Sabarimala: ಶಬರಿಮಲೆ ವರ್ಚುವಲ್ ಕ್ಯೂ ದರ್ಶನದ ಆನ್‌ಲೈನ್ ಟಿಕೆಟ್‌ ಬುಕ್ ಮಾಡುವುದು ಹೇಗೆ?

ಶಬರಿಮಲೆ ದರ್ಶನ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಬುಕಿಂಗ್ ಆರಂಭಿಸಲಿದೆ. ತೀರ್ಥಯಾತ್ರೆಗಾಗಿ ದೇವಸ್ಥಾನಕ್ಕೆ ಪ್ರವೇಶವನ್ನು ಹೊಂದಿರುವ ಭಕ್ತರ ದೈನಂದಿನ ಸಂಖ್ಯೆಯನ್ನು 70,000ಕ್ಕೆ ಮಿತಿಗೊಳಿಸಲಾಗಿದೆ. ಶಬರಿಮಲೆ ಯಾತ್ರಾರ್ಥಿಗಳಿಗೆ ಟ್ರಾವಂಕೂರ್ ದೇವಸ್ವಂ ಬೋರ್ಡ್ (ಟಿಡಿಬಿ) ವರ್ಚುವಲ್ ಕ್ಯೂ ಅನ್ನು ತೆರೆದಿದೆ. ಇದು ದೈನಂದಿನ 70,000 ಸ್ಲಾಟ್‌ಗಳ ಮಿತಿಯನ್ನು ನಿಗದಿಪಡಿಸಿದೆ. ಈ ಕ್ರಮವು ಮುಂಬರುವ ತೀರ್ಥಯಾತ್ರಾ ಕಾಲದಲ್ಲಿ ಭಕ್ತರ ನೂಕುನುಗ್ಗಲನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ.

Sabarimala: ಶಬರಿಮಲೆ ವರ್ಚುವಲ್ ಕ್ಯೂ ದರ್ಶನದ ಆನ್‌ಲೈನ್ ಟಿಕೆಟ್‌ ಬುಕ್ ಮಾಡುವುದು ಹೇಗೆ?
ಶಬರಿಮಲೆ ದೇವಸ್ಥಾನ
Follow us
ಸುಷ್ಮಾ ಚಕ್ರೆ
|

Updated on: Oct 17, 2024 | 3:19 PM

ಪಥನಾಂತಿಟ್ಟ: ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ಬುಧವಾರ ಶಬರಿಮಲೆ ದೇವಸ್ಥಾನದಲ್ಲಿ ಮುಂಬರುವ ತೀರ್ಥಯಾತ್ರೆಯ ಋತುವಿನಲ್ಲಿ ವರ್ಚುವಲ್ ಕ್ಯೂ ಬುಕಿಂಗ್ ಅನ್ನು ಪ್ರಾರಂಭಿಸಿದೆ. ಪ್ರತಿದಿನ 70,000 ಯಾತ್ರಾರ್ಥಿಗಳು ಶಬರಿಮಲೆ ದರ್ಶನಕ್ಕೆ ತೆರಳಬಹುದು. ಈ ಹಿಂದೆ ಸರ್ಕಾರವು ದೈನಂದಿನ ಮಿತಿಯನ್ನು 80,000 ಭಕ್ತರಿಗೆ ಮಿತಿಗೊಳಿಸಿತ್ತು. ಉಳಿದ 10,000 ಸ್ಲಾಟ್‌ಗಳ ಬಗ್ಗೆ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಶಬರಿಮಲೆ ಆಡಳಿತ ಮಂಡಳಿ ಹೇಳಿದೆ. ‘ಸ್ಪಾಟ್ ಬುಕಿಂಗ್’ ಪದವನ್ನು ಸ್ಪಷ್ಟವಾಗಿ ಬಳಸದಿದ್ದರೂ ಸಹ ಸ್ಪಾಟ್ ಬುಕಿಂಗ್‌ಗಾಗಿ ಸ್ಲಾಟ್‌ಗಳನ್ನು ಮೀಸಲಿಡಲಾಗುತ್ತಿದೆ ಎಂದು ಮೂಲಗಳು ಸುಳಿವು ನೀಡಿವೆ.

ಕಳೆದ ವರ್ಷವೂ ಭಕ್ತರಿಗೆ ಆನ್‌ಲೈನ್‌ನಲ್ಲಿ 70,000 ಬುಕ್ಕಿಂಗ್‌ಗಳನ್ನು ನಿಗದಿಪಡಿಸಲಾಗಿತ್ತು. ಶಬರಿಮಲೆ ದೇಗುಲದಲ್ಲಿ ದರ್ಶನಕ್ಕೆ ಆನ್‌ಲೈನ್ ನೋಂದಣಿ ಕಡ್ಡಾಯವಲ್ಲ ಎಂದು ಸರ್ಕಾರ ಹೇಳಿದ ಬೆನ್ನಲ್ಲೇ ಸ್ಪಾಟ್ ಬುಕ್ಕಿಂಗ್‌ಗೆ ಅವಕಾಶ ನೀಡಿರುವುದಕ್ಕೆ ಊಹಾಪೋಹಗಳು ಹೊರಹೊಮ್ಮಿವೆ.

‘ಸ್ಪಾಟ್ ಬುಕಿಂಗ್’ ಎಂಬ ಪದವನ್ನು ಬಳಸದಿದ್ದರೂ, ವ್ಯವಸ್ಥೆಯ ಬಗ್ಗೆ ಯಾವುದೇ ಅರಿವಿಲ್ಲದೆ ಶಬರಿಮಲೆಗೆ ಬರುವ ಭಕ್ತರು ಮತ್ತು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳದ ಭಕ್ತರು ಅಡೆತಡೆಗಳಿಲ್ಲದೆ ದರ್ಶನ ಪಡೆಯುತ್ತಾರೆ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಇದನ್ನೂ ಓದಿ: Sabarimala: ಶಬರಿಮಲೆ ಯಾತ್ರೆಗೆ ಈ ವರ್ಷದಿಂದ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ

ಈ ವಾರದ ಆರಂಭದಲ್ಲಿ ಶಬರಿಮಲೆ ದರ್ಶನಕ್ಕೆ ಸ್ಪಾಟ್ ಬುಕಿಂಗ್ ಅನ್ನು ಸರ್ಕಾರ ತಳ್ಳಿಹಾಕಿತ್ತು. ಇದು ತೀವ್ರ ಟೀಕೆಗಳಿಗೆ ಕಾರಣವಾಯಿತು. ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಯುಡಿಎಫ್ ಹಾಗೂ ಎಲ್‌ಡಿಎಫ್ ಮಿತ್ರಪಕ್ಷ ಸಿಪಿಐ ಸರಕಾರವನ್ನು ಒತ್ತಾಯಿಸಿತ್ತು. ಆರ್​ಎಸ್​ಎಸ್ ಈ ಕ್ರಮದ ವಿರುದ್ಧ ಎದ್ದಿರುವ ಭಿನ್ನಮತವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಿದೆ ಎಂದು ಸಿಪಿಐ ಹೇಳಿತ್ತು. ವರ್ಚುವಲ್ ಬುಕಿಂಗ್‌ಗೆ ಕಟ್ಟುನಿಟ್ಟಾದ ಆದೇಶವಿದ್ದರೂ ಪೂರ್ವ ನೋಂದಣಿಯಿಲ್ಲದೆ ನಿರ್ದಿಷ್ಟ ಸಂಖ್ಯೆಯ ಯಾತ್ರಿಕರು ಆಗಮಿಸುತ್ತಾರೆ ಎಂದು ಮಂಡಳಿಯು ನಿರೀಕ್ಷಿಸುತ್ತದೆ ಎಂದು ಟಿಡಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕಾಯ್ದಿರಿಸಿದ ಸ್ಲಾಟ್‌ಗಳನ್ನು ಅಂತಹ ವ್ಯಕ್ತಿಗಳಿಗೆ ಹಂಚಲಾಗುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.

ವರ್ಚುವಲ್ ಕ್ಯೂ TDB ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತದೆ. ಯಾತ್ರಾರ್ಥಿಗಳು ತಮ್ಮ ಸ್ಲಾಟ್‌ಗಳನ್ನು ಮುಂಚಿತವಾಗಿ ಕಾಯ್ದಿರಿಸಬಹುದು ಮತ್ತು ದೇವಾಲಯದ ಸಂಕೀರ್ಣದ ಪ್ರವೇಶದ್ವಾರದಲ್ಲಿ ತೋರಿಸಬೇಕಾದ QR ಕೋಡ್ ಅನ್ನು ನೀಡಲಾಗುತ್ತದೆ. 70,000 ಜನರು ಆನ್​ಲೈನ್​ನಲ್ಲಿ ಶಬರಿಮಲೆ ದರ್ಶನಕ್ಕೆ ಟಿಕೆಟ್ ಬುಕ್ ಮಾಡಬಹುದು. ಇನ್ನು 10,000 ಟಿಕೆಟ್​ಗಳನ್ನು ಶಬರಿಮಲೆಗೆ ನೇರವಾಗಿ ಆಗಮಿಸುವ ಭಕ್ತರಿಗೆ ನೀಡಲಾಗುವುದು.

ಶಬರಿಮಲೆ ವರ್ಚುವಲ್ ಕ್ಯೂ ಪಾಸ್ ಬುಕ್ ಮಾಡುವುದು ಹೇಗೆ?:

– ನಿಮ್ಮ ಫೋನ್ ಸಂಖ್ಯೆ ಮತ್ತು ಇ-ಮೇಲ್ ಬಳಸಿ ಲಾಗ್ ಇನ್ ಮಾಡಿ.

– ನೀವು ಮೊದಲ ಬಾರಿಗೆ ನೋಂದಾಯಿಸುತ್ತಿದ್ದರೆ, ನೀವು ಹೊಸ ಬಳಕೆದಾರ ಐಡಿಯನ್ನು ರಚಿಸಬೇಕಾಗುತ್ತದೆ. ದೃಢೀಕರಣಕ್ಕಾಗಿ OTP ಕಳುಹಿಸಲಾಗುತ್ತದೆ.

– ನಿಮ್ಮ ಐಡಿ ಪ್ರೂಫ್ ವಿವರಗಳೊಂದಿಗೆ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಿ.

– ನಿಮ್ಮ ಆಧಾರ್ ಕಾರ್ಡ್, ಮತದಾರರ ಕಾರ್ಡ್ ಅಥವಾ ಪಾಸ್‌ಪೋರ್ಟ್ ಈ ರೀತಿ ಎಲ್ಲ ಮಾನ್ಯವಾದ ಸರ್ಕಾರಿ ಐಡಿ ಪುರಾವೆಯನ್ನು ಸಹ ನೀವು ಒದಗಿಸಬೇಕಾಗುತ್ತದೆ.

– ಈಗ “ಮುಂದುವರಿಸಿ” ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.

– ನೀಡಿರುವ ಫೋನ್ ಸಂಖ್ಯೆಗೆ ನೀವು OTP ಸ್ವೀಕರಿಸುತ್ತೀರಿ.

– ಈಗ OTP ನೀಡುವ ಮೂಲಕ ಖಾತೆಯನ್ನು ಪರಿಶೀಲಿಸಿ.

– ನಿಮ್ಮ ದೇವಾಲಯದ ಭೇಟಿಯ ದಿನವನ್ನು ಆಯ್ಕೆ ಮಾಡಿಕೊಳ್ಳಿ.

– ನಿಮ್ಮ ಶಬರಿಮಲೆ ವರ್ಚುವಲ್ ಕ್ಯೂ ಟಿಕೆಟ್ ಅನ್ನು ಬುಕ್ ಮಾಡಲು ಸಬ್ಮಿಟ್ ಎಂಬ ಬಟನ್ ಕ್ಲಿಕ್ ಮಾಡಿ.

– 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವರ್ಚುವಲ್-ಕ್ಯೂ ಬುಕಿಂಗ್ ಅಗತ್ಯವಿರುವುದಿಲ್ಲ.

ಶಬರಿಮಲೆಗೆ ಹೋಗುವ ಮಾರ್ಗಗಳು:

ಯಾತ್ರಾರ್ಥಿಗಳು 2 ವಿಭಿನ್ನ ಮಾರ್ಗಗಳಿಂದ ಕಾಲ್ನಡಿಗೆಯಲ್ಲಿ ಶಬರಿಮಲೆಯನ್ನು ತಲುಪಬಹುದು. ಒಂದು ಪಂಬಾದಿಂದ ಮತ್ತು ಇನ್ನೊಂದು ಎರುಮೇಲಿಯಿಂದ ಶಬರಿಮಲೆಯನ್ನು ತಲುಪಬಹುದು. ಪಂಬಾದಿಂದ ಬರುವ ಮಾರ್ಗವು ಚಿಕ್ಕದಾಗಿದೆ. 5 ಕಿ.ಮೀ ನೀಲಿಮಲ ಮಾರ್ಗ ಎಂದೂ ಕರೆಯಲಾಗುತ್ತದೆ. ಇನ್ನೊಂದು ಮಾರ್ಗವಾದ ಎರುಮೇಲಿ ಮಾರ್ಗವು 40 ಕಿ.ಮೀ ಉದ್ದವಾಗಿದೆ. ಇದನ್ನು ಪೆರಿಯಾ ಪಥೈ (ಉದ್ದದ ಹಾದಿ) ಎಂದು ಕರೆಯಲಾಗುತ್ತದೆ. ಇದು ಅಂತಿಮವಾಗಿ ಪಂಬಾ ಮಾರ್ಗದೊಂದಿಗೆ ವಿಲೀನಗೊಳ್ಳುತ್ತದೆ. ಪಂಬಾ ಮಾರ್ಗದ ಬುಕ್ಕಿಂಗ್‌ಗಳು ತೆರೆದಿವೆ.

ಇದನ್ನೂ ಓದಿ: ಅಸ್ಸಾಂ ಪೌರತ್ವ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಎತ್ತಿಹಿಡಿದ ಸುಪ್ರೀಂಕೋರ್ಟ್​

ಶಬರಿಮಲೆ ದೇವಸ್ಥಾನವು ಭಾರತದ ಕೇರಳದ ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಹಿಂದೂ ದೇವಾಲಯವಾಗಿದೆ. ಅಯ್ಯಪ್ಪ ದೇವರಿಗೆ ಸಮರ್ಪಿತವಾಗಿರುವ ಇದು ದೇಶದ ಅತ್ಯಂತ ಮಹತ್ವದ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಈ ದೇವಾಲಯವು ಶಬರಿಮಲೆ ಬೆಟ್ಟದ ಮೇಲೆ 914 ಮೀಟರ್ (3,000 ಅಡಿ) ಎತ್ತರದಲ್ಲಿದೆ. ಮಂಡಲಂ-ಮಕರವಿಳಕ್ಕು ಉತ್ಸವ ಎಂದು ಕರೆಯಲ್ಪಡುವ ವಾರ್ಷಿಕ ತೀರ್ಥಯಾತ್ರೆಯ ಋತುವು ಭಾರತ ಮತ್ತು ಪ್ರಪಂಚದಾದ್ಯಂತ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ