಹುದ್ದೆಗಳ ಭರ್ತಿಗೂ ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆಗಳಿಗೆ ಜುಲೈ 29 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಐಟಿಐ, ಡಿಪ್ಲೊಮಾ ಹಾಗೂ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಸೇರಿದಂತೆ ನಿಗದಿತ ಆಯ್ಕೆ ಪ್ರಕ್ರಿಯೆಯ ಮೂಲಕ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us