AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿಗೆ ಮೊದಲ ಮೇಡ್ ಇನ್ ಇಂಡಿಯಾ ಸೆಮಿಕಂಡಕ್ಟರ್ ಚಿಪ್ ಹಸ್ತಾಂತರ

ಸೆಮಿಕಾನ್ ಇಂಡಿಯಾದಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಪ್ರಧಾನಿ ಮೋದಿಗೆ ಭಾರತದಲ್ಲಿ ತಯಾರಿಸಿದ ಮೊದಲ ವಿಕ್ರಮ್ 32-ಬಿಟ್ ಪ್ರೊಸೆಸರ್ ಅನ್ನು ಪ್ರಸ್ತುತಪಡಿಸಿದರು. ಸೆಮಿಕಾನ್ ಇಂಡಿಯಾ 2025 ಅನ್ನು ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಉದ್ಘಾಟಿಸಿದರು. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಜಿತಿನ್ ಪ್ರಸಾದ ಕೂಡ ಉಪಸ್ಥಿತರಿದ್ದರು.

ಪ್ರಧಾನಿ ಮೋದಿಗೆ ಮೊದಲ ಮೇಡ್ ಇನ್ ಇಂಡಿಯಾ ಸೆಮಿಕಂಡಕ್ಟರ್ ಚಿಪ್ ಹಸ್ತಾಂತರ
Ashwini Vaishnaw Presented Made In India Chip To Modi
ಸುಷ್ಮಾ ಚಕ್ರೆ
|

Updated on:Sep 02, 2025 | 2:10 PM

Share

ನವದೆಹಲಿ, ಸೆಪ್ಟೆಂಬರ್ 2: ಭಾರತ ಸರ್ಕಾರ ದೇಶದಲ್ಲಿ ಮೊದಲ ಬಾರಿ ತಯಾರಾದ 32-ಬಿಟ್ ಮೈಕ್ರೋಪ್ರೊಸೆಸರ್ ವಿಕ್ರಮ್ ಅನ್ನು ದೆಹಲಿಯ ಸೆಮಿಕಾನ್ ಇಂಡಿಯಾ 2025 (Semicon India 2025) ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿತು. ಇದು ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತದೆ. ಇಸ್ರೋ ಅಭಿವೃದ್ಧಿಪಡಿಸಿದ ಈ ಚಿಪ್ ಅನ್ನು ಬಾಹ್ಯಾಕಾಶ ಉಡಾವಣಾ ವಾಹನಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಇಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು 4 ಅನುಮೋದಿತ ಯೋಜನೆಗಳ ಪರೀಕ್ಷಾ ಚಿಪ್‌ಗಳೊಂದಿಗೆ ಮೊದಲ ಮೇಡ್ ಇನ್ ಇಂಡಿಯಾ ಪ್ರೊಸೆಸರ್ ಅನ್ನು ಪ್ರಧಾನಿ ನರೇಂದ್ರ ಮೋದಿಗೆ ಹಸ್ತಾಂತರಿಸಿದರು.

ಈ ವೇಳೆ ಸೆಮಿಕಾನ್ ಇಂಡಿಯಾ 2025 ಅನ್ನು ಉದ್ದೇಶಿಸಿ ಮಾತನಾಡಿದ ವೈಷ್ಣವ್, “ನಾವು ಭಾರತದ ಸೆಮಿಕಂಡಕ್ಟರ್ ಮಿಷನ್ ಅನ್ನು ಪ್ರಾರಂಭಿಸಿದ್ದೇವೆ. ಮೂರೂವರೆ ವರ್ಷಗಳ ಅಲ್ಪಾವಧಿಯಲ್ಲಿ ಜಗತ್ತು ಭಾರತವನ್ನು ವಿಶ್ವಾಸದಿಂದ ನೋಡುತ್ತಿದೆ. ಇಂದು 5 ಸೆಮಿಕಂಡಕ್ಟರ್ ಘಟಕಗಳ ನಿರ್ಮಾಣವು ತ್ವರಿತಗತಿಯಲ್ಲಿ ನಡೆಯುತ್ತಿದೆ. ನಾವು ಪ್ರಧಾನಿ ಮೋದಿ ಅವರಿಗೆ ಮೊದಲ ‘ಭಾರತದಲ್ಲಿ ತಯಾರಿಸಿದ’ (ಮೇಡ್ ಇನ್ ಇಂಡಿಯಾ) ಚಿಪ್ ಅನ್ನು ಹಸ್ತಾಂತರಿಸಿದ್ದೇವೆ” ಎಂದಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಜೊತೆ ಕಾರಿನಲ್ಲಿ ಹೋಗಲು 10 ನಿಮಿಷ ಕಾದ ಪುಟಿನ್; ಟ್ರೆಂಡ್ ಆಯ್ತು ಫೋಟೋ

ಅಶ್ವಿನಿ ವೈಷ್ಣವ್ ಪ್ರಧಾನಿ ಮೋದಿ ಅವರಿಗೆ ವಿಕ್ರಮ್ 32-ಬಿಟ್ ಪ್ರೊಸೆಸರ್ ಮತ್ತು 4 ಅನುಮೋದಿತ ಯೋಜನೆಗಳ ಪರೀಕ್ಷಾ ಚಿಪ್‌ಗಳನ್ನು ಪ್ರಸ್ತುತಪಡಿಸಿದ್ದಾರೆ. ಇಸ್ರೋದ ಸೆಮಿಕಂಡಕ್ಟರ್ ಲ್ಯಾಬ್‌ನಿಂದ ಅಭಿವೃದ್ಧಿಪಡಿಸಲಾದ ವಿಕ್ರಮ್ ಭಾರತದ ಮೊದಲ ಸಂಪೂರ್ಣ ಸ್ಥಳೀಯ 32-ಬಿಟ್ ಮೈಕ್ರೋಪ್ರೊಸೆಸರ್ ಆಗಿದ್ದು, ಕಠಿಣ ಉಡಾವಣಾ ವಾಹನ ಪರಿಸ್ಥಿತಿಗಳಲ್ಲಿ ಬಳಸಲು ಅರ್ಹತೆ ಪಡೆದಿದೆ.

“ಇಸ್ರೋದ ಸೆಮಿಕಂಡಕ್ಟರ್ ಪ್ರಯೋಗಾಲಯವು ಅಭಿವೃದ್ಧಿಪಡಿಸಿದ ವಿಕ್ರಮ್ ಪ್ರೊಸೆಸರ್, ಬಾಹ್ಯಾಕಾಶ ಉಡಾವಣಾ ವಾಹನಗಳ ಕಠಿಣ ಪರಿಸರ ಪರಿಸ್ಥಿತಿಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ, ಇದು ಆಮದು ಮಾಡಿಕೊಂಡ ಚಿಪ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಭಾರತದ ಪ್ರಯತ್ನಗಳಲ್ಲಿ ಒಂದು ಮೈಲಿಗಲ್ಲು. ಐದು ಸೆಮಿಕಂಡಕ್ಟರ್ ಘಟಕಗಳ ನಿರ್ಮಾಣವು ಪ್ರಗತಿಯಲ್ಲಿದೆ, ಒಂದು ಘಟಕದ ಪೈಲಟ್ ಲೈನ್ ಈಗಾಗಲೇ ಪೂರ್ಣಗೊಂಡಿದೆ. ಮುಂಬರುವ ತಿಂಗಳುಗಳಲ್ಲಿ ಇನ್ನೂ ಎರಡು ಉತ್ಪಾದನೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. 5 ಹೆಚ್ಚುವರಿ ಘಟಕಗಳ ವಿನ್ಯಾಸ ಕೂಡ ನಡೆಯುತ್ತಿದೆ” ಎಂದು ಅಶ್ವಿನಿ ವೈಷ್ಣವ್ ಹೇಳಿದರು.

ಇದನ್ನೂ ಓದಿ: ಚೀನಾ, ರಷ್ಯಾದ ಅಧ್ಯಕ್ಷರಿಗೆ ಹಸ್ತಲಾಘವ, ಅಪ್ಪುಗೆ, ತಮಾಷೆ; ಟ್ರಂಪ್ ನಿದ್ರೆಗೆಡಿಸಿದ ಮೋದಿಯ ವಿಡಿಯೋ ಇಲ್ಲಿದೆ

ವಿಕ್ರಮ್ ಪ್ರೊಸೆಸರ್ ಭಾರತದ ಸೆಮಿಕಂಡಕ್ಟರ್ ಮಹತ್ವಾಕಾಂಕ್ಷೆಗಳ ಆರಂಭವಾಗಿದೆ. ಬಾಸ್ಟನ್ ರಿಸರ್ಚ್ ವರದಿಯ ಪ್ರಕಾರ, ವಿಶ್ವದ ಚಿಪ್ ವಿನ್ಯಾಸ ಎಂಜಿನಿಯರ್‌ಗಳಲ್ಲಿ ಸುಮಾರು ಶೇ. 20ರಷ್ಟು ಜನರು ಭಾರತದಲ್ಲಿ ನೆಲೆಸಿದ್ದಾರೆ. ಇದು ದೇಶವನ್ನು ಜಾಗತಿಕ ಸೆಮಿಕಂಡಕ್ಟರ್ ವಿನ್ಯಾಸಕ್ಕೆ ನಿರ್ಣಾಯಕ ಕೇಂದ್ರವನ್ನಾಗಿ ಮಾಡಿದೆ. ಕ್ವಾಲ್ಕಾಮ್, ಇಂಟೆಲ್, ಎನ್ವಿಡಿಯಾ, ಬ್ರಾಡ್‌ಕಾಮ್ ಮತ್ತು ಮೀಡಿಯಾ ಟೆಕ್ ಸೇರಿದಂತೆ ಜಾಗತಿಕ ತಂತ್ರಜ್ಞಾನ ದೈತ್ಯರು ಬೆಂಗಳೂರು, ಹೈದರಾಬಾದ್ ಮತ್ತು ನೋಯ್ಡಾದಲ್ಲಿ ದೊಡ್ಡ ಸಂಶೋಧನೆ, ಅಭಿವೃದ್ಧಿ ಮತ್ತು ವಿನ್ಯಾಸ ಕೇಂದ್ರಗಳನ್ನು ಸ್ಥಾಪಿಸಿದ್ದು, ಜಾಗತಿಕ ಚಿಪ್ ಪರಿಸರ ವ್ಯವಸ್ಥೆಯಲ್ಲಿ ಭಾರತದ ಪಾತ್ರವನ್ನು ಬಲಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 2:06 pm, Tue, 2 September 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು