SSLV-d2 Launch: 3 ಸೆಟಿಲೈಟ್ ಹೊತ್ತು ನಭಕ್ಕೆ ಹಾರಿದ ಎಸ್​ಎಸ್​ಎಲ್​ವಿ ರಾಕೆಟ್

Another Success To ISRO: ಇಸ್ರೋ ನಿರ್ಮಿತ ಎಸ್​ಎಸ್​ಎಲ್​ವಿ ಡಿ2 ರಾಕೆಟ್ ಉಡಾವಣೆ ಯಶಸ್ವಿಯಾಗಿ ನಡೆದಿದೆ. ಕಳೆದ ವರ್ಷ ಉಡಾವಣೆ ವಿಫಲವಾಗಿತ್ತು. ಅಂದಿನ ಕೆಲ ದೋಷಗಳನ್ನು ಸರಿಪಡಿಸಿ ಅಭಿವೃದ್ಧಿಪಡಿಸಲಾದ ಎರಡನೇ ರಾಕೆಟ್ ಯಾವುದೇ ಸಮಸ್ಯೆ ತೋರದೇ ನಭಕ್ಕೆ ಹಾರಿದೆ.

Follow us
ಸುಗ್ಗನಹಳ್ಳಿ ವಿಜಯಸಾರಥಿ
| Updated By: Digi Tech Desk

Updated on:Feb 10, 2023 | 10:26 AM

ಚೆನ್ನೈ: ಇಸ್ರೋದಿಂದ ವಿಭಿನ್ನ ಪ್ರಯೋಗಗಳನ್ನು ಒಳಗೊಂಡಿರುವ ಮತ್ತು ನೂತನವಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಎಸ್​ಎಸ್​ಎಲ್​ವಿ ಡಿ2 ರಾಕೆಟ್ (SSLV D2 Rocket) ಆಗಸಕ್ಕೆ ಯಶಸ್ವಿಯಾಗಿ ಚಿಮ್ಮಿದೆ. ಮೊದಲ ಪ್ರಯೋಗ ವಿಫಲವಾದ ಬಳಿಕ ಇನ್ನಷ್ಟು ಉತ್ಸಾಹದಿಂದ ಸಿದ್ಧವಾಗಿರುವ ಈ ರಾಕೆಟ್ ಅನ್ನು ಆಂಧ್ರದ ತಿರುಪತಿಯ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ಬೆಳಗ್ಗೆ 9:18ಕ್ಕೆ ಉಡಾವಣೆ ಮಾಡಲಾಯಿತು. ಉಡಾವಣೆ ಮಾಡುವಾಗ ಎನ್​ಸಿಸಿ ಹಾಡು ಹಾಡಿದ್ದು ವಿಶೇಷ. ಎನ್​ಸಿಸಿಯ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಈ ಹಾಡು ನುಡಿಸಲಾಗಿತ್ತು.

ಇಒಎಸ್-07, ಜೇನಸ್-1 ಮತ್ತು ಆಜಾದಿಸ್ಯಾಟ್-2 ಎಂಬ ಮೂರು ಉಪಗ್ರಹಗಳನ್ನು ಹೊತ್ತು ಎಸ್​ಎಸ್​ಎಲ್​ವಿ ನಭಕ್ಕೆ ಹಾರಿದೆ. ಭೂಮಿಯಿಂದ 450 ಕಿಮೀ ಎತ್ತರದ ಕಕ್ಷೆಯೊಂದರಲ್ಲಿ ಈ ಮೂರು ಉಪಗ್ರಹಗಳನ್ನು ಸೇರಿಸುವ ಕೆಲಸ ಈ ರಾಕೆಟ್​ನದ್ದು. ಇಒಎಸ್-07 ಸೆಟಿಲೈಟ್ ಅನ್ನು ಇಸ್ರೋ ಸಂಸ್ಥೆಯೇ ತಯಾರಿಸಿದೆ. ಜೇನಸ್-1 ಸೆಟಿಲೈಟ್ ಅಮೆರಿಕದ ಅಂಟಾರಿಸ್ ಸಂಸ್ಥೆ ನಿರ್ಮಿಸಿದರೆ, ಚೆನ್ನನ ಸ್ಪೇಸ್ ಕಿಡ್ಸ್ ಸಂಸ್ಥೆಯು ಆಜಾದಿಸ್ಯಾಟ್-2 ಸೆಟಿಲೈಟನ್ನು ನಿರ್ಮಿಸಿದೆ.

ಎಸ್​ಎಸ್​ಎಲ್​ವಿ ವಿಶೇಷತೆಗಳೇನು?

ಎಸ್​ಎಸ್​ಎಲ್​ವಿ ಎಂದರೆ ಸ್ಮಾಲ್ ಸೆಟಿಲೈಟ್ ಲಾಂಚ್ ವೆಹಿಕಲ್. ಸಣ್ಣ ಉಪಗ್ರಹ ಉಡಾವಣಾ ವಾಹನ. ಹೆಸರೇ ತಿಳಿಸುವಂತೆ ಇದು ಸಣ್ಣ ಉಪಗ್ರಹಗಳನ್ನು ಆಗಸಕ್ಕೆ ಕೊಂಡೊಯ್ಯುವ ರಾಕೆಟ್ ಆಗಿದೆ. ಇದರ ವಿಶೇಷತೆ ಇರುವುದು ಹಗುರ ಉಪಗ್ರಹಗಳನ್ನು ಹೊರುವುದು ಮಾತ್ರವಲ್ಲ, ಇದರ ತಯಾರಿಕೆ ವೆಚ್ಚ ಬಹಳ ಕಡಿಮೆ. ತಯಾರಿಕೆ ಸಮಯ ಕೂಡ ಬಹಳ ಕಡಿಮೆ. ಕೇವಲ ಐದಾರು ದಿನದಲ್ಲಿ ಇದನ್ನು ತಯಾರಿಸಬಹುದು ಎಂದು ಇಸ್ರೋ ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: Global Investors Summit 2023: ಇಂದು ಯುಪಿಯಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆ 2023ಯನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ

500 ಕಿಮೀಗಿಂತಲೂ ಕಡಿಮೆ ತೂಕದ ಉಪಗ್ರಹಗಳನ್ನು ಹೊತ್ತು ಸಾಗಲು ಇದು ಹೇಳಿಮಾಡಿಸಿದ ರಾಕೆಟ್ ಎಂದು ಬಗೆಯಲಾಗಿದೆ. ಕಳೆದ ವರ್ಷದ ಆಗಸ್ಟ್ 7ರಂದು ಎಸ್​ಎಸ್​ಎಲ್​ವಿ ಡಿ1 ರಾಕೆಟ್ ಉಡಾವಣೆಗೆ ಪ್ರಯತ್ನ ನಡೆದಿತ್ತಾದರೂ ಅದು ಆಗ ವಿಫಲಗೊಂಡಿತ್ತು. ಅಂದು ಆದ ತಪ್ಪುಗಳನ್ನು ಸರಿಪಡಿಸಿ ಈಗ ಹೊಸದಾಗಿ ಎಸ್​ಎಸ್​ಎಲ್​ವಿ ರಾಕೆಟ್ ಅಭಿವೃದ್ಧಿಪಡಿಸಲಾಗಿದೆ. ಇವತ್ತು ಲಾಂಚ್ ಆಗಿದ್ದು ಪ್ರಯೋಗಾರ್ಥವಾಗಿಯೇ. ಯಾವುದೇ ತಾಂತ್ರಿಕ ದೋಷ ಇಲ್ಲದೇ ಎಲ್ಲವೂ ಸುಸೂತ್ರವಾಗಿ ನಡೆದಿದ್ದರೆ ಮುಂದಿನ ದಿನಗಳಲ್ಲಿ ಎಸ್​ಎಸ್​ಎಲ್​ವಿಯನ್ನು ಕಮರ್ಷಿಯಲ್ ಆಗಿ ಬಳಕೆ ಮಾಡಿಕೊಳ್ಳಲು ಇಸ್ರೋ ಮುಂದಾಗಲಿದೆ.

ಎಸ್​ಎಸ್​ಎಲ್​ವಿ ರಾಕೆಟ್ 34 ಮೀಟರ್ ಉದ್ದ ಮತ್ತು 2 ಮೀಟರ್ ವ್ಯಾಸ ಇದೆ. 500 ಕಿಲೋಗಿಂತ ಕಡಿಮೆ ತೂಕದ ಸೆಟಿಲೈಟ್​ನಗಳನ್ನು ಭೂಮಿಯ ಕೆಳ ಕಕ್ಷೆಗಳಿಗೆ ಸೇರಿಸುವ ಸಾಮರ್ಥ್ಯ ಹೊಂದಿದೆ. ಇವತ್ತು ರಾಕೆಟ್ ಉಡಾವಣೆ ಮಾಡಿರುವ ಮೂರು ಸೆಟಿಲೈಟ್​ಗಳ ಪೈಕಿ ಇಸ್ರೋ ನಿರ್ಮಿತ ಇಒಎಸ್-07 ಸೆಟಿಲೈಟ್ 153 ಕಿಲೋ ತೂಕದ್ದಾಗಿದೆ. ಭೂಮಿಯ ಮೇಲ್ಮೈ ಮತ್ತು ವಾತಾವರಣದ ಮೇಲೆ ನಿಗಾ ಇಡುವುದು ಸೆರಿದಂತೆ ಹಲವು ಹೊಸ ತಂತ್ರಜ್ಞಾನ ಪ್ರಯೋಗಗಳನ್ನು ಈ ಸೆಟಿಲೈಟ್ ಮಾಡಲಿದೆ.

ಆಜಾದಿ ಸ್ಯಾಟ್ ವಿಶೇಷತೆ:

ದೇಶಾದ್ಯಂತ 75 ಶಾಲೆಗಳಿಂದ ಆಯ್ದ 750 ವಿದ್ಯಅರ್ಥಿನಿಯರು ಸೇರಿ ಈ ಆಜಾದಿಸ್ಯಾಟ್-2 ಉಪಗ್ರಹ ಅಭಿವೃದ್ಧಿಪಡಿಸಿದ್ದಾರೆ. ಇವರೆಲ್ಲರೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೇರಿದ ಹೆಣ್ಮಕ್ಕಳು.

Published On - 9:25 am, Fri, 10 February 23

ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಸ್ಪರ್ಧೆ ಖಚಿತ, ಗೆಲುವು ನಿಶ್ಚಿತ, ಠೇವಣಿ ಉಚಿತ ಎಂದ ಶಾಸಕ ಯತ್ನಾಳ್
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು
ಹಣದಾಸೆಗೆ ಟ್ರೋಫಿ ತ್ಯಾಗ? ಬಿಗ್ ಬಾಸ್ ಮನೆಗೆ ಬಂತು ಸೂಟ್ ಕೇಸ್ ತುಂಬ ದುಡ್ಡು
‘ರಜತ್ ರೀತಿಯ ಮಗನಿರಬಾರದು’; ಸುದೀಪ್​ ಎದುರು ಹೇಳಿದ ಹನುಮಂತ
‘ರಜತ್ ರೀತಿಯ ಮಗನಿರಬಾರದು’; ಸುದೀಪ್​ ಎದುರು ಹೇಳಿದ ಹನುಮಂತ
‘ಮಜಾ ಟಾಕೀಸ್​​’ನಲ್ಲಿ ಭರ್ಜರಿ ಡಬಲ್​ ಮೀನಿಂಗ್ ಡೈಲಾಗ್ಸ್; ದೊಡ್ಡದಾಗಿದೆ ನಗ
‘ಮಜಾ ಟಾಕೀಸ್​​’ನಲ್ಲಿ ಭರ್ಜರಿ ಡಬಲ್​ ಮೀನಿಂಗ್ ಡೈಲಾಗ್ಸ್; ದೊಡ್ಡದಾಗಿದೆ ನಗ
ಅಪ್ಪಾಜಿ ಕಿಡ್ನಾಪ್ ಆಗಿ ವಾಪಸ್ ಬಂದಾಗ ಆದಷ್ಟು ಸಂತೋಷ ಈಗ ಆಗಿದೆ: ರಾಘಣ್ಣ
ಅಪ್ಪಾಜಿ ಕಿಡ್ನಾಪ್ ಆಗಿ ವಾಪಸ್ ಬಂದಾಗ ಆದಷ್ಟು ಸಂತೋಷ ಈಗ ಆಗಿದೆ: ರಾಘಣ್ಣ
ಪತ್ನಿ ಗೀತಾ ನೀಡಿದ ಬೆಂಬಲದ ಬಗ್ಗೆ ಶಿವಣ್ಣ ಭಾವುಕ ಮಾತು
ಪತ್ನಿ ಗೀತಾ ನೀಡಿದ ಬೆಂಬಲದ ಬಗ್ಗೆ ಶಿವಣ್ಣ ಭಾವುಕ ಮಾತು
ಶಿವಣ್ಣನಿಗೆ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ
ಶಿವಣ್ಣನಿಗೆ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ
ಗಣರಾಜ್ಯೋತ್ಸವ: ಕರ್ತವ್ಯಪಥದಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ
ಗಣರಾಜ್ಯೋತ್ಸವ: ಕರ್ತವ್ಯಪಥದಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ
ಸೇಬಿನ ಹಾರ ಹಾಕಿ ಶಿವಣ್ಣನನ್ನು ಅದ್ಧೂರಿ ಸ್ವಾಗತಿಸಿದ ಅಭಿಮಾನಿಗಳು
ಸೇಬಿನ ಹಾರ ಹಾಕಿ ಶಿವಣ್ಣನನ್ನು ಅದ್ಧೂರಿ ಸ್ವಾಗತಿಸಿದ ಅಭಿಮಾನಿಗಳು
Video: ಯುದ್ಧ ಸ್ಮಾರಕದಲ್ಲಿ ವೀರ ಯೋಧರಿಗೆ ಪ್ರಧಾನಿ ಮೋದಿ ನಮನ
Video: ಯುದ್ಧ ಸ್ಮಾರಕದಲ್ಲಿ ವೀರ ಯೋಧರಿಗೆ ಪ್ರಧಾನಿ ಮೋದಿ ನಮನ