ತಿಲಕ, ಬಿಂದಿಗೆ ಏಕೆ ವಿನಾಯಿತಿ?; ಮುಂಬೈ ಕಾಲೇಜಿನಲ್ಲಿ ಹಿಜಾಬ್ ನಿಷೇಧಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ
ವಿದ್ಯಾರ್ಥಿಗಳಿಗೆ ತಮಗೆ ಬೇಕಾದುದನ್ನು ಧರಿಸಲು ಆಯ್ಕೆ ಇರಬೇಕು ಎಂದು ಹೇಳಿರುವ ಸುಪ್ರೀಂ ಕೋರ್ಟ್ ಬುರ್ಖಾ/ ಹಿಜಾಬ್ ನಿಷೇಧದ ಕುರಿತ ಮುಂಬೈನ ಚೆಂಬೂರ್ ಕಾಲೇಜಿನ ಸುತ್ತೋಲೆಗೆ ತಡೆ ನೀಡಿದೆ. ತಿಲಕ ಮತ್ತು ಬಿಂದಿ ಇಟ್ಟುಕೊಳ್ಳುವುದಕ್ಕೆ ಏಕೆ ವಿನಾಯಿತಿ ನೀಡಿದ್ದೀರಿ? ಎಂದು ಪ್ರಶ್ನೆ ಮಾಡಿದೆ.
ಮುಂಬೈ: ಮುಂಬೈನ ಕಾಲೇಜಿನ ಆವರಣದಲ್ಲಿ ಹಿಜಾಬ್, ಬುರ್ಖಾ, ಕ್ಯಾಪ್ ರೀತಿಯ ಉಡುಗೆಗಳನ್ನು ಧರಿಸುವುದನ್ನು ನಿಷೇಧಿಸಿ ಹೊರಡಿಸಿದ್ದ ಸುತ್ತೋಲೆಗೆ ಸುಪ್ರೀಂ ಕೋರ್ಟ್ ಇಂದು (ಶುಕ್ರವಾರ) ತಡೆ ನೀಡಿದೆ. ಆದರೆ, ತರಗತಿಯೊಳಗೆ ಹುಡುಗಿಯರು ಯಾವುದೇ ರೀತಿಯ ಬುರ್ಖಾವನ್ನು ಧರಿಸಲು ಅನುಮತಿ ನೀಡಲಾಗುವುದಿಲ್ಲ ಮತ್ತು ಕ್ಯಾಂಪಸ್‌ನಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಅನುಮತಿಯಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.
ಮಹಿಳಾ ಸಬಲೀಕರಣ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ಹಿಜಾಬ್‌ಗಳು, ಬುರ್ಖಾಗಳು, ಸ್ಟೋಲ್‌ಗಳು ಮತ್ತು ಕ್ಯಾಪ್‌ಗಳನ್ನು ಧರಿಸುವುದನ್ನು ನಿಷೇಧಿಸುವ ಮುಂಬೈ ಕಾಲೇಜಿನ ನಿಷೇಧಕ್ಕೆ ಇಂದು ಮಧ್ಯಂತರ ತಡೆಯಾಜ್ಞೆ ನೀಡಿದೆ.
ಇದನ್ನೂ ಓದಿ: ಕೋಚಿಂಗ್ ಸೆಂಟರ್‌ಗಳಿಂದ ಮಕ್ಕಳ ಜೀವನದ ಜೊತೆ ಚೆಲ್ಲಾಟ; ದೆಹಲಿ ದುರಂತದ ಕುರಿತು ಸುಪ್ರೀಂ ಕೋರ್ಟ್ ಅಸಮಾಧಾನ
ಈ ಮೂಲಕ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಹಿಜಾಬ್, ಮುಸುಕು, ಬುರ್ಖಾ, ಸ್ಟೋಲ್ ಮತ್ತು ಕ್ಯಾಪ್ ಧರಿಸುವುದನ್ನು ನಿಷೇಧಿಸಿದ ಮುಂಬೈ ಖಾಸಗಿ ಕಾಲೇಜಿನ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಮಹಿಳಾ ಸಬಲೀಕರಣಕ್ಕೆ ಇಂತಹ ನಿಷೇಧವು ಹೇಗೆ ಕೊಡುಗೆ ನೀಡುತ್ತದೆ ಎಂದು ನ್ಯಾಯಾಲಯವು ಕಾಲೇಜಿನ ವಿಧಾನವನ್ನು ಪ್ರಶ್ನಿಸಿದೆ. ಹಾಗೇ, ತಿಲಕ, ಬಿಂದಿಗೆ ಏಕೆ ವಿನಾಯಿತಿ ನೀಡಲಾಗಿದೆ? ಎಂದು ಪ್ರಶ್ನೆ ಮಾಡಿದೆ.
Supreme Court stays the circular of Chembur college by which it had banned students from wearing burqa, hijab, niqab, stole or cap on campus.
Supreme Court also issues notice to the college and posts the matter for hearing in November.
— ANI (@ANI) August 9, 2024
ವಿಚಾರಣೆ ವೇಳೆ ನ್ಯಾಯಾಲಯ ತನ್ನ ಕಳವಳವನ್ನು ವ್ಯಕ್ತಪಡಿಸಿ, “ಹೆಣ್ಣುಮಕ್ಕಳು ಧರಿಸುವುದನ್ನು ನಿರ್ಬಂಧಿಸುವ ಮೂಲಕ ನೀವು ಹೇಗೆ ಸಬಲೀಕರಣ ಮಾಡುತ್ತಿದ್ದೀರಿ? ದುರದೃಷ್ಟಕರ ಸಂಗತಿಯೆಂದರೆ, ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವೂ ನಾವು ಇನ್ನೂ ಚರ್ಚಿಸುತ್ತಿದ್ದೇವೆ.” ಎಂದಿದ್ದಾರೆ.
ಇದನ್ನೂ ಓದಿ: Viral Video: ಕಳ್ಳನೊಬ್ಬ ಬುರ್ಖಾ ಧರಿಸಿ ಜ್ಯುವೆಲ್ಲರಿ ಶಾಪ್ನಲ್ಲಿ ದರೋಡೆಗೆ ಯತ್ನ; ಸಿಸಿಟಿವಿ ವಿಡಿಯೋ ವೈರಲ್
ಸುಪ್ರೀಂ ಕೋರ್ಟ್‌ನ ಆದೇಶವು ನಿರ್ದಿಷ್ಟವಾಗಿ ಮಹಿಳಾ ವಿದ್ಯಾರ್ಥಿಗಳು ಹಿಜಾಬ್ ಅಥವಾ ಕ್ಯಾಪ್‌ಗಳನ್ನು ಧರಿಸುವುದರ ಮೇಲೆ ನಿರ್ಬಂಧಗಳನ್ನು ವಿಧಿಸಿದ ಕಾಲೇಜಿನ ಸುತ್ತೋಲೆಯ ಭಾಗವನ್ನು ತಡೆಹಿಡಿಯುತ್ತದೆ. ಕಾಲೇಜಿನ ನಿರ್ಧಾರವನ್ನು ಪ್ರಶ್ನಿಸಿ ಕೆಲವು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಇದಲ್ಲದೆ, ತನ್ನ ಆದೇಶವನ್ನು ಯಾವುದೇ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳಬಾರದು ಎಂದು ನ್ಯಾಯಾಲಯ ಒತ್ತಿ ಹೇಳಿದೆ. ಈ ವಿಷಯದ ಮುಂದಿನ ವಿಚಾರಣೆಯನ್ನು ನವೆಂಬರ್ 18ಕ್ಕೆ ಮುಂದೂಡಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:52 pm, Fri, 9 August 24