ವಿಚಾರಣೆ ಮುಕ್ತಾಯ, ನಾಳೆ ಬೆಳಗ್ಗೆ ಆದೇಶ: ಅಲ್ಲೀವರೆಗೂ ಫಡ್ನವಿಸ್ ಸರ್ಕಾರ ಸೇಫ್!

ದೆಹಲಿ:ಮಹಾರಾಷ್ಟ್ರ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಕಾಂಗ್ರೆಸ್, ಎನ್​ಸಿಪಿ, ಶಿವಸೇನೆ ಪಕ್ಷಗಳು ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ಮುಕ್ತಾಯವಾಗಿದೆ. ನಾಳೆ ಬೆಳಗ್ಗೆ 10.30ಕ್ಕೆ ಆದೇಶ ಕಾಯ್ದಿರಿಸಿ, ಸುಪ್ರೀಂಕೋರ್ಟ್ ಇದೀಗತಾನೆ ವಿಚಾರಣೆ ಮುಕ್ತಾಯಗೊಳಿಸಿದೆ. ಸಂಖ್ಯಾಬಲ ಇಲ್ಲದಿದ್ದರೂ, ಆತುರಾತುರವಾಗಿ ಮಹಾರಾಷ್ಟ್ರದಲ್ಲಿ ಸರಕಾರ ರಚನೆ ಮಾಡಿರುವುದನ್ನು ಪ್ರಶ್ನಿಸಿ ಶಿವಸೇನೆ, ಕಾಂಗ್ರೆಸ್ ಮತ್ತು ಎನ್​ಸಿಪಿ ಮಿತ್ರ ಪಕ್ಷಗಳು ನಿನ್ನೆ ಕ್ಷಿಪ್ರಗತಿಯಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ನಿನ್ನೆ ರಜಾ ದಿನವಾದ ಭಾನುವಾರವೂ ವಿಶೇಷ ವಿಚಾರಣೆಗೆ ಅನುಮತಿಸಿದ್ದ ಕೋರ್ಟ್, ಇಂದು ಸೋಮವಾರ ವಿಚಾರಣೆ ಮುಂದುವರಿಸುವುದಾಗಿ ತಿಳಿಸಿತ್ತು. ಅದರಂತೆ ಇಂದು […]

ವಿಚಾರಣೆ ಮುಕ್ತಾಯ, ನಾಳೆ ಬೆಳಗ್ಗೆ ಆದೇಶ: ಅಲ್ಲೀವರೆಗೂ ಫಡ್ನವಿಸ್ ಸರ್ಕಾರ ಸೇಫ್!
ಸಾಧು ಶ್ರೀನಾಥ್​

Updated on: Nov 25, 2019 | 12:28 PM

ದೆಹಲಿ:ಮಹಾರಾಷ್ಟ್ರ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಕಾಂಗ್ರೆಸ್, ಎನ್​ಸಿಪಿ, ಶಿವಸೇನೆ ಪಕ್ಷಗಳು ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ಮುಕ್ತಾಯವಾಗಿದೆ. ನಾಳೆ ಬೆಳಗ್ಗೆ 10.30ಕ್ಕೆ ಆದೇಶ ಕಾಯ್ದಿರಿಸಿ, ಸುಪ್ರೀಂಕೋರ್ಟ್ ಇದೀಗತಾನೆ ವಿಚಾರಣೆ ಮುಕ್ತಾಯಗೊಳಿಸಿದೆ.

ಸಂಖ್ಯಾಬಲ ಇಲ್ಲದಿದ್ದರೂ, ಆತುರಾತುರವಾಗಿ ಮಹಾರಾಷ್ಟ್ರದಲ್ಲಿ ಸರಕಾರ ರಚನೆ ಮಾಡಿರುವುದನ್ನು ಪ್ರಶ್ನಿಸಿ ಶಿವಸೇನೆ, ಕಾಂಗ್ರೆಸ್ ಮತ್ತು ಎನ್​ಸಿಪಿ ಮಿತ್ರ ಪಕ್ಷಗಳು ನಿನ್ನೆ ಕ್ಷಿಪ್ರಗತಿಯಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ನಿನ್ನೆ ರಜಾ ದಿನವಾದ ಭಾನುವಾರವೂ ವಿಶೇಷ ವಿಚಾರಣೆಗೆ ಅನುಮತಿಸಿದ್ದ ಕೋರ್ಟ್, ಇಂದು ಸೋಮವಾರ ವಿಚಾರಣೆ ಮುಂದುವರಿಸುವುದಾಗಿ ತಿಳಿಸಿತ್ತು. ಅದರಂತೆ ಇಂದು ನ್ಯಾ. ರಮಣ ನೇತೃತ್ವದ ತ್ರಿಸದಸ್ಯ ವಿಶೇಷ ಪೀಠದಿಂದ ವಿಚಾರಣೆ ನಡೆಯಿತು. ತೀವ್ರ ವಾದ-ಪ್ರತಿವಾದದ ಬಳಿಕ, ಕೋರ್ಟ್​ ತೀರ್ಪು ಕಾಯ್ದಿರಿಸಿ ವಿಚಾರಣೆ ಮುಕ್ತಾಯಗೊಳಿಸಿದೆ.

Published On - 11:57 am, Mon, 25 November 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us