Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಗೋಳ ವಿಜ್ಞಾನದ ಏರಿಸ್ ತರಬೇತಿಯಲ್ಲಿ ಭಾಗವಹಿಸಿದ ಭಾರತದ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು

ವಿದ್ಯಾರ್ಥಿಗಳು, ಏರಿಸ್ ವಿಜ್ಞಾನಿಗಳು, ಪೋಸ್ಟ್ ಡಾಕ್ಟರಲ್ ಫೆಲೋಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳ ಜೊತೆ ಖಗೋಳ ವಿಜ್ಞಾನದಲ್ಲಿ ಭವಿಷ್ಯದಲ್ಲಿ ಲಭ್ಯವಾಗಲಿರುವ ಅವಕಾಶಗಳ ಕುರಿತು ಸಂವಾದ ನಡೆಸಿದರು.

ಖಗೋಳ ವಿಜ್ಞಾನದ ಏರಿಸ್ ತರಬೇತಿಯಲ್ಲಿ ಭಾಗವಹಿಸಿದ ಭಾರತದ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on:Aug 21, 2021 | 9:50 AM

ದೆಹಲಿ: ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ಸಾಮರ್ಥ್ಯ ಅಭಿವೃದ್ಧಿಗಾಗಿ ಆನ್​ಲೈನ್ ಮೂಲಕ ನಡೆಸಿದ ತರಬೇತಿ ಕಾರ್ಯಕ್ರಮದಲ್ಲಿ ಭಾರತದಾದ್ಯಂತ 25ಕ್ಕೂ ಅಧಿಕ ವಿಶ್ವವಿದ್ಯಾಲಯಗಳ ಸುಮಾರು 100 ವಿದ್ಯಾರ್ಥಿಗಳಿಗೆ ಖಗೋಳಶಾಸ್ತ್ರದ ನಾನಾ ಪಾಠಗಳ ಬಗ್ಗೆ ಪರಿಚಯಿಸಲಾಯಿತು. ಅವರಿಗೆ ದೂರದರ್ಶಕ, ನಕ್ಷತ್ರ ರಚನೆ, ವಿಕಸನ, ಎಕ್ಸೋಪ್ಲಾನೆಟ್ ಗಳು ಮತ್ತು ಖಗೋಳಭೌತಶಾಸ್ತ್ರ, ನಕ್ಷತ್ರ ಪುಂಜ ಮತ್ತು ನಕ್ಷತ್ರ ಖಗೋಳ ವಿಜ್ಷಾನ, ಏರೀಸ್​ನ ವೀಕ್ಷಣಾ ಸೌಕರ್ಯಗಳು, 30 ಮೀಟರ್ ದೂರದರ್ಶಕ ಯೋಜನೆ ಮತ್ತು ಆದಿತ್ಯ-1 ಬಾಹ್ಯಾಕಾಶ ಮಿಷನ್ ಮತ್ತಿತರ ಪಾಠಗಳ ಕುರಿತು ಮಾಹಿತಿ ನೀಡಲಾಯಿತು.

‘ಏರಿಸ್ ಖಗೋಳ ವಿಜ್ಞಾನದ ತರಬೇತಿ ಶಾಲೆ (ಎಟಿಎಸ್ಒಎ) -2021’ ಶೀರ್ಷಿಕೆಯಡಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಎಂಟು ದಿನಗಳ ಕಾಲ ನಡೆದ ತರಬೇತಿ ಕಾರ್ಯಕ್ರಮದಲ್ಲಿ ವಿವಿಧ ಖಗೋಳ ವಿಜ್ಞಾನದ ದತ್ತಾಂಶ ಪ್ರಕ್ರಿಯೆ ತಂತ್ರಗಳಾದ ಫೊಟೊಮಿಟ್ರಿ, ಸ್ಪೆಕ್ಟ್ರೊಸ್ಕೊಪಿ, ಪೊಲಾರಿಮಿಟ್ರಿ ಮತ್ತು ಯಂತ್ರೋಪಕರಣಗಳ ಕಲಿಕೆ ಕುರಿತಂತೆ ಪ್ರತಿ ದಿನ ಪ್ರಾತ್ಯಕ್ಷಿಕೆಗಳ ಮೂಲಕ ವಿವರ ನೀಡಲಾಯಿತು. ಇದನ್ನು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್​ಟಿ) ಅಡಿ ಬರುವ ಸ್ವಾಯತ್ತ ಸಂಸ್ಥೆ ಖಗೋಳ ವಿಜ್ಞಾನ ಕುರಿತ ಆರ್ಯಭಟ ರಾಷ್ಟ್ರೀಯ ಸಂಸ್ಥೆ (ಏರಿಸ್) ನಡೆಸಿತು.

ಉಪನ್ಯಾಸದ ಸಮಯದಲ್ಲಿ ವಿವರಿಸಲಾಗಿದ್ದ ಪರಿಕಲ್ಪನೆಗಳನ್ನು ಇನ್ನೂ ಚೆನ್ನಾಗಿ ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಲು ನೆರವಾಗುವಂತೆ ಈ ಪ್ರಾತ್ಯಕ್ಷಿಕೆ ಗೋಷ್ಠಿಗಳನ್ನು ರೂಪಿಸಲಾಗಿತ್ತು. ವಿದ್ಯಾರ್ಥಿಗಳು, ಏರಿಸ್ ವಿಜ್ಞಾನಿಗಳು, ಪೋಸ್ಟ್ ಡಾಕ್ಟರಲ್ ಫೆಲೋಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳ ಜೊತೆ ಖಗೋಳ ವಿಜ್ಞಾನದಲ್ಲಿ ಭವಿಷ್ಯದಲ್ಲಿ ಲಭ್ಯವಾಗಲಿರುವ ಅವಕಾಶಗಳ ಕುರಿತು ಸಂವಾದ ನಡೆಸಿದರು.

ಸದ್ಯದ ಜಗತ್ತು ಖಗೋಳ ವಿಜ್ಞಾನದ ತಿಳುವಳಿಕೆ ನಿರಂತರ ಬೆಳವಣಿಗೆಯ ಮೇಲೆ ಮಾತ್ರವಲ್ಲದೆ ಈ ಸೌಲಭ್ಯಗಳಿಂದ ಉಂಟಾಗುವ ದತ್ತಾಂಶವನ್ನು ಬಳಸುವ ಜನರನ್ನೂ ಸಹ ಅವಲಂಬಿಸಿರುತ್ತದೆ. ಈ ತಂತ್ರಜ್ಞಾನಗಳ ಬೆಳವಣಿಗೆಯೊಂದಿಗೆ ಪ್ರಪಂಚದಾದ್ಯಂತ ಮತ್ತು ಬಾಹ್ಯಾಕಾಶದಲ್ಲಿ ವಿವಿಧ ವಿದ್ಯುತ್ ಕಾಂತೀಯ ತರಂಗಾಂತರ ಬ್ಯಾಂಡ್ ಗಳಲ್ಲಿ ಹಲವಾರು ಕಾರ್ಯಾಚರಣೆ ಮತ್ತು ಮುಂಬರುವ ಖಗೋಳಶಾಸ್ತ್ರ ಸೌಕರ್ಯಗಳ ಬಗ್ಗೆ ತಿಳಿಯಬಹುದಾಗಿದೆ. ಈ ಸೌಕರ್ಯಗಳು ಭಾರೀ ಪ್ರಮಾಣದ ದತ್ತಾಂಶವನ್ನು ಸೃಷ್ಟಿಸುತ್ತವೆ. ಆ ದತ್ತಾಂಶವನ್ನು ಬಳಸಿಕೊಳ್ಳಲು ಮತ್ತು ಆಕಾಶಕಾಯಗಳನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಸಂಖ್ಯೆಯ ಸಂಶೋಧನಾ ವಿದ್ಯಾರ್ಥಿಗಳ ಅಗತ್ಯವಿದೆ.

ವಾರ್ಷಿಕವಾಗಿ ಇಂತಹ ತರಬೇತಿ ಶಾಲೆಗಳನ್ನು ನಡೆಸುವ ಮೂಲಕ ಯುವ ವಿದ್ಯಾರ್ಥಿಗಳಲ್ಲಿ ಆಪ್ಟಿಕಲ್ ತರಂಗಾಂತರಗಳಲ್ಲಿ ಖಗೋಳ ವಿಜ್ಞಾನದ ದತ್ತಾಂಶ ವಿಶ್ಲೇಷಣೆಗೆ ಪರಿಣಿತಿ/ ಕೌಶಲ್ಯವನ್ನು ಅಭಿವೃದ್ಧಿಪಡಿಸುವುದಲ್ಲದೆ, ಪ್ರತಿಭಾನ್ವಿತರ ತಂಡವನ್ನು ಸೃಷ್ಟಿಸುವುದು ಏರಿಸ್ ಗುರಿಯಾಗಿದೆ. ಆ ನಿಟ್ಟಿನಲ್ಲಿ ಎಟಿಎಸ್ಒಎ-2021 ಪ್ರಮುಖ ಹೆಜ್ಜೆಯಾಗಿದೆ. 2021ರ ಮೇ 17 ರಿಂದ 24ರ ವರೆಗೆ ಏರಿಸ್​ನಲ್ಲಿ ನಡೆದ ಈ ಕಾರ್ಯಕ್ರಮ 75ನೇ ಸ್ವಾತಂತ್ರ್ಯೋತ್ಸವ; ಆಜಾದಿ ಕ ಅಮೃತ ಮಹೋತ್ಸವದ ಸ್ಮರಣಾರ್ಥ ಕೈಗೊಂಡಿರುವ ಚಟುವಟಿಕೆಗಳ ಭಾಗವೂ ಆಗಿದೆ.

ಇದನ್ನೂ ಓದಿ: ಕೊರೊನಾ ವೇಳೆ ಮಕ್ಕಳಿಗೆ ಶಿಕ್ಷಣ ನೀಡಬೇಕು; ರಾಜ್ಯ ಸರ್ಕಾರಕ್ಕೆ ಬೇಡಿಕೆಯಿಟ್ಟ ರುಪ್ಸಾ

Published On - 10:05 pm, Tue, 25 May 21

ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಜಾಸ್ತಿ ಮಾಡಿಲ್ಲವೇ? ರೆಡ್ಡಿ
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಜಾಸ್ತಿ ಮಾಡಿಲ್ಲವೇ? ರೆಡ್ಡಿ
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ
ಸಿದ್ದರಾಮಯ್ಯ ಸರ್ಕಾರ ಭ್ರಷ್ಟವೆಂದು ನಾನು ಹೇಳಿಲ್ಲ: ಬಸವರಾಜ ರಾಯರೆಡ್ಡಿ
ಸಿದ್ದರಾಮಯ್ಯ ಸರ್ಕಾರ ಭ್ರಷ್ಟವೆಂದು ನಾನು ಹೇಳಿಲ್ಲ: ಬಸವರಾಜ ರಾಯರೆಡ್ಡಿ
ತಮಿಳುನಾಡುನಲ್ಲಿ ಮುಂದೊಂದು ದಿನ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಅಣ್ಣಾಮಲೈ
ತಮಿಳುನಾಡುನಲ್ಲಿ ಮುಂದೊಂದು ದಿನ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಅಣ್ಣಾಮಲೈ