ಅಜ್ಜಿಗೆ ಹೊಡಿಬೇಡಮ್ಮಾ; ವೃದ್ಧೆಯನ್ನು ಥಳಿಸುತ್ತಿದ್ದ ಅಮ್ಮನಿಗೆ ಅಂಗಲಾಚಿದ ಮಗ
ಪಂಜಾಬ್ ಮಹಿಳೆಯೊಬ್ಬರು ಮನೆಯಲ್ಲಿ ತನ್ನ ವೃದ್ಧ ಅತ್ತೆಯನ್ನು ಹೊಡೆದಿದ್ದಾರೆ. ಆಗ ಆಕೆಯ ಮಗ ಅಜ್ಜಿಗೆ ಹೊಡೆಯಬೇಡಮ್ಮ ಎಂದು ಅಮ್ಮನನ್ನು ಬೇಡಿಕೊಂಡಿದ್ದಾನೆ. ಆದರೂ ಆ ಮಹಿಳೆ ಸುಮ್ಮನಾಗಿಲ್ಲ. ಗಂಡ ತೀರಿಹೋದ ನಂತರ ಆ ಮಹಿಳೆ ಅತ್ತೆಯನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಳು. ಆದರೆ, ಮೊಮ್ಮಗನಿಗೆ ಅಜ್ಜಿಯೆಂದರೆ ಇಷ್ಟವಿತ್ತು. ಆತ ಅಮ್ಮ ಅಜ್ಜಿಯನ್ನು ಥಳಿಸುತ್ತಿರುವುದನ್ನು ಸಹಿಸಿಕೊಳ್ಳುತ್ತಿರಲಿಲ್ಲ.

ಪಂಜಾಬ್, ಅಕ್ಟೋಬರ್ 2: ಪಂಜಾಬಿನಲ್ಲಿ ಗಂಡ ತೀರಿಹೋದ ನಂತರ ಅತ್ತೆ ಹಾಗೂ ತನ್ನ ಮಗನ ಜೊತೆ ವಾಸಿಸುತ್ತಿದ್ದ ಮಹಿಳೆಯೊಬ್ಬಳು ತನ್ನ ಅತ್ತೆಗೆ ಹಿಗ್ಗಾಮುಗ್ಗಾ ಥಳಿಸಿ ಹಿಂಸೆ ನೀಡುತ್ತಿದ್ದಳು. ಈ ಬಗ್ಗೆ ಗುರ್ಬಜನ್ ಕೌರ್ ದೂರು ನೀಡಿದ್ದು, ಆ ದೂರಿನಲ್ಲಿ ತನ್ನ ಸೊಸೆ ತನ್ನ ಮೇಲೆ ಪದೇ ಪದೇ ದೌರ್ಜನ್ಯ ಎಸಗುತ್ತಿದ್ದಾಳೆ ಮತ್ತು ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಒತ್ತಡ ಹೇರುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ.
ಪಂಜಾಬ್‌ನ ಗುರುದಾಸ್ಪುರ್ ಜಿಲ್ಲೆಯಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ ಮಹಿಳೆ ತನ್ನ ವೃದ್ಧ ಅತ್ತೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿರುವುದನ್ನು ನೋಡಬಹುದು. ಆಕೆಯ ಮಗ ತನ್ನ ಅಜ್ಜಿಗೆ ಹೊಡೆಯುವುದನ್ನು ನಿಲ್ಲಿಸುವಂತೆ ಅಮ್ಮನ ಬಳಿ ಬೇಡಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಇದನ್ನೂ ಓದಿ: ದೆಹಲಿಯಲ್ಲಿ ದುರ್ಗಾ ಪೂಜೆ ವೇಳೆ ಧುನುಚಿ ನಾಚ್ ಪ್ರದರ್ಶಿಸಿದ ಬಿಜೆಪಿ ನಾಯಕಿ ಸ್ಮೃತಿ ಇರಾನಿ
“ಮುಮ್ಮಾ ನಾ ಕರೋ (ಅಮ್ಮ, ಹಾಗೆ ಹೊಡೆಯಬೇಡಿ)” ಎಂದು ಆ ಹುಡುಗ ತನ್ನ ಫೋನ್‌ನಲ್ಲಿ ಆ ಘಟನೆಯನ್ನು ರೆಕಾರ್ಡ್ ಮಾಡುತ್ತಾ ಪಂಜಾಬಿಯಲ್ಲಿ ಹೇಳುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋದಲ್ಲಿ ಹರ್ಜೀತ್ ಕೌರ್ ಎಂಬ ಮಹಿಳೆ ತನ್ನ ಅತ್ತೆ ಗುರ್ಬಜನ್ ಕೌರ್ ಅವರ ಕೂದಲನ್ನು ಹಿಡಿದು ಎಳೆದುಕೊಂಡು ಹೋಗಿ ಹೊಡೆಯುತ್ತಿರುವುದು ರೆಕಾರ್ಡ್ ಆಗಿದೆ.
ವಿಧವೆಯಾದ ಗುರ್ಬಜನ್ ಕೌರ್ ತನ್ನ ಪೊಲೀಸ್ ದೂರಿನಲ್ಲಿ, ತನ್ನ ಸೊಸೆ ತನ್ನ ಮೇಲೆ ಪದೇ ಪದೇ ದೌರ್ಜನ್ಯ ಎಸಗುತ್ತಿರುವುದಾಗಿ ಮತ್ತು ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಒತ್ತಡ ಹೇರುತ್ತಿರುವುದಾಗಿ ಆರೋಪಿಸಿದ್ದಾರೆ. ವಿಡಿಯೋ ರೆಕಾರ್ಡ್ ಮಾಡಿದ ಅವರ ಮೊಮ್ಮಗ ಚರತ್‌ವೀರ್ ಸಿಂಗ್, ಇದು ನಮ್ಮ ಮನೆಯಲ್ಲಿ ದಿನವೂ ನಡೆಯುವ ಘಟನೆ. ನನ್ನ ತಾಯಿ ಮದ್ಯ ಸೇವಿಸಿದ ನಂತರ ಆಗಾಗ ನನ್ನ ಅಜ್ಜಿಯನ್ನು ಹೊಡೆಯುತ್ತಿದ್ದರು ಎಂದು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




