ದುರಹಂಕಾರ ತೋರಿದವರನ್ನು 241ಕ್ಕೆ ನಿಲ್ಲಿಸಿದ ರಾಮ; ಬಿಜೆಪಿ ವಿರುದ್ಧ ಆರ್‌ಎಸ್‌ಎಸ್ ನಾಯಕನಿಂದಲೇ ವಾಗ್ದಾಳಿ

ದುರಹಂಕಾರಿಯಾದವರಿಗೆ 241 ಸ್ಥಾನಗಳನ್ನು ಮಾತ್ರ ನೀಡಿರುವ ರಾಮ ತನ್ನ ವಿರೋಧಿಗಳನ್ನು 234ಕ್ಕೆ ನಿಲ್ಲಿಸುವ ಮೂಲಕ ತಕ್ಕ ಪಾಠ ಕಲಿಸಿದ್ದಾನೆ. ಇದು ದೇವರ ನ್ಯಾಯ ಎಂದು ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್ ಕುಮಾರ್ ಹೇಳಿದ್ದಾರೆ. ಬಿಜೆಪಿ ವಿರುದ್ಧ ಆರ್​ಎಸ್​ಎಸ್​ ನಾಯಕನೇ ವಾಗ್ದಾಳಿ ನಡೆಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ದುರಹಂಕಾರ ತೋರಿದವರನ್ನು 241ಕ್ಕೆ ನಿಲ್ಲಿಸಿದ ರಾಮ; ಬಿಜೆಪಿ ವಿರುದ್ಧ ಆರ್‌ಎಸ್‌ಎಸ್ ನಾಯಕನಿಂದಲೇ ವಾಗ್ದಾಳಿ
ಇಂದ್ರೇಶ್ ಕುಮಾರ್
Follow us
|

Updated on: Jun 14, 2024 | 3:07 PM

ಜೈಪುರ: ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಆಡಳಿತಾರೂಢ ಬಿಜೆಪಿಯ ಪ್ರದರ್ಶನಈ ಬಾರಿ ನೀರಸವಾಗಿದೆ. ಈ ಫಲಿತಾಂಶಕ್ಕೆ ಬಿಜೆಪಿ ನಾಯಕರ “ದುರಹಂಕಾರ” ಕಾರಣವಾಗಿದೆ ಎಂದು ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ (Indresh Kumar)  ಟೀಕಿಸಿದ್ದಾರೆ. ಜೈಪುರ ಸಮೀಪದ ಕನೋಟಾದಲ್ಲಿ ‘ರಾಮರಥ ಅಯೋಧ್ಯೆ ಯಾತ್ರೆ ದರ್ಶನ ಪೂಜೆ ಸಮಾರಂಭ’ವನ್ನು ಉದ್ದೇಶಿಸಿ ಮಾತನಾಡಿದ ಆರ್‌ಎಸ್‌ಎಸ್ (RSS) ಮುಖಂಡ ಇಂದ್ರೇಶ್ ಕುಮಾರ್, ರಾಮಭಕ್ತಿ ಹೊಂದಿದ್ದರೂ ದುರಹಂಕಾರಿಯಾಗಿದ್ದ ಪಕ್ಷವನ್ನು 241ಕ್ಕೆ ನಿಲ್ಲಿಸಲಾಗಿದೆ. ಆದರೂ ಅದನ್ನು ಈ ಚುನಾವಣೆಯ ಅತಿ ದೊಡ್ಡ ಪಕ್ಷವನ್ನಾಗಿ ಮಾಡಲಾಗಿದೆ ಎಂದಿದ್ದಾರೆ. ಹಾಗೇ, ಇಂಡಿಯಾ ಬ್ಲಾಕ್ ಅನ್ನು ಉಲ್ಲೇಖಿಸಿ ಮಾತನಾಡಿದ ಅವರು, ರಾಮನಲ್ಲಿ ನಂಬಿಕೆಯಿಲ್ಲದವರ ಬಣವನ್ನು 234 ಸ್ಥಾನಗಳಲ್ಲಿ ನಿಲ್ಲಿಸಲಾಯಿತು ಎಂದಿದ್ದಾರೆ.

ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಅವರು ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಆಡಳಿತ ಪಕ್ಷದ ನೀರಸ ಪ್ರದರ್ಶನಕ್ಕೆ “ದುರಹಂಕಾರ” ಕಾರಣವೆಂದು ಹೇಳಿದೆ. ಈ ಮೂಲಕ ಬಿಜೆಪಿ ತನ್ನ ಸೈದ್ಧಾಂತಿಕ ಮಾರ್ಗದರ್ಶಕವಾದ ಆರ್​ಎಸ್​ಎಸ್​ನಿಂದ ಟೀಕೆಗಳನ್ನು ಎದುರಿಸಿತು.

ಇದನ್ನೂ ಓದಿ: Mohan Bhagwat: ಮಣಿಪುರಕ್ಕೆ ಆದ್ಯತೆ ನೀಡಬೇಕು, ಹಿಂಸೆ ನಿಲ್ಲಿಸಬೇಕು; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಜೈಪುರ ಸಮೀಪದ ಕನೋಟಾದಲ್ಲಿ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಇಂದ್ರೇಶ್ ಕುಮಾರ್, “ಶ್ರೀರಾಮನ ಭಕ್ತಿ ಹೊಂದಿದವರು ಕ್ರಮೇಣ ದುರಹಂಕಾರಿಯಾದರು. ಆ ಪಕ್ಷವನ್ನು ಅತಿದೊಡ್ಡ ಪಕ್ಷವೆಂದು ಘೋಷಿಸಲಾಯಿತು. ಆದರೆ, ಅವರ ದುರಹಂಕಾರದ ಕಾರಣದಿಂದ ರಾಮನು 241ಕ್ಕೆ ನಿಲ್ಲಿಸಿದನು” ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ 240 ಸ್ಥಾನಗಳನ್ನು ಗೆದ್ದರೂ ಬಹುಮತದ ಅಂಕವನ್ನು ದಾಟಲು ವಿಫಲವಾದ ಬಿಜೆಪಿಯನ್ನು ಈ ಕಾಮೆಂಟ್ ನಿರ್ದೇಶಿಸಿದಂತಿದೆ. ಇದು 2014ರ ಚುನಾವಣೆಗಿಂತ ಪಕ್ಷದ ಅತ್ಯಂತ ಕೆಟ್ಟ ಪ್ರದರ್ಶನವಾಗಿದೆ.

ಇಂದ್ರೇಶ್ ಕುಮಾರ್ ಅವರು “ರಾಮ ವಿರೋಧಿ” ಎಂಬ ಹಣೆಪಟ್ಟಿಯೊಂದಿಗೆ ಪ್ರತಿಪಕ್ಷ ಇಂಡಿಯಾ ಬಣವನ್ನು ಟೀಕಿಸಿದ್ದಾರೆ. ರಾಮನಲ್ಲಿ ನಂಬಿಕೆಯಿಲ್ಲದವರನ್ನು ಒಟ್ಟಿಗೆ 234ರಲ್ಲಿ ನಿಲ್ಲಿಸಲಾಯಿತು. ದೇವರ ನ್ಯಾಯವು ನಿಜ ಮತ್ತು ಆನಂದದಾಯಕವಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಬ್ಲಾಕ್ 234 ಸ್ಥಾನಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿಯ ಚುನಾವಣಾ ತಯಾರಿ, ಕೆಲಸ ನೋಡಿ ಖುಷಿಪಟ್ಟ ಆರ್‌ಎಸ್‌ಎಸ್‌

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಾರ್ವಜನಿಕ ಸೇವೆಯಲ್ಲಿ ನಮ್ರತೆಯ ಮಹತ್ವವನ್ನು ಬೋಧಿಸಿದ ಬೆನ್ನಲ್ಲೇ ಆರ್‌ಎಸ್‌ಎಸ್ ನಾಯಕನ ಈ ಹೇಳಿಕೆಗಳು ಬಂದಿವೆ.

ನಿಜವಾದ ಸೇವಕನು ಘನತೆಯನ್ನು ಕಾಯ್ದುಕೊಳ್ಳುತ್ತಾನೆ. ನಾನು ಈ ಕೆಲಸ ಮಾಡಿದ್ದೇನೆ ಎಂದು ಹೇಳುವ ಅಹಂಕಾರವನ್ನು ಹೊಂದಿರುವುದಿಲ್ಲ. ಅಂತಹ ವ್ಯಕ್ತಿಯನ್ನು ಮಾತ್ರ ನಿಜವಾದ ಸೇವಕ ಎಂದು ಕರೆಯಬಹುದು ಎಂದು ಮೋಹನ್ ಭಾಗವತ್ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ