AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್ ಎರಡನೇ ಅಲೆಯಲ್ಲಿ ಸಂಭವಿಸಿದ ಎಲ್ಲ ಸಾವು ನಿರ್ಲಕ್ಷ್ಯದಿಂದಲೇ ಆಗಿದ್ದು ಎಂದು ಊಹಿಸುವಂತಿಲ್ಲ: ಸುಪ್ರೀಂಕೋರ್ಟ್

Supreme Court: ಕೊವಿಡ್​ನಿಂದಾಗಿ ಪ್ರತಿ ಸಾವು ನಿರ್ಲಕ್ಷ್ಯದಿಂದ ಸಂಭವಿಸಿದೆ ಎಂದು ಬಹಳಷ್ಟು ಊಹಿಸಲಾಗುತ್ತದೆ. ಎರಡನೇ ಅಲೆ ದೇಶದಾದ್ಯಂತ ಎಷ್ಟು ಪ್ರಭಾವ ಬೀರಿತು ಎಂದರೆ ಎಲ್ಲಾ ಸಾವುಗಳು ನಿರ್ಲಕ್ಷ್ಯದಿಂದ ಸಂಭವಿಸಿವೆ ಎಂದು ಊಹಿಸಲು ಸಾಧ್ಯವಿಲ್ಲ.

ಕೊವಿಡ್ ಎರಡನೇ ಅಲೆಯಲ್ಲಿ ಸಂಭವಿಸಿದ ಎಲ್ಲ ಸಾವು ನಿರ್ಲಕ್ಷ್ಯದಿಂದಲೇ ಆಗಿದ್ದು ಎಂದು ಊಹಿಸುವಂತಿಲ್ಲ: ಸುಪ್ರೀಂಕೋರ್ಟ್
ಸುಪ್ರೀಂ ಕೋರ್ಟ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Sep 08, 2021 | 4:13 PM

Share

ದೆಹಲಿ: ಕೊವಿಡ್ -19 (Covid 19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಕಾರಣದಿಂದ ಸಂಭವಿಸಿದ ಎಲ್ಲಾ ಸಾವುಗಳಿಗೆ ನಿರ್ಲಕ್ಷ್ಯ ಕಾರಣ ಎಂದು ಊಹಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಬುಧವಾರ ಹೇಳಿದೆ. ಇದು ವೈದ್ಯಕೀಯ ನಿರ್ಲಕ್ಷ್ಯ ಎಂದು ಪರಿಗಣಿಸಿ ಸಂತ್ರಸ್ತರ ಸಂಬಂಧಿಕರಿಗೆ ಪರಿಹಾರ ಕೋರಿ ಸಲ್ಲಿಸಿದ ಮನವಿಯನ್ನು ಸ್ವೀಕರಿಸಲು ನಿರಾಕರಿಸಿತು. ನ್ಯಾಯಾಲಯ ಮನವಿ ನಿರಾಕರಿಸಿದ ವೇಳೆ ಈ ರೀತಿ ಹೇಳಿದೆ. ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್, ವಿಕ್ರಮ್ ನಾಥ್ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಅರ್ಜಿದಾರ ದೀಪಕ್ ರಾಜ್ ಸಿಂಗ್ ಅವರ ಸಲಹೆಗಳೊಂದಿಗೆ ಸಮರ್ಥ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಕೇಳಿತು. ಕೊವಿಡ್​ನಿಂದಾಗಿ ಪ್ರತಿ ಸಾವು ನಿರ್ಲಕ್ಷ್ಯದಿಂದ ಸಂಭವಿಸಿದೆ ಎಂದು ಬಹಳಷ್ಟು ಊಹಿಸಲಾಗುತ್ತದೆ. ಎರಡನೇ ಅಲೆ ದೇಶದಾದ್ಯಂತ ಎಷ್ಟು ಪ್ರಭಾವ ಬೀರಿತು ಎಂದರೆ ಎಲ್ಲಾ ಸಾವುಗಳು ನಿರ್ಲಕ್ಷ್ಯದಿಂದ ಸಂಭವಿಸಿವೆ ಎಂದು ಊಹಿಸಲು ಸಾಧ್ಯವಿಲ್ಲ. ನಿಮ್ಮ ಅರ್ಜಿಯಲ್ಲಿ ಹೇಳಿದಂತೆ ಎಲ್ಲಾ ಕೊವಿಡ್ ಸಾವುಗಳು ವೈದ್ಯಕೀಯ ನಿರ್ಲಕ್ಷ್ಯದಿಂದ ಸಂಭವಿಸಿದವು ಎಂದು ನ್ಯಾಯಾಲಯಗಳಿಗೆ ಊಹಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಸುಪ್ರೀಂಕೋರ್ಟ್ ಜೂನ್ 30 ರ ಇತ್ತೀಚಿನ ತೀರ್ಪನ್ನು ಉಲ್ಲೇಖಿಸಿದೆ. ಇದರಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಕೊವಿಡ್ -19 ನಿಂದ ಸಾವನ್ನಪ್ಪಿದ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಜೀವ ಹಾನಿಯ ಕಾರಣದಿಂದ ಆರು ವಾರಗಳಲ್ಲಿ ಪರಿಹಾರಕ್ಕಾಗಿ ಸೂಕ್ತ ಮಾರ್ಗಸೂಚಿಗಳನ್ನು ಶಿಫಾರಸು ಮಾಡುವಂತೆ ಸೂಚಿಸಿತ್ತು.

ಆ ತೀರ್ಪಿನಲ್ಲಿ ನ್ಯಾಯಾಲಯವು ಮಾನವೀಯತೆಯ ದೃಷ್ಟಿಕೋನವನ್ನು ತೆಗೆದುಕೊಂಡಿದೆ ಮತ್ತು ನಿರ್ಲಕ್ಷ್ಯದಿಂದಲ್ಲ. ಸರ್ಕಾರವು ಇನ್ನೂ ನೀತಿಯನ್ನು ಹೊರತರಬೇಕಿದೆ. ನೀತಿಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನೀವು ಯಾವುದೇ ಸಲಹೆಯನ್ನು ಹೊಂದಿದ್ದರೆ, ನೀವು ಸಮರ್ಥ ಪ್ರಾಧಿಕಾರವನ್ನು ಸಂಪರ್ಕಿಸಬಹುದು ಎಂದು ಅದು ಹೇಳಿದೆ.

ಆರಂಭದಲ್ಲಿ ಅರ್ಜಿದಾರರ ಪರವಾಗಿ ಹಾಜರಾದ ವಕೀಲ ಶ್ರೀರಾಮ್ ಪರಕಟ್ ಅವರು ತಮ್ಮ ಅರ್ಜಿಯು ವಿಭಿನ್ನವಾಗಿದೆ ಎಂದು ಹೇಳಿದರು. ಏಕೆಂದರೆ ಇದು ವೈದ್ಯಕೀಯ ನಿರ್ಲಕ್ಷ್ಯದಿಂದ ಸಂಭವಿಸಿದ ಸಾವುಗಳಿಗೆ ನಿರ್ಲಕ್ಷ್ಯ ಮತ್ತು ಪರಿಹಾರದ ಅಂಶವನ್ನು ಗಣನೆಗೆ ತರುತ್ತದೆ.

ಮೇ ತಿಂಗಳಲ್ಲಿ ಅರ್ಜಿ ಸಲ್ಲಿಸಿದಾಗಿನಿಂದ, ಸಾಕಷ್ಟು ಬೆಳವಣಿಗೆಗಳು ನಡೆದಿವೆ ಎಂದು ಪೀಠವು ಗಮನಿಸಿದೆ. ನಾವು ಕೋವಿಡ್ ಸನ್ನದ್ಧತೆಯ ಮೇಲೆ ಸುಮೊಟೊ ಅರಿವನ್ನು ತೆಗೆದುಕೊಂಡಿದ್ದೇವೆ ಮತ್ತು ಈ ನ್ಯಾಯಾಲಯವು ರಾಷ್ಟ್ರೀಯ ಟಾಸ್ಕ್ ಫೋರ್ಸ್ ಅನ್ನು ರಚಿಸಿದೆ. ಇದು ಹಲವಾರು ಅಂಶಗಳನ್ನು ಪರಿಶೀಲಿಸುತ್ತಿದೆ ಎಂದು ಪೀಠ ಹೇಳಿದೆ.

ಇದು ಇಡೀ ದೇಶವನ್ನು ಪ್ರಭಾವಿಸಿದ ಅಲೆ ಮತ್ತು ನ್ಯಾಯಾಲಯವು ವೈದ್ಯಕೀಯ ನಿರ್ಲಕ್ಷ್ಯದ ಸಾಮಾನ್ಯ ಊಹೆಯನ್ನು ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಪರಕಟ್ ಅವರಿಗೆ ಹೇಳಿದೆ. ಅರ್ಜಿಯನ್ನು ವಿಲೇವಾರಿ ಮಾಡುವಾಗ ಅರ್ಜಿದಾರರು ತಮ್ಮ ಮನವಿಯನ್ನು ಹಿಂತೆಗೆದುಕೊಳ್ಳುವಂತೆ ಮತ್ತು ಅದನ್ನು ತಿದ್ದುಪಡಿ ಮಾಡುವಂತೆ ಮತ್ತು ಯಾವುದೇ ಸಲಹೆಗಳಿದ್ದರೆ ಅರ್ಜಿದಾರರು ಸಕ್ಷಮ ಪ್ರಾಧಿಕಾರವನ್ನು ಸಂಪರ್ಕಿಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಇದನ್ನೂ ಓದಿ:  Coronavirus cases in India: ಭಾರತದಲ್ಲಿ 35,875 ಹೊಸ ಕೊವಿಡ್ ಪ್ರಕರಣ ಪತ್ತೆ, 369 ಮಂದಿ ಸಾವು

ಇದನ್ನೂ ಓದಿ: ತಾಲಿಬಾನಿಗಳನ್ನು ಇನ್ನಿಲ್ಲದಂತೆ ಕಾಡುತ್ತಿರುವ ಅಫ್ಘಾನ್​ ಹೋರಾಟಗಾರರು; ಪರ್ಯಾಯ ಸರ್ಕಾರ ಘೋಷಣೆಗೆ ಸಿದ್ಧತೆ

(Supreme Court says courts cannot presume that all deaths due to COVID-19 in the second wave of the pandemic)