ಸುಪ್ರೀಮ್ ಕೋರ್ಟ್ ವಕೀಲರನ್ನು ಹೈಕೋರ್ಟ್​ ನ್ಯಾಯಾಧೀಶರ ಹುದ್ದೆಗೆ ಬಡ್ತಿ ನೀಡಲು ಮಾಡಿರುವ ಮನವಿಗೆ ಸಿಜೆಐ ಸಮ್ಮತಿ

ಎಸ್​ಸಿಬಿಎ ಕಾರ್ಯನಿರ್ವಾಹಕ ಸಮಿತಿಯು ಸಂಘದ ಅಧ್ಯಕ್ಷ ವಿಕಾಸ್ ಸಿಂಗ್, ಉಪಾಧ್ಯಕ್ಷ ಮತ್ತು ಹಿರಿಯ ಸದಸ್ಯರಾದ ಮಹಾಲಕ್ಷ್ಮಿ ಪಾವನಿ ಬಾರ್​ ಕೌನ್ಸಿಲ್​​ನ ನಾಲ್ವರು ಪ್ರತಿಷ್ಠಿತ ಸದಸ್ಯರಾದ ರಾಕೇಶ್​ ದ್ವೀವೇದಿ, ಶೇಖರ್ ನಫಾಡೆ, ವಿಜಯ್ ಹನ್ಸಾರಿಯಾ ಮತ್ತು ವಿ ಗಿರಿ ಅವರನ್ನೊಳಗೊಂಡಿದೆ.

ಸುಪ್ರೀಮ್ ಕೋರ್ಟ್ ವಕೀಲರನ್ನು ಹೈಕೋರ್ಟ್​ ನ್ಯಾಯಾಧೀಶರ ಹುದ್ದೆಗೆ ಬಡ್ತಿ ನೀಡಲು ಮಾಡಿರುವ ಮನವಿಗೆ ಸಿಜೆಐ ಸಮ್ಮತಿ
ಭಾರತದ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಎಮ್​ ವಿ ರಮಣ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 08, 2021 | 10:10 PM

ನವದೆಹಲಿ: ಸುಪ್ರೀಮ್ ಕೋರ್ಟಿನ ವಕೀಲರನ್ನು ಹೈಕೋರ್ಟ್​ಗಳ ನ್ಯಾಯಾಧೀಶರಾಗಿ ಬಡ್ತಿ ನೀಡುವಂತೆ ಸುಪ್ರೀಮ್ ಕೋರ್ಟ್​ ವಕೀಲರ ಸಂಘ ಮಾಡಿರುವ ಮನವಿಯನ್ನು ಪರಿಗಣಿಸಲು ಭಾರತದ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಎಮ್​ ವಿ ರಮಣ ಅವರು ಸಮ್ಮತಿಸಿದ್ದಾರೆ. ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಮ್ ಕೋರ್ಟ್​ ವಕೀಲರ ಸಂಘ (ಎಸ್​ಸಿಬಿಎ) ಮಾಡಿರುವ ಪ್ರಸ್ತಾಪದ ನಂತರ ಈ ಬೆಳವಣಿಗೆ ಬೆಳಕಿಗೆ ಬಂದಿದೆ.

ಸುಪ್ರೀಮ್ ಕೋರ್ಟಿನ ವಕೀಲರು, ಸಿವಿಲ್, ಕ್ರಿಮಿನಲ್, ಸಂವೈಧಾನಿಕ, ವಾಣಿಜ್ಯ ಕಾನೂನು ಮೊದಲಾದ ಎಲ್ಲ ಬಗೆಯ ಪ್ರಕರಣಗಳೊಂದಿಗೆ ಸತತವಾಗಿ ವ್ಯವಹರಿಸುತ್ತಾ ಅಪಾರ ಅನುಭವ ಹೊಂದಿದಾಗ್ಯೂ ಅವರು ಹೈಕೋರ್ಟ್​ಗಳಲ್ಲಿ ಜಾಸ್ತಿ ವಾದಿಸುವುದಿಲ್ಲವಾದ್ದರಿಂದ ಹೈಕೋರ್ಟ್​ ಕೊಲೇಜಿಯಮ್ ಅಪರೂಕ್ಕೊಮ್ಮೆ ಅವರನ್ನು ಬಡ್ತಿಗೆ ಪರಿಗಣಿಸುತ್ತದೆ ಎಂದು ಎಸ್​ಸಿಬಿಎ ಮುಖ್ಯ ನ್ಯಾಯಾಧೀಶನ್ನು ಆಗ್ರಹಿಸಿತ್ತು. ಹೈಕೋರ್ಟ್​ಗಳಲ್ಲಿ ವಾದಿಸುವ ತಮ್ಮ ಸಹೋದ್ಯೋಗಿಗಳಿಗಿಂತ ವೃತ್ತಿಪರವಾಗಿ ತಾವು ಹೆಚ್ಚು ಯೋಗ್ಯ ಮತ್ತು ಅರ್ಹರಾಗಿರುವುದರಿಂದ ಅವಕಾಶ ವಂಚಿತರಾಗುತ್ತಿದ್ದೇವೆ ಎಂದು ವಕೀಲರ ಸಂಘ ಹೇಳಿತ್ತು.

‘ಗೌರವಾನ್ವಿತ ಮುಖ್ಯ ನ್ಯಾಯಾಧೀಶರು ಎಸ್​ಸಿಬಿಎ ಮಾಡಿರುವ ಮನವಿಯನ್ನು ಪರಿಗಣಿಸಲು ಸಮ್ಮತಿಸಿದ್ದಾರೆ ಮತ್ತು ಹೈಕೋರ್ಟ್​ಗಳ ಮುಖ್ಯ ನ್ಯಾಯಾಧೀಶರಿಗೆ ಸುಪ್ರೀಮ್​ ಕೋರ್ಟ್​ಗಳಲ್ಲಿ ವಾದಿಸುವ ವಕೀಲರಿಗೆ ಹೈಕೋರ್ಟ್​ಗಳಲ್ಲಿ ನ್ಯಾಯಾಧೀಶರ ಹುದ್ದೆಗೆ ಬಡ್ತಿ ನೀಡಲು ಹೇಳಿದ್ದಾರೆ ಅಂತ ಸದಸ್ಯರಿಗೆ ತಿಳಿಸಲು ಸಂತೋಷವಾಗುತ್ತದೆ,’ ಎಂದು ಎಸ್​ಸಿಬಿಎ ಕಾರ್ಯನಿರ್ವಾಹಕ ಸಮಿತಿಯು ತನ್ನ ಸದಸ್ಯರಿಗೆ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಎಸ್​ಸಿಬಿಎ ಕಾರ್ಯನಿರ್ವಾಹಕ ಸಮಿತಿಯು ಸಂಘದ ಅಧ್ಯಕ್ಷ ವಿಕಾಸ್ ಸಿಂಗ್, ಉಪಾಧ್ಯಕ್ಷ ಮತ್ತು ಹಿರಿಯ ಸದಸ್ಯರಾದ ಮಹಾಲಕ್ಷ್ಮಿ ಪಾವನಿ ಬಾರ್​ ಕೌನ್ಸಿಲ್​​ನ ನಾಲ್ವರು ಪ್ರತಿಷ್ಠಿತ ಸದಸ್ಯರಾದ ರಾಕೇಶ್​ ದ್ವೀವೇದಿ, ಶೇಖರ್ ನಫಾಡೆ, ವಿಜಯ್ ಹನ್ಸಾರಿಯಾ ಮತ್ತು ವಿ ಗಿರಿ ಅವರನ್ನೊಳಗೊಂಡಿದೆ.

‘ಸ್ನೇಹಿತರೇ, ಭಾರತದಲ್ಲಿ ವಕೀಲ ವೃತ್ತಿಯನ್ನು ನಡೆಸುವ ಪ್ರತಿಯೊಬ್ಬ ಲಾಯರ್ ಭಾರತೀಯನಾಗಿದ್ದಾನೆ ಮತ್ತು ಅವನು ಅಥವಾ ಅವಳು ದೇಶದ ಯಾವುದೇ ಮೂಲೆಯಲ್ಲಿ ಪ್ರ್ಯಾಕ್ಟೀಸ್​ ಮಾಡುತ್ತಿದ್ದರೂ ಕೇವಲ ಅರ್ಹತೆಯ ಮೇಲೆ ಅವನು/ಅವಳನ್ನು ಬಡ್ತಿಗೆ ಪರಿಗಣಿಸಬೇಕು. ಹೈಕೋರ್ಟ್​ಗಳಲ್ಲಿ ಭಾರೀ ಪ್ರಮಾಣದಲ್ಲಿ ಹುದ್ದೆಗಳು ಖಾಲಿಯರುವ ಹಿನ್ನೆಲೆಯಲ್ಲಿ ನಮ್ಮ ಮನವಿಯನ್ನು ಕೂಡಲೇ ಪರಿಗಣಿಸಲಾಗುತ್ತದೆ ಎಂಬ ನಿರೀಕ್ಷೆಯನ್ನು ನಾವಿಟ್ಟುಕೊಂಡಿದ್ದೇವೆ,’ ಎಂದು ಈ ಸಂದರ್ಭದಲ್ಲಿ ಎಸ್​ಸಿಬಿಎ ಅಧ್ಯಕ್ಷ ವಿಕಾಸ ಸಿಂಗ್ ಹೇಳಿದರು.

ಇದನ್ನೂ ಓದಿ: ಕೊವಿಡ್ ನಿರ್ವಹಣೆಯಲ್ಲಿ ನ್ಯಾಯಾಲಯದ ಪಾತ್ರಕ್ಕೆ ಶಾಲಾ ಬಾಲಕಿಯ ಮೆಚ್ಚುಗೆ ಪತ್ರ; ಮುಖ್ಯ ನ್ಯಾಯಮೂರ್ತಿಯ ಮನಮುಟ್ಟುವ ಉತ್ತರ

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ