Saligrama Shile: ಅಯೋಧ್ಯೆಗೆ ಬಂದಿಳಿದ 2 ಪವಿತ್ರ ಸಾಲಿಗ್ರಾಮ ಶಿಲೆಗಳು; ನೇಪಾಳ ಬಿಟ್ಟರೆ ಬೇರೆಲ್ಲೂ ಸಿಗದ ಅಮೂಲ್ಯ ಶಿಲೆಗಳಿವು

Lord Ram's Idol: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದಲ್ಲಿ ಶ್ರೀರಾಮ ಮತ್ತು ಸೀತೆಯ ವಿಗ್ರಹಗಳಿಗಾಗಿ ನೇಪಾಳದಿಂದ ತರಿಸಲಾಗಿರುವ ಎರಡು ಸಾಲಿಗ್ರಾಮ ಶಿಲೆಗಳು ಇಂದು ಗುರುವಾರ ಅಯೋಧ್ಯೆ ತಲುಪಿವೆ. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಬಳಕೆಯಾಗುವ ಸಾಮಗ್ರಿಗಳ ಸಂಗ್ರಹಸ್ಥಳವಾದ ರಾಮ್ ಸೇವಕ್ ಪುರಂ ಎಂಬಲ್ಲಿ ಈ ಶಿಲೆಗಳನ್ನು ಇಡಲಾಗಿದೆ.

Saligrama Shile: ಅಯೋಧ್ಯೆಗೆ ಬಂದಿಳಿದ 2 ಪವಿತ್ರ ಸಾಲಿಗ್ರಾಮ ಶಿಲೆಗಳು; ನೇಪಾಳ ಬಿಟ್ಟರೆ ಬೇರೆಲ್ಲೂ ಸಿಗದ ಅಮೂಲ್ಯ ಶಿಲೆಗಳಿವು
ಸಾಲಿಗ್ರಾಮ ಶಿಲೆಗಳು
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Feb 02, 2023 | 12:49 PM

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದಲ್ಲಿ (Ayodhya Sri Rama Temple) ಶ್ರೀರಾಮ ಮತ್ತು ಸೀತೆಯ ವಿಗ್ರಹಗಳಿಗಾಗಿ ನೇಪಾಳದಿಂದ ತರಿಸಲಾಗಿರುವ ಎರಡು ಸಾಲಿಗ್ರಾಮ ಶಿಲೆಗಳು (Saligrama Stones) ಇಂದು ಗುರುವಾರ ಅಯೋಧ್ಯೆ ತಲುಪಿವೆ. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಬಳಕೆಯಾಗುವ ಸಾಮಗ್ರಿಗಳ ಸಂಗ್ರಹಸ್ಥಳವಾದ ರಾಮ್ ಸೇವಕ್ ಪುರಂ ಎಂಬಲ್ಲಿ ಈ ಶಿಲೆಗಳನ್ನು ಇಡಲಾಗಿದೆ. ಇಂದು ಬೆಳಗ್ಗೆ 10:30ಕ್ಕೆ ಈ ಪವಿತ್ರ ಶಿಲೆಗಳಿಗೆ ಪೂಜೆ ಮಾಡಲಾಗಿದೆ. ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಎಎನ್​ಐ ಸುದ್ದಿ ಸಂಸ್ಥೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ..

ಈಗ ತರಲಾಗಿರುವ ಎರಡು ಸಾಲಿಗ್ರಾಮ ಶಿಲೆಗಳು ನೇಪಾಳದ ಕಾಳಿ ಗಂಡಕಿ ನದಿಯ ಜಲಪಾತವೊಂದರಿಂದ ಆಯ್ದುಕೊಂಡು ಬರಲಾಗಿದೆ.

ಕೆಲವು ದೇವಸ್ಥಾನಗಳಲ್ಲಿ ವಿಷ್ಣು ದೇವರ ಅಮೂರ್ತ ರೂಪದ ವಿಗ್ರಹಗಳನ್ನು (Non-anthropomorphic Image) ಸಾಲಿಗ್ರಾಮ ಶಿಲೆಗಳಿಂದಲೇ ಕಡೆಯಲಾಗಿರುತ್ತದೆ. ಈಗ ತಂದಿರುವ ಎರಡು ಕಲ್ಲುಗಳಲ್ಲಿ ಒಂದು ಕಲ್ಲು 26 ಟನ್​ನದ್ದಾದರೆ ಮತ್ತೊಂದು ಕಲ್ಲು 14 ಟನ್ ತೂಗುತ್ತದೆ. ರಾಮನ ಮೂರ್ತಿ 5.5 ಅಡಿ ಇರಲಿದ್ದು, ಇಂದಿನಿಂದಲೇ ವಿಗ್ರಹ ಕೆತ್ತನೆ ನಡೆಯಲಿದೆ.

ಇದನ್ನೂ ಓದಿ: Divorce: ಮುಸ್ಲಿಂ ಮಹಿಳೆಯರು ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯವನ್ನು ಮಾತ್ರ ಸಂಪರ್ಕಿಸಬೇಕು: ಮದ್ರಾಸ್ ಹೈಕೋರ್ಟ್

ಸಾಲಿಗ್ರಾಮ ಶಿಲೆಗಳ ವಿಶೇಷತೆ:

ವೈಜ್ಞಾನಿಕವಾಗಿ ಈ ಸಾಲಿಗ್ರಾಮ ಕಲ್ಲುಗಳು ಒಂದು ರೀತಿಯಲ್ಲಿ ಪಳೆಯುಳಿಕೆ ಶಿಲೆಗಳಾಗಿವೆ (Fossilised Stone). ಇದು ನೇಪಾಳದ ಕಾಳಿ ಗಂಡಕಿ ನದಿ ತೀರಗಳಲ್ಲಿ ಮಾತ್ರ ಸಿಗುವ ಅಪರೂಪದ ಶಿಲೆಗಳು. 6ರಿಂದ 40 ಕೋಟಿ ವರ್ಷದಷ್ಟು ಪುರಾತನವಾದ (Devonian-Cretaceous period) ಪಳೆಯುಳಿಕೆ ಶಿಲೆಗಳಿವು.

ಹಿಂದೂ ಧರ್ಮದಲ್ಲಿ ಇವುಗಳಿಗೆ ಪವಿತ್ರ ಸ್ಥಾನ ಇದೆ. ಇದನ್ನು ದೈವ ಶಿಲೆ ಎಂದೂ ಪರಿಗಣಿಸಲಾಗುತ್ತದೆ. ಈ ಕಲ್ಲು ವಿಷ್ಣುವಿನ ಗುರುತಾದ ಶಂಖವನ್ನು ಹೋಲುತ್ತದೆ. ಐತಿಹ್ಯದ ಪ್ರಕಾರ, ವ್ಯಾಸದೇವರಿಂದ ಈ ಪವಿತ್ರ ಕಲ್ಲನ್ನು ಮಧ್ವಾಚಾರ್ಯರು ಪಡೆದಿದ್ದರಂತೆ. ರಾಮನು ವಿಷ್ಣುವಿನ ಅವತಾರವೆಂದು ನಂಬಲಾಗಿರುವುದರಿಂದ ನೇಪಾಳದಿಂದ ಸಾಲಿಗ್ರಾಮ ಶಿಲೆಗಳನ್ನು ಅಯೋಧ್ಯೆಯ ರಾಮನ ವಿಗ್ರಹ ಕೆತ್ತನೆಗೆಂದು ತರಲಾಗಿದೆ.

ಉಡುಪಿಯ ಕೃಷ್ಣ ಮಠದಲ್ಲಿರುವ ಕೃಷ್ಣನ ವಿಗ್ರಹ, ವೃಂದಾವನದ ರಾಧಾ ರಮಣ ದೇವಸ್ಥಾನದ ಮೂರ್ತಿ, ತಿರುವನಂತಪುರಂ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ವಿಷ್ಣು ವಿಗ್ರಹ ಮತ್ತು ಗಡವಾಲ್​ನ ಬದ್ರೀನಾಥ ಮಂದಿರದ ವಿಷ್ಣು ವಿಗ್ರಹವನ್ನು ಸಾಲಿಗ್ರಾಮ ಶಿಲೆಗಳಿಂದ ನಿರ್ಮಿಸಲಾಗಿದೆ.

ಇದನ್ನೂ ಓದಿ: ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ಹುತಾತ್ಮರಾಗಿಲ್ಲ ಅದೊಂದು ಅಪಘಾತವಷ್ಟೇ ಎಂದ ಬಿಜೆಪಿ ಸಚಿವ

ನೇಪಾಳದಿಂದ ಅಯೋಧ್ಯೆಗೆ ಶೀಲ ಯಾತ್ರೆ ಮೂಲಕ ತರಲಾಗಿರುವ ಸಾಲಿಗ್ರಾಮ ಶಿಲೆಗಳನ್ನು ಮಾರ್ಗಮಧ್ಯೆ ಹಲವು ಸ್ಥಳಗಳಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ಪ್ರದರ್ಶನಕ್ಕಿಡಲಾಗಿತ್ತು. ಹಲವು ಕಡೆ ಈ ಶಿಲೆಗೆ ಪೂಜೆಗಳು ನಡೆದಿವೆ. ನೇಪಾಳದಿಂದ ಅಲ್ಲಿನ ನಿಯೋಗವೊಂದರ ಐವರು ಸದಸ್ಯರು ಹಾಗೂ ವಿಶ್ವ ಹಿಂದೂಪರಿಷತ್​ನ ನೂರು ಮಂದಿ ಪ್ರತಿನಿಧಿಗಳು ಶೀಲಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಬಾಬ್ರಿ ಮಸೀದಿ ಇದ್ದ ಜಾಗವನ್ನು ಶ್ರೀರಾಮನ ಜನ್ಮಸ್ಥಳವೆಂದು ನಂಬಲಾಗಿದೆ. ನ್ಯಾಯಾಲಯ ಕೂಡ ಈ ಜಾಗದಲ್ಲಿ ಮಂದಿರ ನಿರ್ಮಾಣಕ್ಕೆ ಅನುಮತಿ ಕೊಟ್ಟಿದೆ. ಈಗಾಗಲೇ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಮುಂದಿನ ವರ್ಷದ ಜನವರಿಯೊಳಗೆ ಪೂರ್ಣ ಸಿದ್ಧಗೊಂಡು ಉದ್ಘಾಟನೆಯಾಗುವ ನಿರೀಕ್ಷೆ ಇದೆ. ಮುಂಬರುವ ಉತ್ತರ ಪ್ರದೇಶ ಮತ್ತು ಲೋಕಸಭಾ ಚುನಾವಣೆಗಳಿಗೆ ಅಯೋಧ್ಯೆ ರಾಮ ಮಂದಿರದ ವಿಚಾರವು ಬಿಜೆಪಿಯ ಪ್ರಮುಖ ಅಸ್ತ್ರಗಳಲ್ಲಿ ಒಂದಾಗಿರಲಿದೆ.

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ