ಸೈನಿಕ್ ಶಾಲೆಯಲ್ಲಿ ಬೃಹತ್ ಉದ್ಯೋಗಾವಕಾಶ: ಪಿಜಿಟಿ, ಟಿಜಿಟಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ. ಅಸ್ಸಾಂನ ಸೈನಿಕ್ ಸ್ಕೂಲ್ ಗೋಲ್‌ಪಾರ, ಪಿಜಿಟಿ, ಟಿಜಿಟಿ, ಕ್ಲರ್ಕ್ ಸೇರಿದಂತೆ ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಖಾಯಂ ಹಾಗೂ ಗುತ್ತಿಗೆ ಆಧಾರದ ನೇಮಕಾತಿ ಇದಾಗಿದ್ದು, ಮಾಸಿಕ ಆಕರ್ಷಕ ವೇತನ ನೀಡಲಾಗುತ್ತದೆ. ಆಸಕ್ತರು ನವೆಂಬರ್ 12ರೊಳಗೆ ಅರ್ಜಿ ಸಲ್ಲಿಸಿ. ಯುವಜನತೆಗೆ ಇದು ಉತ್ತಮ ಸೇವಾ ಅವಕಾಶ.

ಸೈನಿಕ್ ಶಾಲೆಯಲ್ಲಿ ಬೃಹತ್ ಉದ್ಯೋಗಾವಕಾಶ: ಪಿಜಿಟಿ, ಟಿಜಿಟಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ!
ಸೈನಿಕ್ ಶಾಲೆಯಲ್ಲಿ ಬೃಹತ್ ಉದ್ಯೋಗಾವಕಾಶ
Image Credit source: Getty Images

Updated on: Oct 15, 2026 | 1:26 PM

ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವ ಯುವಜನತೆಗೆ ಸೈನಿಕ್ ಶಾಲೆಯಲ್ಲಿ ಸೇವೆ ಸಲ್ಲಿಸಲು ಸುವರ್ಣ ಅವಕಾಶವೊಂದು ದೊರೆತಿದೆ. ಅಸ್ಸಾಂನಲ್ಲಿರುವ ಪ್ರಸಿದ್ಧ ‘ಸೈನಿಕ್ ಸ್ಕೂಲ್ ಗೋಲ್‌ಪಾರ’ ಸಂಸ್ಥೆಯು ಬೋಧಕ ಮತ್ತು ಬೋಧಕೇತರ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಪಿಜಿಟಿ, ಟಿಜಿಟಿ, ಕ್ವಾರ್ಟರ್‌ಮಾಸ್ಟರ್, ಬ್ಯಾಂಡ್‌ಮಾಸ್ಟರ್, ಮೆಸ್ ಮ್ಯಾನೇಜರ್, ಕ್ಲರ್ಕ್ ಮತ್ತು ವಾರ್ಡ್ ಬಾಯ್ ಸೇರಿದಂತೆ ಹಲವು ವಿಭಾಗಗಳಲ್ಲಿ ಈ ನೇಮಕಾತಿ ನಡೆಯುತ್ತಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನವೆಂಬರ್ 12 ರೊಳಗೆ ಅರ್ಜಿ ಸಲ್ಲಿಸುವುದು ಅಗತ್ಯ.

ನೇಮಕಾತಿಯ ಸ್ವರೂಪ ಮತ್ತು ಹುದ್ದೆಗಳ ವಿವರ:

ಈ ನೇಮಕಾತಿ ಪ್ರಕ್ರಿಯೆಯಲ್ಲಿ ಕೆಲವು ಹುದ್ದೆಗಳನ್ನು ನಿಯಮಿತ (ಖಾಯಂ) ಆಧಾರದ ಮೇಲೆ ಭರ್ತಿ ಮಾಡಲಿದ್ದರೆ, ಇನ್ನು ಕೆಲವು ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತದೆ. ಒಟ್ಟು 12 ವಿಭಿನ್ನ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಅವುಗಳಲ್ಲಿ ಪಿಜಿಟಿ ಭೌತಶಾಸ್ತ್ರ, ಟಿಜಿಟಿ ಗಣಿತ, ಟಿಜಿಟಿ ಸಮಾಜ ವಿಜ್ಞಾನ, ಕ್ವಾರ್ಟರ್‌ಮಾಸ್ಟರ್, ಬ್ಯಾಂಡ್ ಮಾಸ್ಟರ್, ದೈಹಿಕ ತರಬೇತಿ ಬೋಧಕ (ಪಿಟಿಐ)-ಕಮ್-ಮ್ಯಾಟ್ರನ್, ಮೆಸ್ ಮ್ಯಾನೇಜರ್, ಲೋವರ್ ಡಿವಿಷನ್ ಕ್ಲರ್ಕ್ (ಎಲ್‌ಡಿಸಿ), ವಾರ್ಡ್ ಬಾಯ್, ಆಫೀಸ್ ಸೂಪರಿಂಟೆಂಡೆಂಟ್, ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಮತ್ತು ಹಾರ್ಸ್ ರೈಡಿಂಗ್ ಬೋಧಕ ಹುದ್ದೆಗಳು ಸೇರಿವೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಆಯಾ ಹುದ್ದೆಗೆ ನಿಗದಿಪಡಿಸಿದ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕಾಗುತ್ತದೆ.

ಹುದ್ದೆವಾರು ಮಾಸಿಕ ವೇತನದ ವಿವರಗಳು:

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಯ ಸ್ವರೂಪಕ್ಕೆ ಅನುಗುಣವಾಗಿ ಆಕರ್ಷಕ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ. ಪಿಜಿಟಿ ಭೌತಶಾಸ್ತ್ರ ಹುದ್ದೆಗೆ ತಿಂಗಳಿಗೆ 57,120ರೂ. ಹಾಗೂ ಟಿಜಿಟಿ ಗಣಿತ ಮತ್ತು ಸಮಾಜ ವಿಜ್ಞಾನ ಹುದ್ದೆಗಳಿಗೆ 53,880 ರೂ. ವೇತನ ಸಿಗಲಿದೆ. ಕಚೇರಿ ಸೂಪರಿಂಟೆಂಡೆಂಟ್‌ಗಳಿಗೆ 42,480ರೂ., ಬ್ಯಾಂಡ್‌ಮಾಸ್ಟರ್ ಹಾಗೂ ಮೆಸ್ ಮ್ಯಾನೇಜರ್‌ಗಳಿಗೆ 40,880, ಕುದುರೆ ಸವಾರಿ ಬೋಧಕರಿಗೆ 40,000 ಮತ್ತು ಸಿಸ್ಟಮ್ಸ್ ಅಡ್ಮಿನಿಸ್ಟ್ರೇಟರ್‌ಗಳಿಗೆ 30,000 ಮಾಸಿಕ ವೇತನ ಪಾವತಿಸಲಾಗುತ್ತದೆ. ಉಳಿದಂತೆ ಕ್ವಾರ್ಟರ್‌ಮಾಸ್ಟರ್‌ಗಳಿಗೆ 29,200, ಪಿಟಿಐ-ಕಮ್-ಮ್ಯಾಟ್ರನ್‌ಗಳಿಗೆ 25,200, ಎಲ್‌ಡಿಸಿ ಹುದ್ದೆಗೆ 23,880 ಹಾಗೂ ವಾರ್ಡ್ ಬಾಯ್ಸ್‌ಗೆ 21,600 ವೇತನ ದೊರೆಯಲಿದೆ.

ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಶುಲ್ಕದ ಮಾಹಿತಿ:

ಹುದ್ದೆಯ ಸ್ವರೂಪ ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ತರಗತಿ ಪ್ರದರ್ಶನ (Class Demonstration) ಹಾಗೂ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಕಡ್ಡಾಯ ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳನ್ನು ಮಾತ್ರ ಲಿಖಿತ ಪರೀಕ್ಷೆಗೆ ಪರಿಗಣಿಸಲಾಗುತ್ತದೆ. ಅರ್ಜಿ ಶುಲ್ಕವಾಗಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು 300 ರೂ. ಪಾವತಿಸಬೇಕಿದ್ದು, ಎಸ್‌ಸಿ (SC), ಎಸ್‌ಟಿ (ST) ಮತ್ತು ಒಬಿಸಿ (OBC) ಅಭ್ಯರ್ಥಿಗಳು 200ರೂ. ಪಾವತಿಸಬೇಕಾಗುತ್ತದೆ. ಈ ಶುಲ್ಕವನ್ನು ಡಿಮಾಂಡ್ ಡ್ರಾಫ್ಟ್ (DD) ಮೂಲಕ ಮಾತ್ರ ಸಲ್ಲಿಸಬೇಕು.

ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ನೇಮಕಾತಿ: 86 ಜವಾನ, ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವ ವಿವರ ಹಾಗೂ ಕೊನೆಯ ದಿನಾಂಕ:

ಅಭ್ಯರ್ಥಿಗಳು ಅಧಿಕೃತ ನೇಮಕಾತಿ ಅಧಿಸೂಚನೆಯಲ್ಲಿ ನೀಡಲಾದ ನಿಗದಿತ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ಭರ್ತಿ ಮಾಡಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ ಮತ್ತು ಅಗತ್ಯ ಶೈಕ್ಷಣಿಕ ದಾಖಲೆಗಳ ಸ್ವಯಂ ದೃಢೀಕೃತ (Self-Attested) ಪ್ರತಿಗಳನ್ನು ಲಗತ್ತಿಸಿ ಅಂಚೆ ಮೂಲಕ ಕಳುಹಿಸಬೇಕು. ಅರ್ಜಿ ಕಳುಹಿಸುವ ಲಕೋಟೆಯ ಮೇಲೆ “ಸಂಬಂಧಿತ ನಿಯಮಿತ ಅಥವಾ ಗುತ್ತಿಗೆ ಹುದ್ದೆಗೆ ಅರ್ಜಿ” ಎಂದು ಸ್ಪಷ್ಟವಾಗಿ ನಮೂದಿಸುವುದು ಕಡ್ಡಾಯವಾಗಿದೆ.

ಅರ್ಜಿ ಕಳುಹಿಸಬೇಕಾದ ವಿಳಾಸ: ಪ್ರಾಂಶುಪಾಲರು, ಸೈನಿಕ್ ಸ್ಕೂಲ್ ಗೋಲ್ಪಾರ, ಪಿ.ಒ. ರಾಜಪಾರ, ಜಿಲ್ಲೆ: ಗೋಲ್ಪಾರ, ಅಸ್ಸಾಂ – 783133.

ಗಮನಿಸಿ: ಗುತ್ತಿಗೆ ನೇಮಕಾತಿಯು ಆರಂಭದಲ್ಲಿ 11 ತಿಂಗಳ ಅವಧಿಗೆ ಮಾತ್ರ ಇರಲಿದ್ದು, ಅಭ್ಯರ್ಥಿಯ ಕಾರ್ಯಕ್ಷಮತೆಯ ಆಧಾರದ ಮೇಲೆ ಅದನ್ನು ಮುಂದೆ ವಿಸ್ತರಿಸುವ ಅವಕಾಶವಿರುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:24 pm, Thu, 15 October 26

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us