AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೀರ್ಪು ವಿಳಂಬಕ್ಕೆ ಸುಪ್ರೀಂ ಬ್ರೇಕ್: ಹೈಕೋರ್ಟ್‌ಗಳಿಗೆ 3 ತಿಂಗಳ ಡೆಡ್‌ಲೈನ್, ಜಾಮೀನು ಸಿಕ್ಕರೆ ಅದೇ ದಿನ ಬಿಡುಗಡೆ

ಸುಪ್ರೀಂ ಕೋರ್ಟ್ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆ ತಂದಿದೆ. ಹೈಕೋರ್ಟ್‌ಗಳು ತೀರ್ಪು ಕಾಯ್ದಿರಿಸಿದ 3 ತಿಂಗಳೊಳಗೆ ಆದೇಶ ಪ್ರಕಟಿಸಬೇಕು. ಜಾಮೀನು ಆದೇಶಗಳಾದ ಕೂಡಲೇ ಅಂದೇ ಬಿಡುಗಡೆ ಕಡ್ಡಾಯ. ವೈಯಕ್ತಿಕ ಸ್ವಾತಂತ್ರ್ಯ ಮತ್ತು ತ್ವರಿತ ನ್ಯಾಯದಾನ ಖಚಿತಪಡಿಸಲು ಈ ಆದೇಶ ಮಾಡಲಾಗಿದ್ದು, ತೀರ್ಪುಗಳನ್ನು 24 ಗಂಟೆಯೊಳಗೆ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬೇಕು. ಇದು ಲಕ್ಷಾಂತರ ಜನರಿಗೆ ವರದಾನ.

ತೀರ್ಪು ವಿಳಂಬಕ್ಕೆ ಸುಪ್ರೀಂ  ಬ್ರೇಕ್: ಹೈಕೋರ್ಟ್‌ಗಳಿಗೆ 3 ತಿಂಗಳ ಡೆಡ್‌ಲೈನ್, ಜಾಮೀನು ಸಿಕ್ಕರೆ ಅದೇ ದಿನ ಬಿಡುಗಡೆ
ಸುಪ್ರೀಂಕೋರ್ಟ್​Image Credit source: Getty Images
ನಯನಾ ರಾಜೀವ್
|

Updated on: May 29, 2026 | 12:11 PM

Share

ನವದೆಹಲಿ, ಮೇ 29: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ತೀರ್ಪುಗಳು ಮತ್ತು ಜಾಮೀನು ಆದೇಶಗಳ ವಿಳಂಬಕ್ಕೆ ಮುಕ್ತಿ ಹಾಡಲು ಸುಪ್ರೀಂಕೋರ್ಟ್(Supreme Court)​ ಶುಕ್ರವಾರ ಒಂದು  ಮಹತ್ವದ ನಿರ್ದೇಶನ ನೀಡಿದೆ. ತೀರ್ಪು ನೀಡಲು ವಿಳಂಬ ಮಾಡುವುದರಿಂದ ದಾವೆದಾರರಿಗೆ ತುಂಬಲಾರದ ನಷ್ಟವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಎಲ್ಲಾ ಹೈಕೋರ್ಟ್‌ಗಳಿಗೆ ಕಟ್ಟುನಿಟ್ಟಾದ ಗಡುವನ್ನು ವಿಧಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಸಂವಿಧಾನದ 142 ನೇ ವಿಧಿಯಡಿ ತಮಗಿರುವ ವಿಶೇಷ ಅಧಿಕಾರವನ್ನು ಬಳಸಿ ಈ  ಆದೇಶಗಳನ್ನು ಹೊರಡಿಸಿದೆ.

3 ತಿಂಗಳೊಳಗೆ ತೀರ್ಪು ಕಡ್ಡಾಯ: ಹೈಕೋರ್ಟ್‌ಗಳು ಯಾವುದೇ ಪ್ರಕರಣದ ವಾದ-ಪ್ರತಿವಾದ ಆಲಿಸಿ ಆದೇಶವನ್ನು ಕಾಯ್ದಿರಿಸಿದ (Reserved) ದಿನಾಂಕದಿಂದ ಗರಿಷ್ಠ 3 ತಿಂಗಳ ಒಳಗಾಗಿ ಅಂತಿಮ ತೀರ್ಪನ್ನು ಪ್ರಕಟಿಸಬೇಕು.

ಜಾಮೀನು ಅರ್ಜಿಗಳಿಗೆ ವಿಶೇಷ ಆದ್ಯತೆ: ವೈಯಕ್ತಿಕ ಸ್ವಾತಂತ್ರ್ಯದ ಪ್ರಕರಣಗಳಲ್ಲಿ ತ್ವರಿತ ನಿರ್ಧಾರಗಳು ಅಗತ್ಯ. ಹೀಗಾಗಿ ಜಾಮೀನು ಅರ್ಜಿಗಳ ಆದೇಶಗಳನ್ನು ಅದೇ ದಿನ ಪ್ರಕಟಿಸಬೇಕು. ಒಂದು ವೇಳೆ ಆದೇಶ ಕಾಯ್ದಿರಿಸಿದರೆ, ಮರುದಿನವೇ ಅದನ್ನು ಪ್ರಕಟಿಸಿ, ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬೇಕು.

ಮತ್ತಷ್ಟು ಓದಿ: ಸುಪ್ರೀಂಕೋರ್ಟ್​ ಆದೇಶದಿಂದ ದರ್ಶನ್​​ಗೆ ಹೆಚ್ಚಿತು ಸಂಕಷ್ಟ; 2028ರವರೆಗೂ ಬರಲ್ಲ ಡಿ ಬಾಸ್ ಸಿನಿಮಾ?

ಅದೇ ದಿನ ಜೈಲಿನಿಂದ ಬಿಡುಗಡೆ: ಜಾಮೀನು ಅಥವಾ ಶಿಕ್ಷೆ ಅಮಾನತು ಆದೇಶ ಹೊರಬಿದ್ದ ತಕ್ಷಣ ಆ ಮಾಹಿತಿಯನ್ನು ಜೈಲು ಅಧಿಕಾರಿಗಳಿಗೆ ತ್ವರಿತವಾಗಿ ತಲುಪಿಸಬೇಕು. ಅಗತ್ಯ ಪ್ರಕ್ರಿಯೆಗಳನ್ನು ಮುಗಿಸಿ ವಿಚಾರಣಾಧೀನ ಕೈದಿಗಳನ್ನು ಅದೇ ದಿನ ಅಥವಾ ಹೆಚ್ಚೆಂದರೆ ಮರುದಿನವೇ ಜೈಲಿನಿಂದ ಬಿಡುಗಡೆ ಮಾಡಬೇಕು.

24 ಗಂಟೆಗಳಲ್ಲಿ ಅಪ್‌ಲೋಡ್: ಹೈಕೋರ್ಟ್‌ಗಳು ನೀಡುವ ಎಲ್ಲಾ ತೀರ್ಪುಗಳನ್ನು ಅವು ಪ್ರಕಟವಾದ 24 ಗಂಟೆಗಳ ಒಳಗೆ ಆಯಾ ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವುದು ಕಡ್ಡಾಯ.

ಆದೇಶದ ಹಿನ್ನೆಲೆ ಏನು? ಜಾರ್ಖಂಡ್ ಹೈಕೋರ್ಟ್‌ನಲ್ಲಿ ತೀರ್ಪುಗಳು ದೀರ್ಘಕಾಲದವರೆಗೆ ವಿಳಂಬವಾಗುತ್ತಿದ್ದ ವಿಷಯಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸುವಾಗ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ತೀರ್ಪಿನ ಕಾರ್ಯಕಾರಿ (Main) ಭಾಗವನ್ನು ಪ್ರಕಟಿಸುವ ದಿನಾಂಕವನ್ನೇ ಅಧಿಕೃತ ‘ತೀರ್ಪಿನ ದಿನಾಂಕ’ ಎಂದು ಪರಿಗಣಿಸಲಾಗುವುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಕೋರ್ಟ್ ಮಹತ್ವದ ಹೇಳಿಕೆ: ಹೈಕೋರ್ಟ್‌ಗಳು ಸಾವಿರಾರು ಜನರು ನ್ಯಾಯವನ್ನು ಬಯಸಿ ಬರುವ ಪ್ರಾಥಮಿಕ ಸಂಸ್ಥೆಗಳಾಗಿವೆ. ಇಲ್ಲಿ ಸಮಯಕ್ಕೆ ಸರಿಯಾಗಿ ತೀರ್ಪು ನೀಡುವುದು ಅತ್ಯಗತ್ಯ. ಈ ನಿಯಮಗಳು ಯಾವುದೇ ನ್ಯಾಯಾಧೀಶರು ಅಥವಾ ಸಂಸ್ಥೆಯ ಮೇಲೆ ಆಕ್ಷೇಪ ಹೇರಲು ಅಲ್ಲ, ಬದಲಿಗೆ ನ್ಯಾಯದಾನ ಪ್ರಕ್ರಿಯೆಯನ್ನು ವೇಗಗೊಳಿಸಲು ತರಲಾಗಿದೆ.

ಕೇಂದ್ರ ಮತ್ತು ರಾಜ್ಯಗಳ ಕೆಳ ನ್ಯಾಯಾಲಯಗಳಿಗೂ ನಿಯಮಿತ ಜಾಮೀನು ಆದೇಶಗಳ ಕುರಿತು ತಕ್ಷಣದ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ್ದು, ಈ ಆದೇಶದಿಂದಾಗಿ ದೇಶಾದ್ಯಂತ ಲಕ್ಷಾಂತರ ಜನರಿಗೆ ವರದಾನವಾಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More