AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ಭಾರಿ ಸ್ಫೋಟ ಸಂಭವಿಸಿ ಕುಸಿದ ಮನೆ: 6 ಜನ ಸಾವು

ಬಿಹಾರದ ಸರನ್ ಜಿಲ್ಲೆಯ ಛಾಪ್ರಾ ಪಟ್ಟಣದಲ್ಲಿ ಮನೆಯೊಂದರಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು ಸ್ಫೋಟದ ಪರಿಣಾಮ ಮನೆ ಕುಸಿದು 6 ಜನ ಮೃತಪಟ್ಟಿದ್ದಾರೆ.

ಮನೆಯಲ್ಲಿ ಭಾರಿ ಸ್ಫೋಟ ಸಂಭವಿಸಿ ಕುಸಿದ ಮನೆ: 6 ಜನ ಸಾವು
ಭಾರಿ ಸ್ಫೋಟಕ್ಕೆ ಕುಸಿದ ಮನೆಯ ಘಟನಾ ಸ್ಥಳ
TV9 Web
| Updated By: ಆಯೇಷಾ ಬಾನು|

Updated on:Jul 24, 2022 | 5:16 PM

Share

ಮನೆಯೊಂದರಲ್ಲಿ ಭಾರಿ ಸ್ಫೋಟ(Blast) ಸಂಭವಿಸಿದ್ದು ಸ್ಫೋಟದ ಪರಿಣಾಮ ಮನೆ ಕುಸಿದು(House Collapse) 6 ಜನ ಮೃತ(Death) ಪಟ್ಟ ಘಟನೆ ಬಿಹಾರದ ಸರನ್ ಜಿಲ್ಲೆಯ ಛಾಪ್ರಾ(Chhapra) ಪಟ್ಟಣದಲ್ಲಿ ನಡೆದಿದೆ. ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸ್ಫೋಟದ ಹಿಂದಿನ ಕಾರಣವನ್ನು ನಾವು ತನಿಖೆ ಮಾಡುತ್ತಿದ್ದೇವೆ. ವಿಧಿವಿಜ್ಞಾನ ತಂಡ ಮತ್ತು ಬಾಂಬ್ ನಿಷ್ಕ್ರಿಯ ದಳವನ್ನೂ ಕರೆಯಲಾಗಿದೆ ಎಂದು ಸರನ್ ಎಸ್ಪಿ ಸಂತೋಷ್ ಕುಮಾರ್ ತಿಳಿಸಿದ್ದಾರೆ.

ಖೈರಾ ಪೊಲೀಸ್ ಠಾಣೆ ವ್ಯಾಪ್ತಿಯ ಖೋಡೈಬಾಗ್ ಗ್ರಾಮದಲ್ಲಿ ರಿಯಾಜ್ ಮಿಯಾನ್ ಎಂಬ ವ್ಯಕ್ತಿಯ ಮನೆಯಲ್ಲಿ ಸ್ಫೋಟ ಸಂಭವಿಸಿದೆ. ರಿಯಾಜ್ ಮನೆಯಲ್ಲಿ ಹೆಚ್ಚಿನ ಪ್ರಮಾಣದ ಪಟಾಕಿಗಳನ್ನು ಸಂಗ್ರಹಿಸಿಡಲಾಗಿತ್ತು. ರಿಯಾಜ್ ಮಿಯಾನ್ ಪಟಾಕಿ ವ್ಯಾಪಾರಿಯಾಗಿದ್ದು, ಮದುವೆ ಸಂದರ್ಭದಲ್ಲಿ ಅಕ್ರಮವಾಗಿ ಪಟಾಕಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಸ್ಫೋಟದ ತೀವ್ರತೆ ಹೆಚ್ಚಿದ್ದರಿಂದ ರಿಯಾಜ್ ಮನೆ ಸಂಪೂರ್ಣವಾಗಿ ಭಸ್ಮವಾಗಿದೆ. 6ಕ್ಕೂ ಹೆಚ್ಚು ಅಕ್ಕಪಕ್ಕದ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿವೆ. ಇನ್ನು ಘಟನೆಯಲ್ಲಿ ಗಾಯಗೊಂಡವರನ್ನು ಛಾಪ್ರಾದ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಕೆಲ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

Published On - 4:57 pm, Sun, 24 July 22