ಮಹಿಳೆಯರ ಬಗ್ಗೆ ಓವೈಸಿ ಅವರ ಮನಸ್ಥಿತಿ ಬಿಜೆಪಿಗಿಂತ ಭಿನ್ನವಾಗಿಲ್ಲ: ಎಐಎಂಐಎಂ ನಾಯಕನ ಹೇಳಿಕೆಗೆ ತಿರುಗೇಟು ನೀಡಿದ ಶಿವಸೇನಾ

| Updated By: ರಶ್ಮಿ ಕಲ್ಲಕಟ್ಟ

Updated on: May 29, 2022 | 3:01 PM

ಮುಸ್ಲಿಂ ಮಹಿಳೆಯರನ್ನು ವರ್ಚುವಲ್ ಆಗಿ ಹರಾಜು ಮಾಡುವ ಬುಲ್ಲಿ ಬಾಯಿ ಮತ್ತು ಸುಲ್ಲಿ ಡೀಲ್ಸ್ ಆ್ಯಪ್ ಪ್ರಕರಣಗಳನ್ನು ಉಲ್ಲೇಖಿಸಿದ ಚತುರ್ವೇದಿ,  ಆ್ಯಪ್‌ಗಳು ಮಹಿಳೆಯರನ್ನು ಗುರಿಯಾಗಿಸಿಕೊಂಡಾಗ ಓವೈಸಿ ಕಾಣೆಯಾಗಿದ್ದರು ಎಂಬುದನ್ನು ನಾನು ಮತ್ತೆ ಮತ್ತೆ ಹೇಳುತ್ತಿದ್ದೇನೆ.

ಮಹಿಳೆಯರ ಬಗ್ಗೆ ಓವೈಸಿ ಅವರ ಮನಸ್ಥಿತಿ ಬಿಜೆಪಿಗಿಂತ ಭಿನ್ನವಾಗಿಲ್ಲ: ಎಐಎಂಐಎಂ ನಾಯಕನ ಹೇಳಿಕೆಗೆ ತಿರುಗೇಟು ನೀಡಿದ  ಶಿವಸೇನಾ
ಪ್ರಿಯಾಂಕಾ ಚತುರ್ವೇದಿ- ಅಸಾದುದ್ದೀನ್ ಓವೈಸಿ
Follow us on

ಮಹಾರಾಷ್ಟ್ರದ ಚುನಾವಣೋತ್ತರ ಮೈತ್ರಿಯನ್ನು ಗುರಿಯಾಗಿಸಿಕೊಂಡು ಆಲ್ ಇಂಡಿಯಾ ಮಜಿಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಅವರ “ವಧು” ಹೇಳಿಕೆಗೆ  ಶಿವಸೇನಾ (Shiv Sena) ಸಂಸದೆ ಪ್ರಿಯಾಂಕಾ ಚತುರ್ವೇದಿ (Priyanka Chaturvedi) ತಿರುಗೇಟು ನೀಡಿದ್ದಾರೆ. ಮಹಿಳೆಯರ ಕುರಿತಾದ ಓವೈಸಿ ಅವರ ಮನಸ್ಥಿತಿಯು ಬಿಜೆಪಿಗಿಂತ ಭಿನ್ನವಾಗಿಲ್ಲ ಎಂದು ಹೇಳಿದ ಚತುರ್ವೇದಿ, ಮಹಿಳೆಯರನ್ನು ವಧುವಿನಂತೆ ಮಾತ್ರ ನೋಡುವ ಗೀಳು ಇದು ಎಂದಿದ್ದಾರೆ. ವಧುವಿನ ಬಗ್ಗೆ ಓವೈಸಿ ಗೀಳು ಮುಂದುವರಿದಿದೆ. ಮೊದಲು ಮೊಘಲರ ಹೆಂಡತಿ ಬಗ್ಗೆ ಇತ್ತು ಈಗ ಭಿವಾಂಡಿ ಬಗ್ಗೆ ಎಂದು ರಾಜ್ಯ ಸಭಾ ಸದಸ್ಯೆ ಚತುರ್ವೇದಿ ಟ್ವೀಟ್ ಮಾಡಿದ್ದಾರೆ. ಮುಸ್ಲಿಂ ಮಹಿಳೆಯರನ್ನು ವರ್ಚುವಲ್ ಆಗಿ ಹರಾಜು ಮಾಡುವ ಬುಲ್ಲಿ ಬಾಯಿ ಮತ್ತು ಸುಲ್ಲಿ ಡೀಲ್ಸ್ ಆ್ಯಪ್ ಪ್ರಕರಣಗಳನ್ನು ಉಲ್ಲೇಖಿಸಿದ ಚತುರ್ವೇದಿ,  ಆ್ಯಪ್‌ಗಳು ಮಹಿಳೆಯರನ್ನು ಗುರಿಯಾಗಿಸಿಕೊಂಡಾಗ ಓವೈಸಿ ಕಾಣೆಯಾಗಿದ್ದರು ಎಂಬುದನ್ನು ನಾನು ಮತ್ತೆ ಮತ್ತೆ ಹೇಳುತ್ತಿದ್ದೇನೆ. ಈಗ ಅವರು ಮಹಿಳೆಯನ್ನು ವಧುವಿನಂತೆ ಕಾಣುವ ಗೀಳನ್ನು ಮುಂದುವರಿಸಿದ್ದಾರೆ. ಮಹಿಳೆಯರ ಬಗ್ಗೆ ಅವರ ಮನಸ್ಥಿತಿ ಬಿಜೆಪಿ ಮನಸ್ಥಿತಿಗಿಂತ ಭಿನ್ನವಾಗಿಲ್ಲ ಎಂದಿದ್ದಾರೆ .

ಮಹಾರಾಷ್ಟ್ರದ ಭಿವಾಂಡಿಯಲ್ಲಿ ರ್ಯಾಲಿಯನ್ನುದ್ದೇಶಿ ಮಾತನಾಡಿದ ಓವೈಸಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ನೇತಾರರು 2019ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನಾ ಅಧಿಕಾರಕ್ಕೆ ಬರದಂತೆ ಎಐಎಂಐಎಂ ಪಕ್ಷಕ್ಕೆ ಮತ ನೀಡುವಂತೆ ಮನವಿ ಮಾಡಿದ್ದರು. ಆದರೆ ಚುನಾವಣೆ ನಂತರ ಎನ್​​ಸಿಪಿ ಉದ್ಧವ್ ಠಾಕ್ರೆ ಪಕ್ಷದ ಜತೆ ಮದುವೆ ಮಾಡಿಕೊಂಡಿತು.ಈ ಮೂರು ಪಕ್ಷಗಳಲ್ಲಿ ಯಾರು ವಧು ಎಂದು ನನಗೆ ಗೊತ್ತಿಲ್ಲ ಎಂದಿದ್ದಾರೆ ಓವೈಸಿ .

ಇದನ್ನೂ ಓದಿ
ಹುಲಿ, ನರಿ ನ್ಯಾಯದ ಕಥೆ ಹೇಳಿ ಸಿದ್ದರಾಮಯ್ಯಗೆ ತಿರುಗೇಟು ನೀಡಿದ RSS ಮುಖಂಡ
ಮದರಸಾಗಳು ಆರ್​ಎಸ್​ಎಸ್​ ಶಾಖೆಗಳಂತೆ ಅಲ್ಲ: ಅಸ್ಸಾಂ ಸಿಎಂಗೆ ತಿರುಗೇಟು ಕೊಟ್ಟ ಅಸಾದುದ್ದೀನ್ ಓವೈಸಿ
2024ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಮಂದಿರ ಮಸೀದಿ ವಿವಾದ ಹುಟ್ಟುಹಾಕಿದೆ: ಸಂಜಯ್ ರಾವುತ್
ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕಿದ್ದು ಶಿವಲಿಂಗ ಅಲ್ಲ,ಕಾರಂಜಿ; ತಾಜ್ ಮಹಲ್​​ನ ಕಾರಂಜಿಗಳನ್ನು ಮುಚ್ಚಿ: ಅಸಾದುದ್ದೀನ್ ಓವೈಸಿ


“ಬಿಜೆಪಿ, ಎನ್‌ಸಿಪಿ, ಕಾಂಗ್ರೆಸ್, ಎಸ್‌ಪಿ ಜಾತ್ಯತೀತ ಪಕ್ಷಗಳು, ಅವರು ಜೈಲಿಗೆ ಹೋಗಬಾರದು ಎಂದು ಅವರು ಭಾವಿಸುತ್ತಾರೆ. ಆದರೆ ಯಾರಾದರೂ ಮುಸ್ಲಿಂ ಪಕ್ಷದವರು ಹೋದರೆ ಅವರಿಗೆ ಏನೂ ಅನಿಸಲ್ಲ. ಯಾವುದೇ ಕ್ರಮ ತೆಗೆದುಕೊಳ್ಳದಂತೆ ಒತ್ತಾಯಿಸಲು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು. ನವಾಬ್ ಮಲಿಕ್‌ಗಾಗಿ ಪವಾರ್ ಅದೇ ಕೆಲಸವನ್ನು ಏಕೆ ಮಾಡಲಿಲ್ಲ ಎಂದು ನಾನು ಎನ್‌ಸಿಪಿ ಕಾರ್ಯಕರ್ತರನ್ನು ಕೇಳಲು ಬಯಸುತ್ತೇನೆ ಎಂದಿದ್ದಾರೆ ಓವೈಸಿ.

“ನವಾಬ್ ಮಲಿಕ್ ಸಂಜಯ್ ರಾವತ್ ಅವರಿಗಿಂತ ಕಡಿಮೆಯೇ? ನೀವು ನವಾಬ್ ಮಲಿಕ್ ಪರವಾಗಿ ಏಕೆ ಮಾತನಾಡಲಿಲ್ಲ ನಾನು ಶರದ್ ಪವಾರ್ ಅವರನ್ನು ಕೇಳಲು ಬಯಸುತ್ತೇನೆ. ಅವರು ಮುಸ್ಲಿಂ ಎಂಬ ಕಾರಣಕ್ಕಾಗಿಯೇ? ಸಂಜಯ್ ಮತ್ತು ನವಾಬ್ ಸಮಾನರಲ್ಲವೇ ಎಂದು ಓವೈಸಿ ಪ್ರಶ್ನಿಸಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 3:01 pm, Sun, 29 May 22