ಭಾರತದ ಮೊದಲ ಸೂರ್ಯ ಮಿಷನ್ ಅಡಿಯಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲಾದ ಆದಿತ್ಯ L-1(Aditya L1) ಬಾಹ್ಯಾಕಾಶ ನೌಕೆಯು ನಾಲ್ಕನೇ ಕಕ್ಷೆಯ ಬದಲಾವಣೆಯನ್ನು ಪೂರ್ಣಗೊಳಿಸಿದೆ. ಸೆಪ್ಟೆಂಬರ್ 15ರಂದು ಬೆಳಗಿನ ಜಾವ ಭಾರತೀಯ ಬಾಹ್ಯಾಕಾಶ ಸಂಸ್ಥೆ ಈ ಕುರಿತು ಟ್ವೀಟ್ ಮಾಡಿದೆ. ಸೂರ್ಯನನ್ನು ಅಧ್ಯಯನ ಮಾಡಲು ಬಾಹ್ಯಾಕಾಶಕ್ಕೆ ಕಳುಹಿಸಲಾದ ಆದಿತ್ಯ L-1, ಭಾರತದ ಮೊದಲ ಬಾಹ್ಯಾಕಾಶ ವೀಕ್ಷಣಾಲಯವಾಗಿದೆ. ಸೂರ್ಯ ಮತ್ತು ಭೂಮಿಯ ನಡುವೆ ಐದು ಲಗ್ರೇಂಜ್ ಪಾಯಿಂಟ್‌ಗಳಿವೆ.
ಯಾವುದೇ ಗ್ರಹಣ ಅಥವಾ ಅಡೆತಡೆಗಳಿಲ್ಲದೆ ಸೂರ್ಯನನ್ನು ನೋಡಬಹುದಾದ ಸ್ಥಳವೇ ಲಗ್ರೇಂಜ್ ಪಾಯಿಂಟ್. ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯನ್ನು ಲಗ್ರೇಂಜ್ ಪಾಯಿಂಟ್ 1ಕ್ಕೆ ಕಳುಹಿಸಲಾಗುತ್ತಿದೆ. ಭೂಮಿಯಿಂದ ಲಾಗ್ರೇಂಜ್ ಪಾಯಿಂಟ್ 1 ರ ಅಂತರವು 15 ಲಕ್ಷ ಕಿಲೋಮೀಟರ್‌ಗಳು, ಆದರೆ ಸೂರ್ಯನಿಂದ ಭೂಮಿಯ ದೂರವು 15 ಕೋಟಿ ಕಿಲೋಮೀಟರ್‌ಗಳು.
ಸೆಪ್ಟೆಂಬರ್ 2 ರಂದು ಆದಿತ್ಯ ಎಲ್1 ಮಿಷನ್ ಉಡಾವಣೆಯಾಗಿದ್ದು, ಸೆಪ್ಟೆಂಬರ್ 3ರಂದು ಮೊದಲ ಕಕ್ಷೆ ಬದಲಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು.
ಮತ್ತಷ್ಟು ಓದಿ: ಸನ್ ಮಿಷನ್: ಇಂದು ಮೊದಲ ಕಕ್ಷೆ ಬದಲಿಸಲಿದೆ ಆದಿತ್ಯ ಎಲ್1
ಸೆಪ್ಟೆಂಬರ್ 5ರಂದು ಎರಡನೇ ಕಕ್ಷೆಯ ಬದಲಾವಣೆಯನ್ನು ಮಾಡಿತ್ತು, ಒಟ್ಟು ಐದು ಬಾರಿ ಕಕ್ಷೆ ಬದಲಾವಣೆ ಮಾಡಿದ ಬಳಿಕ ಅಧ್ಯಯನ ಉದ್ದೇಶಿಸಿರುವ ಲ್ಯಾಂಗ್ರೇಜ್ ಪಾಯಿಂಟ್ನತ್ತ ಆದಿತ್ಯ ಎಲ್1 ಮಿಷನ್ ಸಾಗಲಿದೆ. ಲ್ಯಾಂಗ್ರೇಜ್ ಪಾಯಿಂಟ್ ತಲುಪಲು 125 ದಿನಗಳು ಹಿಡಿಯುತ್ತದೆ.
ಇಸ್ರೋದ ಬಾಹ್ಯಾಕಾಶ ನೌಕೆ 16 ದಿನಗಳ ಕಾಲ ಭೂಮಿಯ ಸುತ್ತ ಸುತ್ತಲಿದೆ. ಈ ಕುಶಲತೆಯ ಸಮಯದಲ್ಲಿ, ಮುಂದಿನ ಪ್ರಯಾಣಕ್ಕೆ ಅಗತ್ಯವಾದ ವೇಗವನ್ನು ಸಾಧಿಸಲಾಗುತ್ತದೆ. ಐದನೇ ಭೂಮಿಯ ಬೌಂಡ್ ಮ್ಯಾನ್ಯೂವರ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಆದಿತ್ಯ L-1 ತನ್ನ 110-ದಿನಗಳ ಪ್ರಯಾಣಕ್ಕಾಗಿ ಲಾಗ್ರೇಂಜ್ ಪಾಯಿಂಟ್‌ಗೆ ಹೊರಡಲಿದೆ.
Aditya-L1 Mission:
The fourth Earth-bound maneuvre (EBN#4) is performed successfully.ISRO’s ground stations at Mauritius, Bengaluru, SDSC-SHAR and Port Blair tracked the satellite during this operation, while a transportable terminal currently stationed in the Fiji islands for… pic.twitter.com/cPfsF5GIk5
— ISRO (@isro) September 14, 2023
ಬಾಹ್ಯಾಕಾಶ ನೌಕೆಯ ಮೂಲಕ ಸೂರ್ಯನ ಚಲನವಲನಗಳ ಮೇಲೆ ನಿಗಾ ಇಡಲು ಇದು ನೆರವಾಗಲಿದೆ ಎಂದು ಇಸ್ರೋ ಹೇಳಿದೆ. ಆದಿತ್ಯ L-1 ನೊಂದಿಗೆ ಹಲವು ರೀತಿಯ ಸಾಧನಗಳನ್ನು ಕಳುಹಿಸಲಾಗಿದೆ, ಅದರ ಮೂಲಕ ಸೂರ್ಯನನ್ನು ಅಧ್ಯಯನ ಮಾಡಲಾಗುತ್ತದೆ. ಸೌರ ಜ್ವಾಲೆಗಳು, ಸೂರ್ಯನಿಂದ ಹೊರಹೊಮ್ಮುವ ಕರೋನಲ್ ಮಾಸ್ ಎಜೆಕ್ಷನ್‌ಗಳಂತಹ ವಿಷಯಗಳ ಮೇಲೆ ನಿಗಾ ಇಡುವುದು ಬಹಳ ಮುಖ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ